ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ
ಪ್ರಕರಣದ ವಿಚಾರಣೆ ನಡೆಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ
ಸಾಕ್ಷಿಯಾಗಿ ದರ್ಶನ್ ಪತ್ನಿ ಹೇಳಿಕೆ ಪಡೆದಿರುವ ಪೊಲೀಸರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿರುವ ಸಾಕ್ಷಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಾರ್ಜ್ಶೀಟ್ನಲ್ಲಿ ವಿಜಯಲಕ್ಷ್ಮಿ ನೀಡಿರುವ ಹೇಳಿಕೆಗಳನ್ನೂ ಪೊಲೀಸರು ಸಾಕ್ಷಿಯಾಗಿ ದಾಖಲಿಸಿದ್ದಾರೆ. ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟ ಮೇಲೆ ಆರೋಪಿ ದರ್ಶನ್ ಮನೆಗೆ ಹೋಗಿದ್ದರು. ಮನೆಯಲ್ಲಿ ತಮ್ಮ ಬಟ್ಟೆ, ಶೂಗಳನ್ನು ಅಲ್ಲೇ ಬಿಟ್ಟು ಬಂದಿದ್ದರು. ಈ ಸಂಬಂಧ ಪೊಲೀಸರು ದರ್ಶನ್ ನಿವಾಸಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದರು. ಜೊತೆಗೆ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹಾಗೆಯೇ ವಿಜಯಲಕ್ಷ್ಮಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಅಂಶಗಳು ಇಲ್ಲಿದೆ.
ವಿಜಯಲಕ್ಷ್ಮಿ ಹೇಳಿಕೆ
ನನ್ನ ಹೆಸರಲ್ಲಿರುವ ಫ್ಲ್ಯಾಟ್ಗೆ ಶೇಕಡಾ 25 ರಷ್ಟು ಹಣವನ್ನು ದರ್ಶನ್ ನೀಡಿದ್ದಾರೆ. ಶೇಕಡ 75 ರಷ್ಟು ಹಣವನ್ನು ಯೆಸ್ ಬ್ಯಾಂಕ್ನಿಂದ ಸಾಲ ಪಡೆದಿದ್ದೇನೆ. ನಾನು, ದರ್ಶನ್, ತಾಯಿ, ಮಗನ ಜೊತೆಯಲ್ಲಿ ವಾಸವಿದ್ದೇನೆ. 2003, ಮೇ 19ರಂದು ದರ್ಶನ್ ಜೊತೆ ವಿವಾಹವಾದೆ. ನಮಗೆ 2008ರಲ್ಲಿ ವಿನೀಶ್ ಎಂಬ ಗಂಡು ಮಗು ಹುಟ್ಟಿದೆ. ವೈಯಕ್ತಿಕ ವಿಚಾರಕ್ಕೆ ನನಗೂ, ದರ್ಶನ್ಗೂ ಜಗಳವಾಗಿತ್ತು. ನನಗೆ ಹಲ್ಲೆ ಮಾಡಿದ್ದರ ಬಗ್ಗೆ ವಿಜಯನಗರ ಠಾಣೆಯಲ್ಲಿ ದೂರು ನೀಡಿದ್ದೆ. ನಂತರ ನಾವು ನ್ಯಾಯಾಲಯದಲ್ಲಿ ರಾಜೀ ಮಾಡಿಕೊಂಡಿರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಕರಾಳ ಸತ್ಯ ಬಯಲು.. ಪೊಲೀಸರ ಮುಂದೆ ದಾಸ ಬಿಚ್ಚಿಟ್ಟ ಕಂಪ್ಲೀಟ್ ಸ್ಟೋರಿ..!
ಅ‘ಪವಿತ್ರಾ’ ದರ್ಶನ
2014ರ ಜುಲೈನಲ್ಲಿ ದರ್ಶನ್ ಮೊಬೈಲ್ನಲ್ಲಿ ಹುಡುಗಿಯ ಸಂಪರ್ಕ ಇರೋದು ಗೊತ್ತಾಗಿದೆ. ನಿರಂತರ ಸಂಪರ್ಕದಲ್ಲಿದ್ದಿದ್ದರಿಂದ ಪತಿಯ ಮೇಲೆ ಅನುಮಾನ ಬಂದಿತ್ತು. ಅವರು ಬೇರೆ ಯಾರೂ ಅಲ್ಲ. ಅಗಮ್ಯ ಸಿನಿಮಾದಲ್ಲಿ ನಟಿಸಿದ್ದ ಸ್ಮಿತಾ ಗೌಡ ಅಲಿಯಾಸ್ ಪವಿತ್ರಾ ಗೌಡ. ಸಿನಿಮಾದಲ್ಲಿರೋದ್ರಿಂದ ಯಾವುದೋ ವಿಚಾರಕ್ಕೆ ಕರೆ ಅಂದ್ಕೊಂಡಿದ್ದೆ. 2015ರಲ್ಲಿ ಒಬ್ಬ ಅಪರಿಚಿತ ಮಹಿಳೆ ನನಗೆ ಫೋನ್ ಮಾಡಿದ್ದರು. ನಿಮ್ಮ ಗಂಡ ದರ್ಶನ್ ನನ್ನ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆ. ಪದೇ ಪದೆ ನಮ್ಮ ಮನೆಗೆ ಬರುತ್ತಿರುತ್ತಾರೆ ಅಂತ ಹೇಳಿದ್ದರು. ನಮ್ಮ ಮನೆಗೆ ಬರದಂತೆ ಬುದ್ಧಿ ಹೇಳಿ ಅಂತಲೂ ಆಕೆ ಹೇಳಿದ್ದಳು. ನನಗೆ ಆಶ್ಚರ್ಯವಾಗಿ, ಅವ್ರಿಗೆ ಬೈದು ಫೋನ್ ಕಟ್ ಮಾಡಿದ್ದೆ ಎಂದು ಹೇಳಿದ್ದಾರೆ.
ದರ್ಶನ್ ಜೊತೆ ಜಗಳ
ಮಹಿಳೆಗೆ ಸಂಬಂಧಿಸಿ ಆಗಾಗ ನನಗೂ, ದರ್ಶನ್ಗೂ ಜಗಳವಾಗ್ತಿತ್ತು. 2018ರಲ್ಲಿ ದರ್ಶನ್, ಪವಿತ್ರಾಗೆ ಮನೆ ಖರೀದಿಸಿ ಕೊಟ್ಟ ಬಗ್ಗೆ ಮಾಹಿತಿ ಸಿಕ್ಕಿದೆ. ಆರ್ಆರ್ ನಗರದ ಕೆಂಚೇನಹಳ್ಳಿಯಲ್ಲಿ ಮನೆ ಖರೀದಿಸಿ ಕೊಟ್ಟಿದ್ದಾರೆ. ಅದೇ ವರ್ಷ ರೇಂಜ್ರೋವರ್ ಕಾರನ್ನೂ ಕೊಟ್ಟ ಬಗ್ಗೆ ಆಪ್ತರಿಂದ ಮಾಹಿತಿ ಇದೆ. ದರ್ಶನ್ ಬಳಿ ಕೇಳಿದಾಗ, ನನ್ನ ದುಡ್ಡು ನನ್ನಿಷ್ಟ ಅಂತ ಹೇಳಿದ್ದರು. ನೀನ್ಯಾರು ಕೇಳೋದಕ್ಕೆ ಅಂತ ದರ್ಶನ್ ನನಗೆ ಬೈದಿದ್ದರು. ಈ ವಿಚಾರದಲ್ಲೂ ನನಗೆ, ದರ್ಶನ್ಗೂ ವೈಮನಸ್ಸು ಏರ್ಪಟ್ಟಿರುತ್ತದೆ. ಆದ್ರೂ ನಾನು, ಪತಿ ದರ್ಶನ್ ಅನ್ಯೋನ್ಯವಾಗಿಯೇ ಇರುತ್ತಿದ್ದೆವು. ನನ್ನ ಜೊತೆ ಎಂದೂ ಪವಿತ್ರಾ ಗೌಡ ವಿಚಾರವನ್ನ ಹಂಚಿಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಡಿ-ಗ್ಯಾಂಗ್ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್, ಚಿಕ್ಕಣ್ಣ ಅಕ್ಕಪಕ್ಕ..
‘ಪವಿತ್ರಾ’ ಬ್ಲ್ಯಾಕ್ಮೇಲ್
ನನ್ನ ಆಪ್ತ ವಲಯದಿಂದ ದರ್ಶನ್ ಮತ್ತು ಪವಿತ್ರಾ ಬಗ್ಗೆ ಮತ್ತೆ ಮಾಹಿತಿ ಸಿಕ್ಕಿತ್ತು. ಖಾಸಗಿ ಫೋಟೋ ಮತ್ತು ವಿಡಿಯೋಗಳಿರುವ ಹಾರ್ಡ್ ಡಿಸ್ಕ್ ಸಿಕ್ಕಿತ್ತು. ಅದನ್ನ ಪವಿತ್ರಾ ಗೌಡ ತನ್ನ ತಾಯಿಯ ಮನೆಯಲ್ಲಿ ಇಟ್ಟುಕೊಂಡಿದ್ದಳು. ಮಾಧ್ಯಮಗಳಿಗೆ ನೀಡೋದಾಗಿ ದರ್ಶನ್ಗೆ ಬ್ಲ್ಯಾಕ್ಮೇಲ್ ಮಾಡ್ತಿದ್ಳು. ಈ ವಿಚಾರ ನನಗೆ ನನ್ನ ಆಪ್ತವಲಯದಿಂದ ತಿಳಿದು ಬಂದಿರುತ್ತದೆ.
‘ವಿಜಯ’ ದರ್ಶನ
2024ರ ಜನವರಿ 24ಕ್ಕೆ ದರ್ಶನ್ಗೆ ಸಂಬಂಧಿಸಿದಂತೆ ಪೋಸ್ಟ್ ಮಾಡಿದ್ದಳು. pavithragowda777 ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ದಶಕ ತುಂಬಿದೆ, 10 ವರ್ಷದ ಸಂಬಂಧಕ್ಕೆ ಧನ್ಯವಾದ ಅಂತ ಪೋಸ್ಟ್ ಮಾಡಿದ್ದಳು. ಆಗ ನಾನು ದರ್ಶನ್ ಖಾಸಗಿ ಭಾವಚಿತ್ರಗಳನ್ನ ಬಳಸಬಾರದೆಂದು ದಾವೆ ಹೂಡಿದ್ದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾವಚಿತ್ರ ಬಳಸಬಾರದೆಂದು ತಡೆಯಾಜ್ಞೆ ತಂದುಕೊಂಡೆ. ಬಳಿಕ ದರ್ಶನ್ ಜೊತೆಗಿನ ಯಾವ ಫೋಟೋ, ವಿಡಿಯೋ ಪೋಸ್ಟ್ ಮಾಡಿಲ್ಲ.
ಮೇ 8ಕ್ಕೆ ಆಗಿದ್ದೇನು?
ಮೇ 17ಕ್ಕೆ ದುಬೈನಲ್ಲಿ ದರ್ಶನ್ ಜೊತೆ ವಿವಾಹ ವಾರ್ಷಿಕೋತ್ಸವ ಆಚರಣೆ ಇತ್ತು. ಜೂ.8ಕ್ಕೆ ಮಧ್ಯಾಹ್ನ ದರ್ಶನ್ಗೆ ಕರೆ ಮಾಡಿ, ಊಟಕ್ಕೆ ಬರ್ತೀರಾ ಅಂತ ಕೇಳಿದ್ದೆ. ಎಲ್ಲಿದ್ದೀರಿ ಅಂದಾಗ, RR ನಗರದ ವಿನಯ್ರ ಸ್ಟೋನಿ ಬ್ರೂಕ್ನಲ್ಲಿದ್ದೇನಂದ್ರು. ಹೋಟೆಲ್ನಲ್ಲಿ ತಮ್ಮ ಹುಡುಗರ ಜೊತೆ ಪಾರ್ಟಿ ಮಾಡುತ್ತಿರೋದಾಗಿ ಹೇಳಿದ್ರು. ಸಂಜೆ 6ಕ್ಕೆ ದರ್ಶನ್ಗೆ ಮತ್ತೆ ಕರೆ ಮಾಡಿದಾಗ, ಊಟ ಮಾಡಿದ್ದೇನೆ ಅಂದರು. ರಾತ್ರಿ 8 ಗಂಟೆಗೆ ಆರ್ಆರ್ ನಗರದ ಮನೆಗೆ ಊಟವನ್ನ ಕೊಟ್ಟು ಕಳುಹಿಸಿದ್ದೆ. ಊಟದ ವಿಚಾರ ಹೊರತುಪಡಿಸಿ ಬೇರೆ ಯಾವುವುದೇ ವಿಚಾರ ನನಗೆ ದರ್ಶನ್ ತಿಳಿಸಿಲ್ಲ. ರಾತ್ರಿ ಆರ್ಆರ್ ನಗರದ ಮನೆಯಲ್ಲೇ ಮಲಗೋದಾಗಿ ದರ್ಶನ್ ತಿಳಿಸಿದ್ದರು.
ಸು‘ದರ್ಶನ’ ಹೋಮ
ಜೂ.9ಕ್ಕೆ ಸುದರ್ಶನ ನಮ್ಮ ಮನೆಯಲ್ಲಿ ಹೋಮ ಮತ್ತು ಪೂಜೆ ಇತ್ತು. 8 ಗಂಟೆ ಸುಮಾರಿಗೆ ದರ್ಶನ್ ಬಂದು, ಪೂಜೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಊಟ ಮುಗಿಸಿ 2.30ಕ್ಕೆ ಶೂಟಿಂಗ್ಗೆ ಹೋಗಬೇಕಂದ್ರು. ತಮ್ಮ ಬಟ್ಟೆ, ಇತರೆ ವಸ್ತುಗಳು ಪ್ಯಾಕ್ ಮಾಡಬೇಕಂತ RR ನಗರ ಮನೆಗೋದ್ರು. ಸಂಜೆ 5ಕ್ಕೆ ಕರೆ ಮಾಡಿ, ಮೈಸೂರಿಗೆ ಹೋಗ್ತಿದ್ದು, ತೋಟಕ್ಕೆ ಹೋಗ್ತೀನಿ ಎಂದಿದ್ದರು.
ಇದನ್ನೂ ಓದಿ: ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?
ದರ್ಶನ್ ಅರೆಸ್ಟ್ ಕಹಾನಿ
ಜೂ.11ಕ್ಕೆ ಬೆಳಗ್ಗೆ 8 ಗಂಟೆಗೆ ದರ್ಶನ್ ಕರೆ ಮಾಡಿದ್ದರು, ಜಿಮ್ನಿಂದ ಬಂದಿದ್ದಾಗಿ ಹೇಳಿದ್ದರು. ನಾಷ್ಟ ಮುಗಿಸಿ ಶೂಟಿಂಗ್ಗೆ ಹೋಗುತ್ತೇನೆ ಎಂದು ದರ್ಶನ್ ಹೇಳಿದ್ದರು. ಬೆಳಗ್ಗೆ 9ಕ್ಕೆ ಮತ್ತೆ ಕರೆ ಮಾಡಿ, ಪೊಲೀಸರು ಅರೆಸ್ಟ್ ಮಾಡಿದ್ದಾಗಿ ತಿಳಿಸಿದರು. ನಾನು ಗಾಬರಿಯಾಗಿ, ಯಾಕೆ, ಏನಾಯ್ತು ಅಂತ ದರ್ಶನ್ಗೆ ಕೇಳಿದ್ದೆ. ರಾಜು, ಪವನ್ ಯಾವ್ದೋ ಹುಡುಗನ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಹೆಚ್ಚು, ಕಡಿಮೆ ಮಾಡಿದ್ದು ಏನೋ ಆಗೋಗಿದೆ ಅಂತ ದರ್ಶನ್ ಹೇಳಿದರು. ನನ್ನನ್ನ ಇನ್ವೆಸ್ಟಿಗೇಷನ್ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು. ನನ್ನ ಫೋನ್ ಸ್ವಿಚ್ ಆಫ್ ಆಗುತ್ತೆ, ನೀನೇನೂ ಕಾಲ್ ಮಾಡಬೇಡ ಎಂದರು. ಗಾಬರಿಯಿಂದ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್, ಮೈಸೂರಿನ ನಾಗುಗೆ ಕರೆ ಮಾಡಿದೆ. ನಾನು ಕರೆ ಮಾಡಿದಾಗ, ಅವರ ಮೊಬೈಲ್ಗಳು ಸ್ವಿಚ್ ಆಫ್ ಆಗಿದ್ದವು. ದರ್ಶನ್‌ರ ಕಾಸ್ಟ್ಯೂಮ್ ಮ್ಯಾನ್ ನಾಗರಾಜುಗೆ ಕರೆ ಮಾಡಿ, ವಿಚಾರ ಕೇಳಿದೆ. ನನಗೆ ಏನೂ ಗೊತ್ತಿಲ್ಲ, ದರ್ಶನ್ಗಾಗಿ ಕಾಯುತ್ತಿರೋದಾಗಿ ನನಗೆ ಹೇಳಿದರು. ಟಿವಿ ನೋಡಿದಾಗ, ಕೊಲೆ ಕೇಸ್ನಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದು ತಿಳಿಯಿತು.
ಪೊಲೀಸರು ಶೂ ವಶಕ್ಕೆ ಪಡೆದ್ರು
ಜೂ.14ಕ್ಕೆ ಸಂಜೆ 6ಕ್ಕೆ ಮನೆಯಲ್ಲಿದ್ದಾಗ ಕಸ್ಟಮ್ ಮ್ಯಾನ್ ರಾಜು ಬಂದಿದ್ದರು. ಮೈಸೂರಿನ ಹೋಟೆಲ್ನವರು ದರ್ಶನ್ ವಸ್ತುಗಳನ್ನ ಕಳಿಸಿದ್ದಾರೆಂದು ಕೊಟ್ಟರು. ಅದೇ ದಿನ ಮಧ್ಯಾಹ್ನ ಪೊಲೀಸರು ತನಿಖೆಯ ಸಲುವಾಗಿ ಮನೆಗೆ ಬಂದ್ರು. ಜೂ.8ಕ್ಕೆ ಧರಿಸಿದ್ದ ಶೂಗಳನ್ನ ವಶಕ್ಕೆ ಪಡೆಯಲು ಪೊಲೀಸರು ಮನೆಗೆ ಬಂದಿದ್ರು. ಆ ವೇಳೆ, ಮಗ ಅಪ್ರಾಪ್ತನಾದ್ದರಿಂದ, ನನ್ನ ಮಗನಿಗೆ ತಿಳಿಯಬಾರದೆಂದು ತಿಳಿಸಿದೆ. ದರ್ಶನ್ ಧರಿಸುತ್ತಿದ್ದ 3 ಜೊತೆ ಶೂಗಳನ್ನ ಸೆಕ್ಯೂರಿಟಿ ಆಫೀಸ್ ಬಳಿ ಹಾಜರುಪಡಿಸಿದೆ. ನೀಲಿ ಬಣ್ಣದ ಶೂಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಜೂ.19ಕ್ಕೆ ವಿಚಾರಣೆಗೆ ಹಾಜರಾಗಲು ಪೊಲೀಸರಿಂದ ನೋಟಿಸ್ ಜಾರಿ ಮಾಡಿದ್ದರು. ನನ್ನ ಸಂಬಂಧಿ ಅನುಷಾ ಶೆಟ್ಟಿ ಜೊತೆಯಲ್ಲಿ ವಿಚಾರಣೆಗೆ ಬಂದಿದ್ದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ‘ಹೇಳಿದಷ್ಟು ಮಾಡು ಅಷ್ಟೇ’ ಎಂದಿದ್ದ ದರ್ಶನ್; ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಪವಿತ್ರಗೆ ಗೊತ್ತಾಗಿದ್ದೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ