Advertisment

ಒಂದು ವೇಳೆ ತುರ್ತುಪರಿಸ್ಥಿತಿ ಬಂದಿದ್ದೇ ಆದಲ್ಲಿ ಸುನೀತಾ ಗತಿಯೇನು? ನಾಸಾ ಮಾಡಿಕೊಂಡಿದೆ ಮತ್ತೊಂದು ಯೋಜನೆ

author-image
Gopal Kulkarni
Updated On
ಸುನೀತಾರನ್ನು ಕರೆತರಲು ನಭಕ್ಕೆ ದೇವದೂತರು.. ತಿಂಗಳ​ ಅಂತ್ಯದಲ್ಲಿ ಸಿಹಿ ಸುದ್ದಿ ಹಂಚಲಿದೆ NASA
Advertisment
  • ಜೂನ್ 5 ರಿಂದಲೇ ಬಾಹ್ಯಾಕಾಶದಲ್ಲೇ ಉಳಿದಿದ್ದಾರೆ ಸುನೀತಾ, ಬಚ್​ ವಿಲ್ಮೋರ್
  • ಅವರನ್ನು ಭೂಮಿಗೆ ಕರೆತರಲೇಬೇಕಾದ ಅನಿವಾರ್ಯತೆ ಬಂದಲ್ಲಿ ನಾಸಾ ಪ್ಲಾನ್ ಏನು?
  • ಹಿಂದಿನ ಭೀಕರ ಅನುಭವಗಳಿಂದ ಪಾಠ ಕಲಿತ ನಾಸಾ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದೆ

ನಾಸಾದ ಗಗನಯಾನಿಗಳಾದ ಸುನೀತಾ ವಿಲಿಯಮ್ಸ್​ ಹಾಗೂ ಬಚ್​ ವಿಲ್​ಮೋರ್ ಕಳೆದ ಜೂನ್ 5 ರಿಂದಲೂ ಬಾಹ್ಯಾಕಾಶದಲ್ಲಿಯೇ ಉಳಿದುಕೊಂಡಿದ್ದಾರೆ. ಅವರನ್ನು ಬಾಹ್ಯಾಕಾಶಕ್ಕೆ ಕೇವಲ ಒಂದು ವಾರದ ಮಟ್ಟಿಗೆ ಕಳುಹಿಸುವ ಯೋಜನೆಯೊಂದಿಗೆನೇ ಈ ಗಗನಯಾನ ಆರಂಭವಾಗಿದ್ದು. ಆದರೆ ದುರಾದೃಷ್ಟವಷಾತ್ ಅವರನ್ನು ಹೊತ್ತುಕೊಂಡು ನಭಕ್ಕೆ ನೆಗೆದಿದ್ದ ಬೊಯಿಂಗ್​ ಸ್ಟೇರ್​ಲೈನ್ ಬಾಹ್ಯಾಕಾಶ ನೌಕೆ ಖಾಲಿ ಖಾಲಿಯಾಗಿ ಭೂಮಿಗೆ ಹಿಂದಿರುಗಿತು. ಈಗ ಬಾಹ್ಯಾಕಾಶದಲ್ಲಿ ಉಳಿದಿರುವ ಇಬ್ಬರೂ ಗಗನಯಾನಿಗಳನ್ನು 2025 ಫೆಬ್ರವರಿಯಲ್ಲಿ ಭೂಮಿಗೆ ಕರೆತರುವ ಪ್ಲಾನ್ ಮಾಡಿಕೊಂಡಿದೆ ನಾಸಾ.ಆದ್ರೆ ನಾಸಾ ವಿಜ್ಞಾನಿಗಳಲ್ಲೂ ಒಂದು ಪ್ರಶ್ನೆ ಕಾಡಿದೆ. ಒಂದು ವೇಳೆ ಅವರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತೊರೆಯಲೇ ಬೇಕಾದ ವಿಪತ್ತು ಬಂದಲ್ಲಿ ಏನು ಮಾಡುವುದು ಎಂದು.

Advertisment

ಇದನ್ನೂ ಓದಿ:ಮೊಬೈಲ್​ ರಿಟ್ರೀವ್​ ಎಂದರೇನು? ದರ್ಶನ್​ ಕೇಸ್​ನಲ್ಲಿ ಫೋಟೋವನ್ನು ಪೊಲೀಸರು ರಿಕವರಿ ಮಾಡಿದ್ದು ಹೇಗೆ?

ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ನಾಸಾ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಿಬ್ಬಂದಿ ಹಾಗೂ ಗ್ರೌಂಡ್ ಟೀಮ್ ಈಗಾಗಲೇ ಈ ಬಗ್ಗೆ ಒಂದು ತಯಾರಿ ಮಾಡಿಕೊಂಡಿದೆ. ಸ್ಪೇಸ್ ಎಕ್ಸ್ ಡ್ರಾಗನ್ ಬಾಹ್ಯಾಕಾಶನೌಕೆಗೆ ಸಪೋರ್ಟಾಗಿ ನಿಲ್ಲಲು ಪರ್ಯಾಯ ವ್ಯವಸ್ಥೆಗೆ ಸಿಬ್ಬಂದಿ ತಯಾರಾಗಿದೆ. ಒಂದು ವೇಳೆ ಅಂತಹ ತುರ್ತುಪರಿಸ್ಥಿತಿಗಳು ಬಂದಲ್ಲಿ ಸುನೀತಾ ಹಾಗೂ ಬಚ್​ರನ್ನು ಭೂಮಿಗೆ ಸುರಕ್ಷಿತವಾಗಿ ಕರೆಸಿಕೊಳ್ಳುವ ತಯಾರಿ ನಡೆದಿದೆ ಎಂದು ಹೇಳಿದ್ದಾರೆ. ಆದ್ರೆ ಅದು ಸೆಪ್ಟಂಬರ್ 24ಕ್ಕೂ ಮೊದಲು ಸಾಧ್ಯವಿಲ್ಲ ಎಂದು ಕೂಡ ಹೇಳಲಾಗಿದೆ.

ಇದನ್ನೂ ಓದಿ:ಹಾರ್ಟ್​ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!

Advertisment

ಯಾವಾಗ ಬೋಯಿಂಗ್​ ಸ್ಟೇರ್​ಲೈನ್ ಮೂಲಕ ಇಬ್ಬರು ಗಗನಯಾನಿಗಳನ್ನು ವಾಪಸ್ ಭೂಮಿಗೆ ಕರೆತರುವುದು ಅಷ್ಟು ಸರಳವಲ್ಲ ಎಂಬುದನ್ನು ಅರಿತ ಕೂಡಲೇ ಅವರು ಸ್ಪೆಸ್ ಎಕ್ಸ್ ಕ್ರಿವ್ ಡ್ರ್ಯಾಗನ್ ಬಾಹ್ಯಾಕಾಶನೌಕೆಯನ್ನು ಸೇರಿಕೊಂಡರು. ಸ್ಟೇರ್​ಲೈನ್ ಬಾಹ್ಯಾಕಾಶ ಮೂಲಕ ಅವರನ್ನು ಭೂಮಿಗೆ ಸುರಕ್ಷಿತವಾಗಿ ಕರೆತರುವುದು ಸರಳವಲ್ಲ ಎಂಬುದನ್ನು ನಾವು ನಮ್ಮ ಹಿಂದೆ ನಡೆದ ಯೋಜನೆಗಳ ಅನುಭವದಿಂದ ಕಂಡುಕೊಂಡಿದ್ದೇವೆ. ಈ ಹಿಂದೆ ಕೊಲಂಬಿಯಾದಲ್ಲಿ ಲ್ಯಾಂಡ್​ ಆಗಬೇಕಿದ್ದ ಕಲ್ಪನಾ ಚಾವ್ಲಾರ ದುರಂತ ಅಂತ್ಯ ಹಾಗೂ 7 ಜನ ಕ್ರೀವ್ ಮೆಂಬರ್​ಗಳು ಜೀವತೆತ್ತಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿ ಈ ಬಾರಿ ಅತ್ಯಂತ ಸುರಕ್ಷಿತ ಮಾರ್ಗದ ಮೂಲಕ ವಿಲಿಯಮ್ಸ್ ಹಾಗೂ ವಿಲ್​ಮೋರ್​ರನ್ನು ವಾಪಸ್ ಕರೆತರುತ್ತೇವೆ ಎಂದು ನಾಸಾ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment