ಮೆಟಾ ಒಡೆತನದ ವಾಟ್ಸ್ಆ್ಯಪ್ನಲ್ಲಿರುವ ಈ ಆಯ್ಕೆ ಬಗ್ಗೆ ಗೊತ್ತಾ?
ವಾಟ್ಸ್ಆ್ಯಪ್ನಲ್ಲಿ HD ಫೋಟೋ ಸುಲಭವಾಗಿ ಕಳುಹಿಸಬಹುದು
HD ಫೋಟೋ ಕಳುಹಿಸುವ ಸುಲಭವಾದ ವಿಧಾನದ ಬಗ್ಗೆ ಮಾಹಿತಿ ಇಲ್ಲಿದೆ
ಮೆಟಾ ಒಡೆತನದ ಜನಪ್ರಿಯ ಆ್ಯಪ್ ವಾಟ್ಸ್ಆ್ಯಪ್ ವಿಶ್ವದಾದ್ಯಂತ ಬಹುಸಂಖ್ಯಾ ಬಳಕೆದಾರರನ್ನು ಹೊಂದಿದೆ. ದೈನಂದಿನ ವ್ಯವಹಾರದಿಂದ ಹಿಡಿದು ರಾತ್ರಿ ಗುಡ್ನೈಟ್ ಸಂದೇಶ ಕಳುಹಿಸುವವರೆಗೆ ವಾಟ್ಸ್ಆ್ಯಪ್ ಅನ್ನು ಅವಲಂಬಿತರಾದವರು ಅನೇಕರಿದ್ದಾರೆ. ಅದರಲ್ಲೂ ಭಾರತದಲ್ಲಿ ಬಹುಸಂಖ್ಯಾ ಜನರು ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಸಿದ್ಧಪಡಿಸಿದ ವಾಟ್ಸ್ಆ್ಯಪ್ಗೆ ಒಗ್ಗಿಕೊಂಡಿದ್ದಾರೆ.
ಆದರೆ ಬಹುತೇಕ ವಾಟ್ಸ್ಆ್ಯಪ್ ಬಳಕೆದಾರರು ಹೇಳಿಕೊಂಡ ಸಮಸ್ಯೆ ಎಂದರೆ ವಾಟ್ಸ್ಆ್ಯಪ್ನಲ್ಲಿ ಕಳುಹಿಸುವ ಫೋಟೋ, ವಿಡಿಯೋ ಕ್ಲಾರಿಟಿ ಕಳೆದುಕೊಳ್ಳುತ್ತದೆ. ಇದಕ್ಕಾಗಿ ಬಹುತೇಕರು ಡಾಕುಮೆಂಟ್ ಮೊರೆ ಹೋಗುತ್ತಾರೆ. ಆದರೆ ಇದರಿಂದ ಡೇಟಾ ಹೆಚ್ಚಾಗಿ ಖರ್ಚಾಗುತ್ತದೆ. ಆದರೆ ವಾಟ್ಸ್ಆ್ಯಪ್ ಬಳಕೆದಾರರಿಗೆ ಹೆಚ್ಚಿನ ಡೇಟಾ ಖರ್ಚು ಮಾಡದೆ ವಾಟ್ಸ್ಆ್ಯಪ್ನಲ್ಲಿ ಹೆಚ್ಡಿ ಫೋಟೋವನ್ನು ಕಳುಹಿಸಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಟ್ಸ್ಆ್ಯಪ್ನಲ್ಲಿ ಹೆಚ್ಡಿ ಫೋಟೋ ಕಳುಹಿಸಲು ಹೀಗೆ ಮಾಡಿ
ಹಂತ 1: ಮೊಬೈಲ್ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ ಬಳಿಕ ಚಾಟ್ ಥ್ರೆಡ್ ಆಯ್ಕೆ ಮಾಡಿ
ಹಂತ 2: ಆ್ಯಂಡ್ರಾಯ್ಡ್ನಲ್ಲಿ ಪೇಪರ್ಕ್ಲಿಪ್ ಮತ್ತು ಐಒಎಸ್ನಲ್ಲಿ ‘+’ ಇರುವ ಅಟ್ಯಾಚ್ಮೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ 3: ನೀವು ಹಂಚಿಕೊಳ್ಳುವ ಚಿತ್ರವನ್ನು ಆರಿಸಿ.
ಹಂತ 4: ಚಿತ್ರವನ್ನು ಆರಿಸಿದ ಬಳಿಕ ನಿಮಗೆ ಫೋಟೋದ ಮೇಲ್ಭಾಗದಲ್ಲಿ ‘HD’ ಬಟನ್ ಕಾಣಿಸುತ್ತದೆ. ನಂತರ ‘send’ ಬಟನ್ ಮೇಲೆ ಕ್ಲಿಕ್ ಮಾಡಿದರೆ ಹೆಚ್ಡಿ ರೂಪದಲ್ಲಿ ಫೋಟೋ ಸೆಂಡ್ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ