newsfirstkannada.com

ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!

Share :

Published September 6, 2024 at 6:52am

    ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋ

    8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ ರಿಲಯನ್ಸ್​ ಜಿಯೋ

    ಅಜಿಯೋ ಮೂಲಕವೂ ಪ್ರಯೋಜನ ಪಡೆಯುವ ಅವಕಾಶ

ಮುಖೇಶ್​ ಅಂಬಾನಿ ಒಡೆತನದ ರಿಲಯನ್ಸ್​ ಜಿಯೋ ತನ್ನ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಹೀಗಿರುವಾಗ ತನ್ನ ಗ್ರಾಹಕರಿಗೆ ವಿಭಿನ್ನ ರೀತಿಯಲ್ಲಿ ಕೊಡುಗೆ ನೀಡುತ್ತಿದೆ. ಸೆಪ್ಟೆಂಬರ್​​ 5ರಿಂದ 10ರ ನಡುವೆ ಜಿಯೋ ರೀಚಾರ್ಜ್​ ಮಾಡಿದರೆ ಬಳಕೆದಾರರಿಗೆ ಆಯ್ದ ತಿಂಗಳ ಮತ್ತು ವಾರ್ಷಿಕ ಯೋಜನೆಗಳಲ್ಲಿ 700 ರೂಪಾಯಿ ಮೌಲ್ಯದ ಪ್ರಯೋಜನವನ್ನು ಒದಗಿಸುತ್ತದೆ.

ಜಿಯೋ ಗ್ರಾಹಕರು ಸ್ಮಾರ್ಟ್​ಫೋನ್​ ರೀಚಾರ್ಜ್​ ಮಾಡಲು ಬಳಸಿದರೆ ಹಲವು ಪ್ರಯೋಜನವನ್ನು ಪಡೆಯಬಹುದಾಗಿದೆ. 899 ರೂಪಾಯಿ, 999 ರೂಪಾಯಿ ಮತ್ತು 3599 ರೂಪಾಯಿ ರೀಚಾರ್ಜ್​ ಮಾಡಿದರೆ 700 ರೂಪಾಯಿ ಮೌಲ್ಯದ ಪ್ರಯೋಜನವನ್ನು ಪಡೆಯುತ್ತಾರೆ. ಅಂದಹಾಗೆಯೇ ಗ್ರಾಹಕರಿಗೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ತಿಳಿಯೋಣ.

1.ಜಿಯೋ ಬಳಕೆದಾರರು ರಿಚಾರ್ಜ್​ ಮಾಡಿದರೆ 175 ರೂಪಾಯಿಯ ಒಟಿಟಿ ಮತ್ತು ಡೇಟಾ ಪ್ಯಾಕ್​ ಒದಗಿಸುತ್ತದೆ. 10ಜಿಬಿ ಡೇಟಾ ವೋಚರ್​​ ನೀಡುತ್ತದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.
2.ಇದರ ಜೊತೆಗೆ ಗ್ರಾಹಕರಿಗೆ ಉಚಿತ ಜೊಮ್ಯಾಟೋ ಗೋಲ್ಡ್​ ಸದಸ್ಯತ್ವ ಒದಗಿಸುತ್ತದೆ.
3.ಆನ್​ಲೈನ್​ ಶಾಪಿಂಗ್​ ಸ್ಟೋರ್​ ಅಜಿಯೋ ಮೂಲಕವೂ ಪ್ರಯೋಜನ ಸಿಗಲಿದೆ. 2999 ರೂಪಾಯಿಯ ಮತ್ತು ಅದಕ್ಕಿಂತ ಹೆಚ್ಚಿನ ಆರ್ಡರ್​​ ಮೂಲಕ ಫ್ಲಾಟ್​​ 500 ರೂಪಾಯಿ ರಿಯಾಯಿತಿ ಸಿಗುತ್ತದೆ.

ಇದನ್ನೂ ಓದಿ: ಎಚ್ಚರ! ನಿಮ್ಮ ಕರೆಯನ್ನು ಕದ್ದಾಲಿಸುತ್ತಿದ್ದಾರೆ.. ಕೊನೆಗೂ ತಪ್ಪೊಪ್ಪಿಕೊಂಡಿದೆ ಈ ಮಾರ್ಕೆಟಿಂಗ್​ ಸಂಸ್ಥೆ!

800 ರೂಪಾಯಿ ರೀಚಾರ್ಜ್​ ಮಾಡಿದರೆ ದಿನಕ್ಕೆ 2ಜಿಬಿ ಡೇಟಾ ಒದಗಿಸುತ್ತದೆ. ಇದು 90 ದಿನಗಳ ಮಾನ್ಯತೆ ಹೊಂದಿದೆ. 999 ರೂಪಾಯಿ ರೀಚಾರ್ಜ್​ ಮಾಡಿದರೆ 2ಜಿಬಿ ಡೇಟಾ ಜೊತೆಗೆ 98 ದಿನಗಳ ಮಾನ್ಯತೆ ಹೊಂದಿದೆ.

ಇದನ್ನೂ ಓದಿ: ಏರ್​​ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು

3599 ರೂಪಾಯಿ ಪ್ಲಾನ್​​ 365 ದಿನಗಳ ಮಾನ್ಯತೆ ಜೊತೆಗೆ 2.5ಜಿಬಿ ದೈನಂದಿನ ಡೇಟಾ ಒದಗಿಸುತ್ತದೆ. ಮಾತ್ರವಲ್ಲದೆ 10 ಒಟಿಟಿ ಪ್ರವೇಶಗಳನ್ನು ನೀಡುತ್ತಿದೆ. ಇದಲ್ಲದೆ 10ಜಿಬಿ ಡೇಟಾ ಪ್ಯಾಕ್​ ಮತ್ತು 175ರೂಪಾಯಿ ಮೌಲ್ಯದ ಹೆಚ್ಚುವರಿ 28 ದಿನಗಳ ಮಾನ್ಯತೆ ಹೊಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಯೋ 8ನೇ ವಾರ್ಷಿಕೋತ್ಸವ; ಗ್ರಾಹಕರಿಗಾಗಿ 10GB ಡೇಟಾ ಮತ್ತು ಜೊಮ್ಯಾಟೊ ಗೋಲ್ಡ್​​ ಸದಸ್ಯತ್ವ ಉಚಿತ!

https://newsfirstlive.com/wp-content/uploads/2024/08/Jio-1.jpg

Load More