ಜನರಲ್ಲಿ ಜೀವ ಕಳೆದುಕೊಳ್ಳುವಂತಹ ವಿಚಾರಗಳು ಬರುವುದೇಕೆ
ಬದುಕನ್ನು ಮುಗಿಸಿಕೊಳ್ಳಲು ಅಣಿಯಾಗುವವರ ಲಕ್ಷಣಗಳು ಏನು?
ನಿಮ್ಮ ಆತ್ಮೀಯರಲ್ಲಿ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಎಚ್ಚರ
ಬದುಕು ಒಂದು ಸುಂದರ ಅನುಭವ. ಸಿಗುವ ಒಂದು ಬದುಕನ್ನು ಅಪ್ಯಾಯಮಾನವಾಗಿ ಪ್ರೀತಿಸಿಕೊಂಡು ಉತ್ಕಟವಾಗಿ ಬದುಕಿಬಿಡಬೇಕು ಎಂದು ಪ್ರಾಜ್ಞರು ಹೇಳುತ್ತಾರೆ. ಅದು ನಿಜವೂ ಕೂಡ ಸಮಸ್ಯೆಗಳಿಂದು ಮುಕ್ತವಾದ ಬದುಕು ಯಾರದೂ ಇಲ್ಲ. ಬದುಕಿನ ಬಂಡಿ ಎಳೆಯುವಾಗ ಏಳುಬೀಳುಗಳ, ಏರು ತಗ್ಗುಗಳು ಬರುವುದು ಸಾಮಾನ್ಯ. ಎಲ್ಲವನ್ನೂ ಸದಾ ಸವಾಲಾಗಿ ಸ್ವೀಕರಿಸಬೇಕು. ಆದ್ರೆ ಎಲ್ಲರೂ ಹಾಗಿರುವುದಿಲ್ಲ. ಈಗೀನ ತಲೆಮಾರು ಅಂತೂ ತೀರ ಸೂಕ್ಷ್ಮಗೊಂಡಿವೆ. ಸಣ್ಣ ಸಣ್ಣ ವಿಷಯಗಳನ್ನು ಬೆಟ್ಟದಷ್ಟು ದೊಡ್ಡದು ಮಾಡಿಕೊಂಡು, ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡು ಬಿಡುತ್ತಾರೆ. ಇನ್ನೂ ಕೆಲವರು ಈ ಬದುಕೇ ಸಾಕು ಎಂದು ಈ ಜಗತ್ತಿನಿಂದ ನಿರ್ಗಮಿಸಲು ಸಜ್ಜಾಗುತ್ತಾರೆ.
ಇದನ್ನೂ ಓದಿ:ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಫಳಫಳ ಹೊಳೆಯುತ್ತಾ?
ಇದಕ್ಕೆ ಕೇವಲ ಬದುಕಿನಲ್ಲಿ ಬರುವ ಕಷ್ಟಗಳು ಮಾತ್ರವಲ್ಲ. ಸಂಬಂಧಗಳನ್ನು ಕಳೆದುಕೊಳ್ಳುವ ಭಯವಿದ್ದವರೂ ಕೂಡ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮಾರ್ಕ್ಸ್ ಕಡಿಮೆ ಬಂತು ಅಂತ, ಗಂಡ ಆ್ಯನಿರರ್ಸಿರಿಗೋ ಬರ್ತ್ಡೇಗೋ ಗಿಫ್ಟ್ ತಂದು ಕೊಡಲಿಲ್ಲ ಅಂತ ಸಾವಿನ ದವಡೆಗೆ ತಮ್ಮ ಬದುಕು ಕೊಟ್ಟು ಮುಗಿಸಿಕೊಂಡು ಬಿಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಇಡೀ ವಿಶ್ವದಲ್ಲಿ ವರ್ಷಕ್ಕೆ 7 ಲಕ್ಷಕ್ಕೂ ಜನರು ತಮ್ಮ ಜೀವವನ್ನು ತಾವೇ ಕಳೆದುಕೊಳ್ಳುತ್ತಾರೆ ಎಂಬ ಅಂಕಿ ಅಂಶವನ್ನು ತೆರೆದಿಡುತ್ತದೆ. ಇದಕ್ಕಾಗಿಯೇ ವಿಶ್ವ ಆತ್ಮಹತ್ಯೆ ನಿಯಂತ್ರಣ ದಿನ ಎಂದು ಸೆಪ್ಟಂಬರ್ 10ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ಹೃದಯಾಘಾತದಿಂದ ಅಸುನೀಗಿದ ವಿಶ್ವದ ದೈತ್ಯ ಬಾಡಿಬಿಲ್ಡರ್; ಇಂತಹ ಅಪಾಯ ಇವರಲ್ಲಿಯೇ ಹೆಚ್ಚು ಕಾಣ್ತಿರೋದೇಕೆ..?
ಆತ್ಮಹತ್ಯೆಯಂತಹ ಮಾರಣಾಂತಿಕ ವಿಚಾರ ಬರುವವರ ಮಾನಸಿಕ ಲಕ್ಷಣಗಳು ಹೇಗಿರುತ್ತವೆ ಎಂದು ಮುಂಬೈನ ಎಸ್ಆರ್ವಿ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ ಆಶೀಶ್ ಗಾಂಬ್ರೆಯವರು ಹಲವು ಲಕ್ಷಣಗಳನ್ನು ಹೇಳಿದ್ದಾರೆ
ತೀವ್ರ ದುಃಖಿತರಾಗಿರುವುದು
ಸಾಮಾಜಿಕವಾಗಿ ದೂರ ಇರುವುದು
ಪ್ರಮುಖ ವಿಷಯಗಳಿಗೆ ಪ್ರಾಮುಖ್ಯತೆ ಕೊಡದಿರುವುದು
ಸಣ್ಣ ಸಣ್ಣ ವಿಷಯಗಳಿಗೆ ಕ್ಷಮೆ ಕೋರುವುದು
ಕ್ಷಣ ಕ್ಷಣಕ್ಕೂ ಬದಲಾವಣೆಯಾಗುವ ಮನಸ್ಥಿತಿ (MOOD SWING)
ಸದಾ ನಾನು ಇನ್ನೊಬ್ಬರಿಗೆ ಭಾರವಾಗಿದ್ದೇನೆ ಎಂಬ ಭಾವ
ಖಾಲಿತನ, ಭರವಸೆರಹಿತ ಬದುಕು
ಮದ್ಯಪಾನ ಧೂಮಪಾನದಂತಹ ಚಟಗಳಲ್ಲಿ ಹೆಚ್ಚು ಅವಲಂಬನೆ
ಅತಿಯಾದ ಒತ್ತಡದ ಬದುಕು, ಸಂಬಂಧಗಳಲ್ಲಿ ಒಡಕು ಹೀಗೆ ಹತ್ತು ಹಲವು ಕಾರಣಗಳು ಜೀವ ಕಳೆದುಕೊಳ್ಳು ನಿರ್ಧಾರಕ್ಕೆ ಪ್ರೇರಣೆಯಾಗುತ್ತವೆ. ಹೀಗಾಗಿ ನಿಮ್ಮಲ್ಲಿ ಈ ತರಹದ ಲಕ್ಷಣಗಳು ಬಂದಲ್ಲಿ ಅವುಗಳಿಂದ ದೂರ ಇರುವ ನಿರ್ಧಾರ ಮಾಡಬೇಕು. ಆ ಕ್ಷಣವನ್ನು ತಪ್ಪಿಸಬೇಕು. ಯೋಚನೆ ಬಂದ ತಕ್ಷಣ ಬೇರೆ ಚಟುವಟಿಕೆಯಲ್ಲಿ ತೊಡಗಬೇಕು ಆ ಒಂದು ಪೀಕ್ ಟೈಮ್ನ್ನು ತಪ್ಪಿಸಿಬಿಟ್ಟರೆ ಮತ್ತೆ ನಿಮ್ಮಲ್ಲಿ ಅಂತಹ ಯೋಚನೆಗಳು ಬರುವುದಿಲ್ಲ. ನಿಮ್ಮ ಅಕ್ಕಪಕ್ಕ, ನಿಮ್ಮ ಆತ್ಮೀಯರಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಲ್ಲಿ ಅವುಗಳನ್ನು ತಡೆಯುವ ನಿಟ್ಟಿನಲ್ಲಿ ನೀವು ಕೆಲವೊಂದು ಕೆಲಸ ಮಾಡಬೇಕಾಗುತ್ತೆ

ಅವರನ್ನು ಒಂಟಿಯಾಗಿ ಯಾವತ್ತೂ ಬಿಡಬೇಡಿ. ಅವರೊಂದಿಗೆ ಸ್ವಲ್ಪ ಸಮಯ ಕಳೆಯಿರಿ ಅವರಿಗೆ ಮನೋರೋಗ ತಜ್ಞರನ್ನು ಭೇಟಿಯಾಗುವಂತೆ ಸಲಹೆ ನೀಡಿ ಇಲ್ಲವೇ ನೀವೇ ಕರೆದುಕೊಂಡು ಹೋಗಿ
ಹಾಗಂತ ಎಲ್ಲರನ್ನೂ ಮನೋರೋಗ ತಜ್ಞರ ಬಳಿ ಎಳೆದುಕೊಂಡೇ ಹೋಗಬೇಕು ಅಂತಿಲ್ಲ. ಕೆಲವೊಮ್ಮೆ ಅವರ ಸಮಸ್ಯೆಯನ್ನು ನೀವೆ ಆತ್ಮೀಯವಾಗಿ ಆಲಿಸಿ ಅವರಿಗೆ ಕೊಂಚ ಧೈರ್ಯವನ್ನು ನೀಡುವುದರಿಂದ ಕೂಡ ಅವರು ಈ ಸಮಸ್ಯೆಯಿಂದ ದೂರವಾಗುತ್ತಾರೆ.
ಹೀಗೆ ಅವರನ್ನು ಆದಷ್ಟು ಆತ್ಮೀಯತೆಯಿಂದ ಕಾಣವುದರಿಂದ. ಅವರೆಡೆಗೆ ಒಂದು ಕಾಳಜಿಪೂರ್ವಕವಾದ ಭಾವನೆಯನ್ನು ವ್ಯಕ್ತಪಡಿಸುವುದರಿಂದ. ಅವರಿಗೊಂದು ಸಾಮಾಜಿಕ ಬೆಂಬಲ ಒದಗಿಸಿವುದರಿಂದ. ಚಟಗಳಿಂದ ದೂರ ಇರು ಎಂದು ಸಲಹೆ ನೀಡಿ ಅವರಿಗೆ ಬೇಕಾದ ವೈದ್ಯಕೀಯ ಸಹಾಯವನ್ನು ಒದಗಿಸುವುದರಿಂದ ಅವರನ್ನು ಜೀವ ಕಳೆದುಕೊಳ್ಳುವ ನಿರ್ಧಾರದಿಂದ ದೂರ ಇಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ