ಚಾರ್ಜ್ಶೀಟ್ನಲ್ಲಿ ವಿಜಯಲಕ್ಷ್ಮೀ ಹೇಳಿಕೆ ಉಲ್ಲೇಖ ಮಾಡಲಾಗಿದೆ
ಫೋನ್ ಮಾಡಿದಾಗ ವಿಜಯಲಕ್ಷ್ಮೀಗೆ ದರ್ಶನ್ ಹೇಳಿದ್ದೇನು?
ವಿಜಯಲಕ್ಷ್ಮಿ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಿರುವ ಪೊಲೀಸರು
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ಶೀಟ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವಿಜಯಲಕ್ಷ್ಮೀ ಅವರು, ತಮಗೆ ಪತಿ ದರ್ಶನ್ ಅರೆಸ್ಟ್ ಆಗಿರುವ ವಿಚಾರ ಹೇಗೆ ಗೊತ್ತಾಯಿತು ಅನ್ನೋ ವಿವರ ತಿಳಿಸಿದ್ದಾರೆ.
ವಿಜಯಲಕ್ಷ್ಮೀ ಅವರು ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಪ್ರಕಾರ.. ಜೂನ್ 8 ಕ್ಕೆ ಮಧ್ಯಾಹ್ನ ದರ್ಶನ್ಗೆ ಕರೆ ಮಾಡಿ, ಊಟಕ್ಕೆ ಬರ್ತೀರಾ ಅಂತ ಕೇಳಿದೆ. ಎಲ್ಲಿದ್ದೀರಿ ಅಂದಾಗ, RR ನಗರದ ವಿನಯ್ರ ಸ್ಟೋನಿ ಬ್ರೂಕ್ನಲ್ಲಿದ್ದೇನಂದ್ರು. ಹೋಟೆಲ್ನಲ್ಲಿ ತಮ್ಮ ಹುಡುಗರ ಜೊತೆ ಪಾರ್ಟಿ ಮಾಡುತ್ತಿರೋದಾಗಿ ಹೇಳಿದ್ರು. ಸಂಜೆ 6ಕ್ಕೆ ದರ್ಶನ್ಗೆ ಮತ್ತೆ ಕರೆ ಮಾಡಿದಾಗ, ಊಟ ಮಾಡಿದ್ದೇನೆ ಅಂದರು. ರಾತ್ರಿ 8 ಗಂಟೆಗೆ ಆರ್ಆರ್ ನಗರದ ಮನೆಗೆ ಊಟವನ್ನ ಕೊಟ್ಟು ಕಳುಹಿಸಿದ್ದೆ. ಊಟದ ವಿಚಾರ ಹೊರತುಪಡಿಸಿ ಬೇರೆ ಯಾವುವುದೇ ವಿಚಾರ ನನಗೆ ತಿಳಿಸಿಲ್ಲ. ರಾತ್ರಿ ಆರ್ಆರ್ ನಗರದ ಮನೆಯಲ್ಲೇ ಮಲಗೋದಾಗಿ ದರ್ಶನ್ ತಿಳಿಸಿದ್ದರು.
ಇದನ್ನೂ ಓದಿ:ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಸ್ಯಾಂಡಲ್ವುಡ್ನ ಇಬ್ಬರು ನಟಿಯರ ಹೆಸರು..!
ಸು‘ದರ್ಶನ’ ಹೋಮ
ಜೂ.9ಕ್ಕೆ ಸುದರ್ಶನ ನಮ್ಮ ಮನೆಯಲ್ಲಿ ಹೋಮ ಮತ್ತು ಪೂಜೆ ಇತ್ತು. 8 ಗಂಟೆ ಸುಮಾರಿಗೆ ದರ್ಶನ್ ಬಂದು, ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಊಟ ಮುಗಿಸಿ 2.30ಕ್ಕೆ ಶೂಟಿಂಗ್ಗೆ ಹೋಗಬೇಕಂದ್ರು. ತಮ್ಮ ಬಟ್ಟೆ, ಇತರೆ ವಸ್ತುಗಳು ಪ್ಯಾಕ್ ಮಾಡಬೇಕಂತ RR ನಗರ ಮನೆಗೋದ್ರು. ಸಂಜೆ 5ಕ್ಕೆ ಕರೆ ಮಾಡಿ, ಮೈಸೂರಿಗೆ ಹೋಗ್ತಿದ್ದು, ತೋಟಕ್ಕೆ ಹೋಗ್ತೀನಿ ಎಂದಿದ್ದರು.
ದರ್ಶನ್ ಅರೆಸ್ಟ್ ಕಹಾನಿ
ಜೂ.11ಕ್ಕೆ ಬೆಳಗ್ಗೆ 8 ಗಂಟೆಗೆ ದರ್ಶನ್ ಕರೆ ಮಾಡಿದ್ದರು, ಜಿಮ್ನಿಂದ ಬಂದಿದ್ದಾಗಿ ಹೇಳಿದ್ದರು. ನಾಷ್ಟ ಮುಗಿಸಿ ಶೂಟಿಂಗ್ಗೆ ಹೋಗುತ್ತೇನೆ ಎಂದು ದರ್ಶನ್ ಹೇಳಿದ್ದರು. ಬೆಳಗ್ಗೆ 9ಕ್ಕೆ ಮತ್ತೆ ಕರೆ ಮಾಡಿದಾಗ ಪೊಲೀಸರು ಅರೆಸ್ಟ್ ಮಾಡಿದ್ದಾಗಿ ತಿಳಿಸಿದರು. ನಾನು ಗಾಬರಿಯಾಗಿ, ಯಾಕೆ, ಏನಾಯ್ತು ಅಂತ ದರ್ಶನ್ಗೆ ಕೇಳಿದ್ದೆ. ರಾಜು, ಪವನ್ ಯಾವ್ದೋ ಹುಡುಗನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಹೆಚ್ಚು, ಕಡಿಮೆ ಮಾಡಿದ್ದು ಏನೋ ಆಗೋಗಿದೆ ಅಂತ ದರ್ಶನ್ ಹೇಳಿದರು.
ನನ್ನನ್ನ ಇನ್ವೆಸ್ಟಿಗೇಷನ್ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ, ನೀನೇನೂ ಕಾಲ್ ಮಾಡಬೇಡ ಎಂದರು. ಗಾಬರಿಯಿಂದ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್, ಮೈಸೂರಿನ ನಾಗುಗೆ ಕರೆ ಮಾಡಿದೆ. ನಾನು ಕರೆ ಮಾಡಿದಾಗ, ಅವರ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದವು. ದರ್ಶನ್‌ರ ಕಾಸ್ಟ್ಯೂಮ್ ಮ್ಯಾನ್ ನಾಗರಾಜುಗೆ ಕರೆ ಮಾಡಿ, ವಿಚಾರ ಕೇಳಿದೆ. ನನಗೆ ಏನೂ ಗೊತ್ತಿಲ್ಲ, ದರ್ಶನ್ಗಾಗಿ ಕಾಯುತ್ತಿರೋದಾಗಿ ನನಗೆ ಹೇಳಿದರು. ಟಿವಿ ನೋಡಿದಾಗ, ಕೊಲೆ ಕೇಸ್ನಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದು ತಿಳಿಯಿತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಪವಿತ್ರಾ ಗೌಡ ಬಂಡವಾಳ ಬಿಚ್ಚಿಟ್ಟ ದರ್ಶನ್ ಪತ್ನಿ; ನ್ಯೂಸ್ಫಸ್ಟ್ನಲ್ಲಿ ಹೇಳಿಕೆಯ Exclusive ಡಿಟೇಲ್ಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ