ರೇಣುಕಾಸ್ವಾಮಿ ಪ್ರಕರಣದ ಚಾರ್ಜ್‌ಶೀಟ್ ಲಭ್ಯ
ಪ್ರಕರಣದ ಬಗ್ಗೆ ದರ್ಶನ್ ನೀಡಿರುವ ಹೇಳಿಕೆಗಳು ಏನು?
ದರ್ಶನ್ ಮತ್ತು ಪವಿತ್ರ ನಡುವಿನ ಸಂಬಂಧದ ಬಗ್ಗೆಯೂ ರಿವೀಲ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದು ಉಲ್ಲೇಖವಾಗಿರೋ ಒಂದೊಂದು ಅಂಶಗಳು ಬೆಚ್ಚಿಬೀಳಿಸುವಂತಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿದ್ದ ಅತಿಮಾನುಷ ಕೃತ್ಯ ನಿಜಾಂಶ ಬಯಲಾಗಿದೆ. ನಟ ದರ್ಶನ್ ಜೈಲಿನಲ್ಲಿ ಏಕಾಂಗಿಯಾಗಿದ್ದು ಚಾರ್ಜ್‌ಶೀಟ್ ಟೆನ್ಷನ್ ಹೆಚ್ಚಿಸಿದೆ. ಈ ಮಧ್ಯೆ ಡೆವಿಲ್ ಗ್ಯಾಂಗ್ ನ್ಯಾಯಾಂಗ ಬಂಧನದ ಅವಧಿ ಮತ್ತೆ 3 ದಿನಗಳ ಕಾಲ ವಿಸ್ತರಣೆಯಾಗಿದೆ.
ಡಿಗ್ಯಾಂಗ್ ಕ್ರೂರ ಚರಿತ್ರೆಯ ಚಾರ್ಜ್‌ಶೀಟ್ ಲಭ್ಯ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ನಲ್ಲಿ ಒಂದೊಂದೇ ಕ್ರೂರ ಸತ್ಯಗಳ ದರ್ಶನ ಆಗ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ 3,991 ಪುಟಗಳ ಆರೋಪ ಪಟ್ಟಿಯ ಪ್ರತಿ ನ್ಯೂಸ್ ಫಸ್ಟ್ಗೆ ಲಭ್ಯ ಆಗಿದೆ. ಕೊಲೆಯಲ್ಲಿ ದಾಸನ ಪಾತ್ರದ ಕಂಪ್ಲೀಟ್ ಕಹಾನಿ ರಿವೀಲ್ ಆಗಿದೆ. ಕೊಲೆಯ ಬಗ್ಗೆ ದರ್ಶನ್ ಕೊಟ್ಟಿರೋ ಸ್ವ-ಇಚ್ಛಾ ಹೇಳಿಕೆಯ ಪಿನ್ ಟು ಪಿನ್ ಮಾಹಿತಿ ಲಭ್ಯವಾಗಿದೆ. ರೇಣುಕಾಸ್ವಾಮಿಗೆ ಹೇಗೆಲ್ಲಾ ಹಿಂಸೆ ಕೊಡಲಾಗಿತ್ತು ಎಂಬ ಮಾಹಿತಿ ಬಯಲಾಗಿದೆ.
ದರ್ಶನ್ ಹೇಳಿಕೆ ಏನು..?
ದಿನಾಂಕ 08-06-2024 ರಂದು ಶನಿವಾರ ಪ್ರದೋಷ್, ನಾಗರಾಜ್ ಜೊತೆಗೆ ರಾಜರಾಜೇಶ್ವರಿನಗರದಲ್ಲಿರುವ ಸ್ಟೋನಿ ಬ್ರೂಕ್ಸ್ ರೆಸ್ಟೋರೆಂಟ್‌ಗೆ ಹೋಗಿದ್ದೆ. ಮಧ್ಯಾಹ್ನ 03-00 ಗಂಟೆಯಲ್ಲಿ ಪವನ್ ನನ್ನ ಬಳಿ ಬಂದು ತನ್ನ ಮೊಬೈಲನ್ನು ನನಗೆ ತೋರಿಸಿ ಯಾವನೋ ಒಬ್ಬ Gautham s ಎಂಬ ಹೆಸರಿನ ಇನ್ಸ್‌ಟಾಗ್ರಾಂ ಖಾತೆಯಿಂದ ಪವಿತ್ರ ಅಕ್ಕನಿಗೆ ತನ್ನ ಖಾಸಗಿ ಅಂಗಾಂಗಳ ಚಿತ್ರಗಳನ್ನು ಕಳುಹಿಸುತ್ತಿದ್ದಾನೆ. ಪವಿತ್ರಾ ಅಕ್ಕನಿಗೆ ನಿನ್ನ ರೇಟ್ ಎಷ್ಟು?. ನಾನು ರೂಂ ಮಾಡುತ್ತೇನೆ. ನೀನು ಬಾ. ನಾನು ದರ್ಶನ್‌ಗಿಂತ ಚೆನ್ನಾಗಿದ್ದೇನೆ ಅಂತ ಮೆಸೇಜ್ ಮಾಡಿದ್ದನ್ನ ತೋರಿಸಿದ್ದ. ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಪಾರ್ಕಿಂಗ್ ಶೆಡ್‌ನಲ್ಲಿ ಇಟ್ಟಿರೋದಾಗಿ ಹೇಳಿದ. ಆಗ ನಾನು ಪವಿತ್ರಾಗೆ ಕಾಲ್ ಮಾಡಿ ಸ್ಟೋನಿ ಬ್ರೂಕ್ಸ್‌ನಿಂದ ಊಟವನ್ನು ಕಳುಹಿಸಿದ್ದೆ. ಪವಿತ್ರಾ ಊಟ ಮಾಡುವ ಸಮಯದಲ್ಲಿ ವಿಡಿಯೋ ಕಾಲನ್ನು ಮಾಡಿ ಮಾತನಾಡಿರುತ್ತೇನೆ. ಊಟ ಮಾಡಿದ ನಂತರ ಯಾರ್ಡ್‌ಗೆ ಹೋಗಿ ಅವನನ್ನು ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದು ತಿಳಿಸಿರುತ್ತೇನೆ- ದರ್ಶನ್, 2ನೇ ಆರೋಪಿ
ಇದಾದ ಬಳಿಕ ದರ್ಶನ್, ವಿನಯ್, ಪ್ರದೂಶ್ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಪವಿತ್ರಾನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ಯುತ್ತಾರೆ. ನಾವು ವಾಹನಗಳಿಂದ ಕೆಳಗೆ ಇಳಿದು ಒಳಗೆ ಹೋದಾಗ ಪವಿತ್ರಾ ಅಕ್ಕಗೆ ತನ್ನ ಖಾಸಗಿ ಅಂಗದ ಚಿತ್ರಗಳನ್ನ ಕಳುಹಿಸಿದ ವ್ಯಕ್ತಿ ಇವನೇ ಎಂದು ಪವನ್ ಹೇಳಿದ. ನಾನು ಆತನಿಗೆ ಇದನ್ನು ಕಳುಹಿಸಿರುವುದು ನೀನೇನಾ ಎಂದು ಕೇಳಿದೆ. ಅದಕ್ಕೆ ಅವನು ಹೌದು ನಾನೇ ಎಂದ. ಇದು ನಿನಗೆ ಬೇಕಾ. ನಿನ್ನ ಸಂಬಳ ಎಷ್ಟು ಎಂದು ಕೇಳಿದೆ 20 ಸಾವಿರ ಎಂದು ಹೇಳಿದ. ನಿನಗೆ ತಿಂಗಳಿಗೆ 20 ಸಾವಿರ ಸಂಬಳ. ನನ್ನ ಮಗನೇ ನೀನು ಇವಳನ್ನು ಮೈಂಟೆನ್ ಮಾಡಲು ಸಾಧ್ಯನಾ? ಈ ರೀತಿಯಾಗಿ ಬಾ ಎಂದು ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ಲ ಎಂದು ಕೇಳಿದೆ. ಅಲ್ಲದೇ ಕೈನಿಂದ ಹೊಡೆದೆ, ಕಾಲಿನಿಂದ ಎದೆ, ಕುತ್ತಿಗೆ, ತಲೆಗೆ ಬಲವಾಗಿ ಹೊಡೆದೆ. ಬಾಗಿದ್ದ ಮರದ ಕೊಂಬೆ ಮುರಿದು ಅದರಲ್ಲೂ ಆತನಿಗೆ ಹೊಡೆದೆ. ಆಗ ಲಕ್ಷ್ಮಣ್ ಅಣ್ಣ ಇವನು ಚಾಳಿ ಬಿದ್ದವನ್ನು ಬಹಳ ಕೆಟ್ಟ ಕೆಟ್ಟದಾಗಿ ಮೆಸೇಜ್‌ಗಳನ್ನು ಅಕ್ಕನಿಗೆ ಕಳುಹಿಸಿದ್ದಾನೆ. ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲ ಎಂದು ಹೇಳಿ ನನಗೂ ಫೋಟೋ ಮತ್ತು ಮೆಸೇಜನ್ನು ತೋರಿಸಿದನು. ಆಗ ನಾನು ಅವನಿಗೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ. ಕಾರಿನಲ್ಲಿ ಕುಳಿತಿದ್ದ ಪವಿತ್ರಾ ಕರೆದು ಚಪ್ಪಲಿಯಲ್ಲಿ ಹೊಡೆಯುವಂತೆ ಹೇಳಿದೆ. ಆಗ ಆಕೆ ಹೊಡೆದಿದ್ದು, ಆಕೆಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ದರ್ಶನ್ ತಿಳಿಸಿದ್ದಾರೆ.
ಇದನ್ನೂ ಓದಿ: ‘ಹೇಳಿದಷ್ಟು ಮಾಡು ಅಷ್ಟೇ’ ಎಂದಿದ್ದ ದರ್ಶನ್; ರೇಣುಕಾಸ್ವಾಮಿ ಸಾವನ್ನಪ್ಪಿದ ವಿಚಾರ ಪವಿತ್ರಗೆ ಗೊತ್ತಾಗಿದ್ದೇಗೆ..?
ಬಳಿಕ ದರ್ಶನ್ ಮನೆಗೆ ಹೋದ ಮೇಲೆ ರೇಣುಕಾಸ್ವಾಮಿ ಸತ್ತಿರೋ ವಿಚಾರ ರಾತ್ರಿ 7.30ರ ಸುಮಾರಿಗೆ ಪವನ್‌ನಿಂದ ನನಗೆ ತಿಳಿಯುತ್ತೆ. ಆತ ಚೆನ್ನಾಗೇ ಇದ್ದನಲ್ಲಾ ಹೇಗೆ ಸತ್ತ ಎಂದು ಈ ವೇಳೆ ದರ್ಶನ್ ವಿಚಾರಿಸಿದ್ನಂತೆ. ಇದಾದ ಬಳಿಕ ನಡೆದಿದ್ದೇ ಸಾಕ್ಷ್ಯ ನಾಶದ ಕಹಾನಿ.. 30 ಲಕ್ಷ ರೂಪಾಯಿ ಕೊಟ್ಟು ಕೇಸ್ ಕ್ಲೋಸ್ ಮಾಡಿಸೋಕೆ ದರ್ಶನ್ ಮಾಡಿದ ಆಟ ಎಲ್ಲವೂ ಈಗಾಗಲೇ ರಿವೀಲ್ ಆಗಿದೆ. ಇದಷ್ಟೇ ಅಲ್ಲ.. ದರ್ಶನ್ ಮತ್ತು ಪವಿತ್ರಾಗೌಡಳ ನಡುವಿನ ಸಂಬಂಧವೇನು ಅನ್ನೋದು ದರ್ಶನ್ ಮೂಲಕವೇ ಬಹಿರಂಗವಾಗಿದೆ. ಜೊತೆಗೆ ಡೆವಿಲ್ ಗ್ಯಾಂಗ್‌ನ ಇತಿಹಾಸವನ್ನೂ ಬಿಚ್ಚಿಟ್ಟಿದ್ದಾರೆ.
ಪವಿತ್ರಾ ಜೊತೆ ಸಹ‘ದಾಸ’!
ಕಳೆದ 10 ವರ್ಷಗಳಿಂದ ಪವಿತ್ರಾ ಜೊತೆ ದರ್ಶನ್ ಲಿವ್ ಇನ್ ರಿಲೇಷನ್ಶಿಪ್ ಅಲ್ಲಿ ಇದ್ದ ಅನ್ನೋದು ಆತನ ಮೂಲಕವೇ ಗೊತ್ತಾಗಿದೆ. ದಾಸನ ಆರ್ಆರ್ ನಗರದ ಮನೆಯಿಂದ 1.5 ಕಿ.ಮೀ. ದೂರದಲ್ಲಿ ಪವಿತ್ರಾಗೌಡ ಮನೆಯಿದೆ. ಕಳೆದ 8 ವರ್ಷದಿಂದ ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಪವನ್ ಕೆಲಸ ಮಾಡ್ತಿದ್ದ ಅಂತ ದರ್ಶನ್ ಹೇಳಿಕೊಂಡಿದ್ದಾನೆ. ಇನ್ನೂ ನಂದೀಶ್ ಆಗಾಗ ನನ್ನ ಮನೆಯ ಬಳಿ ಬರುತ್ತಿದ್ದ, ನನ್ನ ಅಭಿಮಾನಿ. ಲಕ್ಷ್ಮಣ್ 15 ವರ್ಷಗಳಿಂದ ನನ್ನ ಬಳಿ ಕಾರ್ ಡ್ರೈವರ್ ಆಗಿದ್ದಾರೆ. ವಿನಯ್ 3-4 ವರ್ಷಗಳಿಂದ ಕಾಮನ್ ಫ್ರೆಂಡ್ಗಳಿಂದ ಪರಿಚಯ ಆದವರು. ನಾಗರಾಜ್ ಮೈಸೂರಿನ ಫಾರ್ಮ್ ಹೌಸ್ನ ನೋಡಿಕೊಳ್ಳುತ್ತಾರೆ ಅಂತ ದರ್ಶನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?
ಜೈಲಿನಲ್ಲಿ ಏಕಾಂಗಿ.. ದಾಸನಿಗೆ ಚಾರ್ಜ್‌ಶೀಟ್ ಸಂಕಷ್ಟ!
ಬಳ್ಳಾರಿ ಜೈಲಿನ ಹೈಸೆಕ್ಯೂರಿಟಿ ಸೆಲ್ನಲ್ಲಿ ನಟ ದರ್ಶನ್ ಏಕಾಂಗಿಯಾಗಿದ್ದು ಚಾರ್ಜ್‌ಶೀಟ್ ಮತ್ತಷ್ಟು ಸಂಕಷ್ಟ ತಂದಿದೆ. ಚಾರ್ಜ್‌ಶೀಟ್ ಟೆನ್ಷನ್ನಲ್ಲೇ ಜೈಲೊಳಗೆ ಕಾಲ ಕಳೆಯುವಂತಾಗಿದೆ. ಇನ್ನು ಚಾರ್ಜ್ಶೀಟ್ನಲ್ಲಿ ಪಿನ್ ಟು ಪಿನ್ ಎಲ್ಲಾ ಘಟನಾವಳಿಗಳನ್ನು ಉಲ್ಲೇಖಿಸಲಾಗಿದೆ. ಇದು ಡಿಗ್ಯಾಂಗ್ಗೆ ಎಫೆಕ್ಟ್ ಆಗುವಂತಿದೆ. ಇನ್ನು ಪೋಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿರುವುದರ ಜೊತೆಗೆ ಎಲ್ಲಾ ಪೂರಕ ಎವಿಡೆನ್ಸ್ಗಳನ್ನೂ ಕೊಡಬೇಕಿದೆ. ಬಳಿಕ ಆರೋಪಿಗಳು ಬಂದು ಜಡ್ಜ್ ಮುಂದೆ 161ರ ಪ್ರಕಾರ ಹೇಳಿಕೆ ಕೊಡಬೇಕಿದೆ. ಒಂದು ಆರೋಪಿಗಳು ಹೇಳಿಕೆ ಕೊಟ್ರೆ ಅದಕ್ಕೆ ಸಾಕ್ಷ್ಯಗಳು ಒದಗಿಸಿದ್ರೆ ಹಾಗೂ ಪೊಲೀಸರು ನಮಗೆ ಟಾರ್ಚರ್ ಕೊಟ್ರು ಅಂತ ಇಂತಹ ಹೇಳಿಕೆಗಳನ್ನು ಕೊಡಿಸಿದ್ದಾರೆ ಅಂತ ಹೇಳಿದ್ರೆ ಚಾರ್ಜ್ಶೀಟ್ನಲ್ಲಿರೋದೆಲ್ಲಾ ಉಲ್ಟಾ ಆಗುವ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ ನಟ ದರ್ಶನ್ ಸೇರಿ ಹತ್ಯೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇನ್ನು 3 ದಿನಗಳ ಕಾಲ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಮಧ್ಯೆ ವಿಜಯಲಕ್ಷ್ಮೀ ಒಬ್ಬರೇ ನನ್ನ ಪತ್ನಿ ಅಂತ ನಟ ದರ್ಶನ್ ಒಪ್ಪಿಕೊಂಡಿದ್ದಾರೆ. ಪವಿತ್ರಾಗೌಡಳನ್ನ ಮದುವೆಯಾಗಿಲ್ಲ ಅಂತಲೂ ಹೇಳಿಕೊಂಡಿದ್ದಾರೆ. ಒಟ್ಟಾರೆ, ಡೆವಿಲ್ ಗ್ಯಾಂಗ್‌ನ ಅಟ್ಟಹಾಸದ ಅಧಿಕೃತ ಅಸಲಿ ಚಿತ್ರಣ ದರ್ಶನ್ ಬಾಯಿಯಿಂದಲೇ ರಿವೀಲ್ ಆಗಿದೆ. ದರ್ಶನ್ ಸ್ವ ಇಚ್ಛಾ ಹೇಳಿಕೆಯಲ್ಲಿ ಆತನ ನಿಜ ಸ್ವರೂಪ ಬಯಲಾಗಿದೆ.
ಇದನ್ನೂ ಓದಿ: ಡಿ-ಗ್ಯಾಂಗ್ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್, ಚಿಕ್ಕಣ್ಣ ಅಕ್ಕಪಕ್ಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ