newsfirstkannada.com

ಅನಂತ್, ರಾಧಿಕಾ ಪ್ರೀ ವೆಡ್ಡಿಂಗ್.. ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Share :

Published June 1, 2024 at 1:38pm

  ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್ ಪ್ರೀ ವೆಡ್ಡಿಂಗ್ ಬಲು ಜೋರು

  ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್ ಸಮಾರಂಭ

  ಇಟಲಿಯ ಕ್ರೂಸ್​ನಲ್ಲಿ ನಡೆಯುತ್ತಿರುವ ಪ್ರೀ ವೆಡ್ಡಿಂಗ್​ಗೆ ಸ್ಟಾರ್​ ಗಣ್ಯರ ದೌಡು

ಭಾರತದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ 2ನೇ ಪ್ರೀ-ವೆಡ್ಡಿಂಗ್ ಕಾರ್ಯಕ್ರಮ ಇಟಲಿಯಲ್ಲಿ ನಡೆಯುತ್ತಿದೆ. ಈಗಾಗಲೇ ಬಾಲಿವುಡ್​ ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅಂಬಾನಿ ಕುಟುಂಬದ ಆತ್ಮೀಯರು ಕ್ರೂಸ್​ನಲ್ಲಿ ನಡೆಯುತ್ತಿರುವ ಅದ್ಧೂರಿ ಪ್ರೀ ವೆಡ್ಡಿಂಗ್​ನಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಎಣ್ಣೆ ಹೊಡೆದು ಸ್ಟಾರ್​ ಹೀರೋಯಿನ್​ ಜತೆ ಬಾಲಯ್ಯ ಅಸಭ್ಯ ವರ್ತನೆ.. ಈ ಬಗ್ಗೆ ನಟಿ ಅಂಜಲಿ ಏನಂದ್ರು?

ಇದೀಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​​ ಇಟಲಿಯ ಸಮುದ್ರ ತೀರದ ಮೇಲೆ ಅದರಲ್ಲೂ ಐಷಾರಾಮಿ ಹಡಗಿನಲ್ಲಿ 2ನೇ ಪ್ರೀ-ವೆಡ್ಡಿಂಗ್ ನಡೆಯುತ್ತಿದೆ. ಅತ್ತ ಬೃಹತ್ ಮದುವೆಗೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿರುವಾಗಲೇ, ಇತ್ತ ಪ್ರೀ ವೆಡ್ಡಿಂಗ್‌ನಲ್ಲಿ ಯಾವೆಲ್ಲಾ ಸೆಲೆಬ್ರಿಟಿಗಳಿಗೆ ಎಷ್ಟೇಷ್ಟು ಹಣ ಕೊಡಲಾಗಿದೆ ಅಂತ ಸಾಕಷ್ಟು ಜನರಲ್ಲಿ ಕುತೂಹಲ ಮನೆ ಮಾಡಿದೆ.

ಇದನ್ನೂ ಓದಿ: ಅನಂತ್ ಅಂಬಾನಿ, ರಾಧಿಕಾ ಮದ್ವೆ ಆಮಂತ್ರಣ ಪತ್ರಿಕೆ ರಿಲೀಸ್‌; ಅತಿಥಿಗಳಿಗೆ ಸ್ಪೆಷಲ್‌ ಡ್ರೆಸ್ ಕೋಡ್‌ ಕಡ್ಡಾಯ

ಇದರ ಮಧ್ಯೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್​​ 2ನೇ ಪ್ರಿ-ವೆಡ್ಡಿಂಗ್​ಗೆ ಜನಪ್ರಿಯ ಅಮೇರಿಕನ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಕ್ರೂಸ್ ಪಾರ್ಟಿಯಲ್ಲಿ ಪ್ರದರ್ಶನ ನೀಡಿದ್ದಾರೆ. ಇಟಲಿಯಲ್ಲಿ ಕ್ರೂಸ್‌ನಲ್ಲಿ ಅತಿಥಿಗಳಿಗಾಗಿ ಅವರು ಪ್ರದರ್ಶನ ನೀಡಿದ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ನಿಕ್ ಕಾರ್ಟರ್, ಹೋವಿ ಡೊರೊ, ಬ್ರಿಯಾನ್ ಲಿಟ್ರೆಲ್, ಎಜೆ ಮೆಕ್ಲೀನ್ ಮತ್ತು ಕೆವಿನ್ ರಿಚರ್ಡ್‌ಸನ್‌ರನ್ನು ಒಳಗೊಂಡ ಬ್ಯಾಂಡ್, ಬಿಳಿ ಬಟ್ಟೆಗಳನ್ನು ಧರಿಸಿ ಸಾಕಷ್ಟು ಗಣ್ಯರ ನಡುವೆ ಜನಪ್ರಿಯ ಟ್ರ್ಯಾಕ್ ‘ಐ ವಾಂಟ್ ಇಟ್ ದಟ್ ವೇ’ ಅನ್ನು ಪ್ರದರ್ಶನ ನೀಡಿದ್ದಾರೆ. ಸದ್ಯ 2 ಪ್ರೀ ವೆಡ್ಡಿಂಗ್​ನಲ್ಲಿ ಕಾರ್ಯಕ್ರಮ ಪ್ರದರ್ಶನ ನೀಡಿದ್ದಕ್ಕೆ ಅಮೇರಿಕನ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್​ಗೆ ಬರೋಬ್ಬರಿ 5 ರಿಂದ 7 ಕೋಟಿಯವರೆಗೆ ಹಣ ಸುರಿದಿದ್ದಾರೆ ಎಂದು ಹೇಳಲಾಗಿದೆ. ಜುಲೈ 12ರಂದು ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಂತ್, ರಾಧಿಕಾ ಪ್ರೀ ವೆಡ್ಡಿಂಗ್.. ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2024/06/ambani4.jpg

Load More