ರೇಣುಕಾಸ್ವಾಮಿಯ ಡಿಲೀಟ್ ಫೋಟೋ ಸಿಕ್ಕಿದ್ದೇಗೆ?
ವಿನಯ್ ಮೊಬೈಲ್ನಿಂದ ಡಿಲೀಟ್ ಫೋಟೋ ರಿಕವರಿ ಹೇಗಾಯ್ತು?
ಇದಕ್ಕಾಗಿ ಯಾವ ಸಾಫ್ಟ್ವೇರ್ ಬಳಸುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ
ಕಳೆದು ಹೋದ ಸಾಧನವನ್ನು ಹುಡುಕಬಹುದು. ಆದರೆ ಅಳಿಸಿ ಹೋದ ಫೈಲ್ಗಳನ್ನು, ಡಾಕ್ಯುಮೆಂಟ್ಗಳನ್ನು ಪತ್ತೆಹಚ್ಚೋದು ಅಂದ್ರೆ ಸುಲಭದ ಮಾತಲ್ಲ. ಸದ್ಯ ದರ್ಶನ್ ಮತ್ತು ಗ್ಯಾಂಗ್ ಕೈಯಾರೆ ಹತ್ಯೆಯಾದ ರೇಣುಕಾಸ್ವಾಮಿಯ ಫೋಟೋಗಳನ್ನು ಪೊಲೀಸರು ಆರೋಪಿಗಳ ಮೊಬೈಲ್ನಿಂದ ರಿಟ್ರೀವ್ ಮಾಡಿದ್ದಾರೆ. ಈಗಾಗಲೇ ಡಿಲೀಟ್ ಮಾಡಿದ್ದ ಫೋಟೋಗಳನ್ನು ಮರಳಿ ಪಡೆದಿದ್ದಾರೆ. ಅದರೆ ಅದು ಹೇಗೆ ಸಾಧ್ಯವಾಯ್ತು ಎಂದು ತಿಳಿಯೋಣ.
ರಿಟ್ರೀವ್ ಎಂದರೇನು?
ಮೊಬೈಲ್ ರಿಕವರಿ ಅಥವಾ ರಿಟ್ರೀವ್ ಮಾಡೋದು ಎಂದರೆ ಕಳೆದು ಹೋದ, ಅಳಿಸಿದ ಅಥವಾ ಪ್ರವೇಶಿಸಲಾಗದ ಡೇಟಾವನ್ನು ಹಿಂಪಡೆಯುವುದಾಗಿದೆ. ಅಂದಹಾಗೆಯೇ ಪ್ರಮುಖವಾದ ಫೈಲ್, ಸಂಪರ್ಕ, ಸಂದೇಶ ಅಥವಾ ಇತರ ಮೌಲ್ಯಯುತ ಮಾಹಿತಿಯನ್ನು ಹಿಂಪಡೆಯುವ ಪ್ರಕ್ರಿಯೆ ಇದಾಗಿದೆ. ರಿಟ್ರೀವ್ ಅಂದರೆ ಸುಲಭವ ಮಾತಲ್ಲ, ನುರಿತರಿಂದ ಅಥವಾ ವಿಶೇಷ ಸಾಫ್ಟ್ವೇರ್ ಬಳಸಿ ಡೇಟಾವನ್ನು ಮರುಪಡೆಯುವುದಾಗಿದೆ. ಇದು ಸಾಧ್ಯವಾಗಬಹುದು. ಸಾಧ್ಯವಾಗದೇ ಇರಬಹುದು.
ಡಿಲೀಟ್ ಮಾಡಿದ ಫೋಟೋ ಮರಳಿ ಪಡೆಯಬಹುದೇ?
ಶಾಶ್ವತವಾಗಿ ಡಿಲೀಟ್ ಮಾಡಿದ ಫೋಟೋಗಳನ್ನು ಮರಳಿ ಪಡೆಯಲು ವಿಶೇಷ ಸಾಫ್ಟ್ವೇರ್ ಮೊರೆ ಹೋಗುವುದು ಅಗತ್ಯ. ದರ್ಶನ್ ಕೇಸ್ ವಿಚಾರದಲ್ಲೂ ಇದೇ ಆಗಿದೆ ಎನ್ನಲಾಗುತ್ತಿದೆ. ಆದರೆ ಸಾಮಾನ್ಯವಾಗಿ ಡಿಲೀಟ್ ಆಗಿರುವ ಫೋಟೋವನ್ನು ಮರಳಿ ಪಡೆಯಲು ಗೂಗಲ್ ಫೋಟೋ ಬ್ಯಾಕಪ್ ಮೊರೆ ಹೋಗಬಹುದಾಗಿದೆ.
ಇದನ್ನೂ ಓದಿ: ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್ ಸದಸ್ಯತ್ವ ಉಚಿತ!
ಸಾಮಾನ್ಯವಾಗಿ ಗ್ಯಾಲರಿಯಿಂದ ಡಿಲೀಟ್ ಆಗಿರುವ ಫೋಟೋಗಳು ರಿಸೈಕಲ್ ಬಿನ್ನಲ್ಲಿ ಉಳಿದುಕೊಂಡಿರುತ್ತದೆ. ಒಂದು ವೇಳೆ ಅಲ್ಲಿಂದಲೂ ಡಿಲೀಸ್ ಆಗಿದ್ದರೆ ವಿಶೇಷ ಸಾಫ್ಟ್ವೇರ್ ಮೊರೆ ಹೋಗುವುದು ಸೂಕ್ತ.
ಬಹುತೇಕರು ಸ್ಮಾರ್ಟ್ಫೋನ್ನಿಂದ ಡಿಲೀಟ್ ಆಗಿರೋ ಫೋಟೋ ರಿಕವರಿ ಮಾಡಲು ಕ್ಲೌಡ್ ಬ್ಯಾಕಪ್ ಮೊರೆ ಹೋಗುತ್ತಾರೆ. ಮೆಮೊರಿ ಕಾರ್ಡ್ ತೆಗೆದು ವಿಂಡೋಸ್ ಅಥವಾ ಮ್ಯಾಕ್ಓಎಸ್ನಲ್ಲಿ ಫೋಟೋ ಮರುಪಡೆಯುವ ಸಾಫ್ಟ್ವೇರ್ ಬಳಸಿ ಸ್ಕ್ಯಾನ್ ಮಾಡುತ್ತಾರೆ. ಈ ವೇಳೆ ಅಳಿಸಿಹೋದ ಡಾಕ್ಯುಮೆಂಟ್ ಅಥವಾ ಫೋಟೋ ಮರಳಿ ಸಿಗುತ್ತದೆ.
ಫೈಲ್ ರಿಕವರಿಗಾಗಿ ಇರುವ ಸಾಫ್ಟ್ವೇರ್ಗಳು
ಡಿಲೀಟ್ ಆಗಿರುವ ಸಂದೇಶ ಸಿಗುತ್ತಾ?
ವಾಟ್ಸ್ಆ್ಯಪ್ನಲ್ಲಿ ಡಿಲೀಟ್ ಆಗಿರುವ ಸಂದೇಶಗಳು ಸಿಗುವುದು ಕಷ್ಟಕರ. ಏಕೆಂದರೆ ವಾಟ್ಸ್ಆ್ಯಪ್ ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಆಗಿದೆ. ಅಲ್ಲದೆ ವಾಟ್ಸ್ಆ್ಯಪ್ ತನ್ನ ಖಾಸಗಿ ತನದ ಹಕ್ಕನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುತ್ತಾ ಬಂದಿದೆ. ಹೀಗಾಗಿ ವಾಟ್ಸ್ಆ್ಯಪ್ ಯಾವುದೇ ಬಳಕೆದಾರನ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.
ಇದನ್ನೂ ಓದಿ: ಏರ್ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು
ಒಂದು ವೇಳೆ ಸ್ಮಾರ್ಟ್ಫೋನ್ ಪಡೆದುಕೊಂಡು ಅದರಿಂದ ಡಿಲೀಟ್ ಆದ ಸಂದೇಶವನ್ನು ಪೊಲೀಸರು ರಿಟ್ರೀವ್ ಮಾಡುವ ಸಾಧ್ಯತೆಯಿದೆ. ಇದಲ್ಲದೆ ಡಿಲೀಟ್ ಆದ ಸಂದೇಶ ಅಥವಾ ಫೋಟೋದ ಡೇಟಾ ಎಲ್ಲಿ ಸಂಗ್ರಹವಾಗಿದೆ ಎಂಬುದನ್ನು ಅರಿತುಕೊಂಡು ಹುಡುಕಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ