newsfirstkannada.com

ಫಸ್ಟ್​ ಹೆರಿಗೆ ನಂತರ ತಾಯಿ ಯಾವಾಗಿನಿಂದ ಮಗುವಿಗೆ ಹಾಲುಣಿಸಬೇಕು.. ಸ್ತನಪಾನದ ಮಹತ್ವ ಇಲ್ಲಿದೆ!

Share :

Published March 26, 2024 at 6:09pm

Update March 27, 2024 at 2:38pm

    ತಾಯಿ ಮತ್ತು ಶಿಶುವಿನ ನಡುವೆ ಸಂಬಂಧ ಹೇಗೆ ಏರ್ಪಡುತ್ತದೆ.?

    ಮೊದಲ ಬಾರಿ ತಾಯಿಯಾದ ಮಹಿಳೆಯರು ನೆಪ ಹೇಳ್ತಿರುತ್ತಾರೆ

    ಮಗು ಹುಟ್ಟಿದ ಮೇಲೆ ಯಾವಗಿನಿಂದ ಸ್ತನಪಾನ ಮಾಡಬೇಕು?

ಈ ಮೊಬೈಲ್​, ಕಂಪ್ಯೂಟರ್ ಯುಗದಲ್ಲಿ ನಾವು ಆರೋಗ್ಯ ಕಡೆಗಣಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆ ನಾವು ಆರೋಗ್ಯ ಪಾಲನೆ ಮಾಡುವುದನ್ನು ಮರೆತು ಬಿಡುತ್ತಿದ್ದೇವೆ. ಹೇಗೆಂದರೆ ಕೇವಲ ಒಂದೇ ಒಂದು ರೀಲ್ಸ್​ ನೋಡೋಣವೆಂದು ಮೊಬೈಲ್​ ಕೈಗೆತ್ತಿಕೊಂಡವರು ರೀಲ್ಸ್​​ ಮೇಲೆ ರೀಲ್ಸ್​.. ರೀಲ್ಸ್​​ ಮೇಲೆ ರೀಲ್ಸ್​​ ಅಂತ ಅರ್ಧ ದಿನನೇ ಕಳೆದು ಬಿಡುತ್ತೇವೆ. ಅದರಲ್ಲಿ ಮೊದಲ ಬಾರಿಗೆ ತಾಯಿಯಾದ ಮಹಿಳೆ, ಮಗುವಿಗೆ ಎದೆಹಾಲು ಕೊಡಬೇಕೋ, ಬೇಡ್ವೋ, ಮಗು ಹುಟ್ಟಿತಲ್ಲ ಎಲ್ಲ ಡಾಕ್ಟರ್​ ನೋಡ್ಕೋಳ್ಳುತ್ತಾರೆ ಅಂತ ಸುಮ್ಮನಿರುವುದಾ, ಎದೆಹಾಲು ಯಾವಾಗಿನಿಂದ ಕೊಡಬೇಕು ಎನ್ನುವ ಪ್ರಶ್ನೆಗಳಿಗೆ ಇವತ್ತಿನ ‘ಆರೋಗ್ಯ’ ಸಂಚಿಕೆಯಲ್ಲಿ ‘ಸ್ತನಪಾನ’ದ ಬಗ್ಗೆ ತಿಳಿಯೋಣ.

ಸಾಕಷ್ಟು ಮಹಿಳೆಯರು ಹಾಲುಣಿಸಲು ಎದೆಯಲ್ಲಿ ಹಾಲಿಲ್ಲ, ಮಗುವಿಗೆ ಹಾಲುಣಿಸಲು ಹೋದರೆ ಎದೆ ನೋವಾಗುತ್ತದೆ. ನಿದ್ದೆ ಬರುತ್ತಿಲ್ಲ, ಕಡಿಮೆ ಹಾಲು ಬರುತ್ತಿದೆ. ಇದು ಮಗುವಿಗೆ ಸಾಕಾಗುತ್ತಿಲ್ಲ ಎಂದು ಮೊದಲ ಬಾರಿಗೆ ತಾಯಿಯಾದ ಮಹಿಳೆಯರು ನೆಪ ಹೇಳುತ್ತಿರುತ್ತಾರೆ. ಇದಕ್ಕೆಲ್ಲ ಉತ್ತರ ನಮ್ಮಲ್ಲಿ ಇರುತ್ತದೆ. ಅದನ್ನು ಕಂಡುಕೊಳ್ಳಬೇಕು. ಹೌದು.. ಮೊದಲ ಬಾರಿಗೆ ತಾಯಿಯಾದ ಮಹಿಳೆ ಮಗು ಹುಟ್ಟಿದ ಕ್ಷಣದಿಂದಲೇ ಮಗುವಿಗೆ ಹಾಲುಣಿಸಬೇಕು. ಎದೆಯಲ್ಲಿ ಹಾಲು ಬಂದರು, ಬರದಿದ್ದರೂ ಸ್ತನಪಾನ ಮಾಡಲು ಮುಂದಾಗಬೇಕು. ಇದು ಹೆರಿಗೆಯಾದ ಪ್ರತಿ ಮಹಿಳೆಯ ಅವಿಭಾಜ್ಯ ಅಂಗವಾಗಿದೆ.

ಹೆರಿಗೆಯಾದ ಎರಡ್ಮೂರು ದಿನದಲ್ಲಿ ಎದೆಯಲ್ಲಿ ಹಾಲು ಉತ್ಪಾದನೆ ಆಗಲ್ಲ. ಇದಕ್ಕೆಲ್ಲ ಮಹಿಳೆಯರು ಏನೋ ಆಗಿದೆ ಎಂದು ಹೆದರಬಾರದು. ಮನೆಯವರು ಕೂಡ ಇದಕ್ಕೆ ಪುಷ್ಠಿ ಕೊಡಬಾರದು, ತಾಯಿಗೆ ಧೈರ್ಯ ಹೇಳಬೇಕು. ಹೆರಿಗೆಯಾದ ಮೇಲೆ ಪ್ಲಸಾಂಟಾ (ಮಾಸ್) ಹೊರ ಬಂದ ಮೇಲೆ ಎರಡ್ಮೂರು ದಿನದ ನಂತರ ಹಾಲು ಉತ್ಪಾದನೆಯಾಗುತ್ತದೆ. ಹಾಗಂತ ಎರಡ್ಮೂರು ದಿನದ ಮೇಲೆ ಹಾಲುಣಿಸೋಣ, ಆ ಮೇಲೆ ನೋಡಿದರಾಯಿತು ಎಂದು ಮಗುವಿಗೆ ಹಾಲು ಕೊಡದೇ ಇರುವುದು ತಪ್ಪು.

ಇದನ್ನೂ ಓದಿ: RCB vs PBKS; ಪಂಜಾಬ್​ ಸೋಲಿಗೆ ವಿರಾಟ್​ ಕೊಹ್ಲಿ ಕಾರಣನಾ.. ಸತ್ಯ ಬಾಯ್ಬಿಟ್ಟ ಗಬ್ಬರ್ ಶಿಖರ್ ಧವನ್​ -Video

ಗರ್ಭಿಣಿ ಹೆರಿಗೆಯಾದ ತಕ್ಷಣವೇ ಮಗುವಿಗೆ ಎದೆಹಾಲು ಕೊಡಲು ಪ್ರಾರಂಭಿಸಬೇಕು. ಎದೆಯಲ್ಲಿ ಹಾಲು ಇರದಿದ್ದರು ಹಾಲುಣಿಸುವುದು ಅಭ್ಯಾಸ ಮಾಡಿಸಬೇಕು. ಇದೇ ಅಭ್ಯಾಸ ತಾಯಿ ಮತ್ತು ಮಗುವಿನಲ್ಲಿ ನಿರಂತರವಾಗುತ್ತದೆ. ಇದು ರಿಪ್ಲೇಕ್ಷನ್ ಆಗುತ್ತದೆ. ಹೇಗೆಂದರೆ ಮಗು ಎದೆ ಚೀಪಲು ಪ್ರಾರಂಭಿಸಿದಾಗ ತಾಯಿಯ ಬ್ರೇನ್​ನಲ್ಲಿ ಹಾರ್ಮೋನ್ ಬಿಡುಗಡೆಯಾಗಿ ಹಾಲು ಉತ್ಪಾದನೆ ಆಗುವ ಆಕ್ಸಿಟೋಸಿನ್ ಹಾರ್ಮೋನ್​ನ ಉತ್ಪಾದನೆ ಹೆಚ್ಚಾಗುತ್ತದೆ. ಇದನ್ನೆ ಲೆಟ್​ ಡೌನ್​ ರಿಪ್ಲೇಕ್ಷನ್ ಎಂದು ಕರೆಯುತ್ತಾರೆ. ಇದರಿಂದ ಎದೆಯಲ್ಲಿ ಹಾಲು ತುಂಬಿಕೊಳ್ಳಲು ಆರಂಭಿಸುತ್ತದೆ. ಇದನ್ನೇ ತಾಯಿ ಮುಂದುವರೆಸಿಕೊಂಡು ಹೋದರೆ ದೊಡ್ಡ ಸಮಸ್ಯೆ ಸುಲಭವಾಗಿ ಪರಿಹಾರ ಆಗುತ್ತದೆ ಎಂದು ಹೇಳುತ್ತಾರೆ ಮಕ್ಕಳ ತಜ್ಞರು.

ಮಗುವಿಗೆ ಹಾಲುಕೊಡುವಾಗ ಕೆಲ ನಿಯಮಗಳು!

ಮೂರು ದಿನದ ನಂತರ ಹಾಲು ಬಂದರು ಹೆರಿಗೆ ದಿನದಿಂದ ಹಾಲುಕೊಡಬೇಕು
ಹಾಲು ಕುಡಿಸಿದ ತಕ್ಷಣ ಮಗುವನ್ನ ಹಾಗೇ ಮಲಗಿಸುವುದು ಒಳ್ಳೆಯದಲ್ಲ
ಮಗುವನ್ನ ನಾಲ್ಕರಿಂದ ಐದು ಗಂಟೆ ಮಲಗಲು ಬಿಡಬೇಡಿ, ಒಮ್ಮೆ ಎಬ್ಬಿಸಿ
ಯಾವಾಗಲೇ ಆಗಲಿ ಮಲಗಿದ್ದಲ್ಲೇ ತಾಯಿ ಎದೆಹಾಲು ಕೊಡಲೇಬಾರದು
ಕುಳಿತುಕೊಂಡು ಹಾಲು ಕುಡಿಸಿದ ಬಳಿಕ ಮಗುವನ್ನ ಎದೆ ಮೇಲೆ ಮಲಗಿಸಿಕೊಂಡು ಬೆನ್ನು ಸವರಿ

ವಿಶೇಷ ವರದಿ: ಭೀಮಪ್ಪ ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಸ್ಟ್​ ಹೆರಿಗೆ ನಂತರ ತಾಯಿ ಯಾವಾಗಿನಿಂದ ಮಗುವಿಗೆ ಹಾಲುಣಿಸಬೇಕು.. ಸ್ತನಪಾನದ ಮಹತ್ವ ಇಲ್ಲಿದೆ!

https://newsfirstlive.com/wp-content/uploads/2024/03/MILK_3.jpg

Load More