Advertisment

ಡ್ಯುಯೆಲ್​ ಡಿಸ್​​ಪ್ಲೇ, 4000mAh ಬ್ಯಾಟರಿ, ಅದ್ಭುತ ಕ್ಯಾಮೆರಾ! ಹುವಾಯಿ ಪರಿಚಯಿಸಿದೆ ಮಡಚುವ ಫೋನ್​

author-image
AS Harshith
Updated On
ಡ್ಯುಯೆಲ್​ ಡಿಸ್​​ಪ್ಲೇ, 4000mAh ಬ್ಯಾಟರಿ, ಅದ್ಭುತ ಕ್ಯಾಮೆರಾ! ಹುವಾಯಿ ಪರಿಚಯಿಸಿದೆ ಮಡಚುವ ಫೋನ್​
Advertisment
  • ನೂತನ ಸ್ಮಾರ್ಟ್​ಫೋನಿನ ವೈಶಿಷ್ಟ್ಯಕ್ಕೆ ಬೆರಗಾಗೋದು ಗ್ಯಾರಂಟಿ
  • ಸಖತ್ತಾಗಿದೆ, ಕ್ಲಾಸಿಯಾಗಿದೆ.. ಹೊಸ ಹುವಾಯಿ ಮಡಚುವ ಪೋನ್​ ಹೇಗಿದೆ?
  • ಸೆಲ್ಫಿಗೆ ಹೇಳಿ ಮಾಡಿಸಿದಂತಾ ಕ್ಯಾಮೆರಾ.. ವೇಗದ ಚಾರ್ಜಿಂಗ್​​​ ಸೌಲಭ್ಯ!

ಸ್ಮಾರ್ಟ್​ಫೋನ್​ ಜಗದಲ್ಲಿ ಸ್ಪರ್ಧೆಗಳು ಹೆಚ್ಚಾಗುತ್ತಿವೆ. ನಾನಾ ಕಂಪನಿಗಳು ನವೀನ ಮಾದರಿಯ ಸ್ಮಾರ್ಟ್​ಫೋನ್​ ಜೊತೆಗೆ ಮಾರುಕಟ್ಟೆಗೆ ಬರುತ್ತಿವೆ. ಅದರಂತೆಯೇ ಇದೀಗ ಜನಪ್ರಿಯ ಹುವಾಯಿ ಕಂಪನಿ ಹೊಸ ಪ್ಲಿಪ್​ ಫೋನನ್ನು ಬಿಡುಗಡೆ ಮಾಡಿದೆ.

Advertisment

ಹುವಾಯಿ ನೋವಾ ಪ್ಲಿಪ್​​ ನೂತನ ಮಡಚುವ ಫೋನನ್ನು ಪರಿಚಯಿಸಿದೆ. 12ಜಿಬಿ RAM ಆಯ್ಕೆಯಲ್ಲಿ ಪರಿಚಯಿಸಿದ ನೂತನ ಫೋನ್​ ಎರಡು ಡಿಸ್​ಪ್ಲೇಯೊಂದಿಗೆ ಬಂದಿದೆ. ಅಂದಹಾಗೆಯೇ ನೂತನ ಸ್ಮಾರ್ಟ್​ಫೋನ್​ ಬಿಡುಗಡೆಗೊಂಡ 72 ಗಂಟೆಗಳಲ್ಲಿ 45 ಸಾವಿರ ಯುನಿಟ್​​ಗಳಷ್ಟು ಮಾರಾಟ ಕಂಡಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಬಳಕೆದಾರರೇ.. ನವೆಂಬರ್​​ನಿಂದ ಈ ಅಪ್ಲಿಕೇಶನ್​ ಕೆಲಸ ಮಾಡಲ್ಲ!

publive-image

ಹುವಾಯಿ ನೋವಾ ಪ್ಲಿಪ್ ಸ್ಮಾರ್ಟ್​ಫೊನ್​ನಲ್ಲಿ 32 ಮೆಗಾಫಿಕ್ಸೆಲ್​ ಸೆಲ್ಫಿ ಕ್ಯಾಮೆರಾ, 66 ವ್ಯಾಟ್​​ ವೇಗದ ಚಾರ್ಜಿಂಗ್​​ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Advertisment

ಹುವಾಯಿ ನೋವಾ ಪ್ಲಿಪ್ ವೈಶಿಷ್ಟ್ಯಗಳು

ಹುವಾಯಿ ನೋವಾ ಪ್ಲಿಪ್ 1136x2690 ಪಿಕ್ಸೆಲ್​ ರೆಸಲ್ಯೂಶನ್​ನೊಂದಿಗೆ 6.94 ಇಂಚಿನ LTPO OLED ಡಿಸ್​​ಪ್ಲೇಯನ್ನು ಹೊಂದಿದೆ. ಜೊತೆಗೆ 480x480 ಪಿಕ್ಸೆಲ್​​ ರೆಸಲ್ಯೂಶನ್​​ನ 2.14 ಇಂಚಿನ ಸೆಕೆಂಡರಿ ಡಿಸ್​ಪ್ಲೇಯನ್ನು ಸಹ ಹೊಂದಿದೆ. 120HZ ರಿಫ್ರೆಶ್​ ದರವನ್ನು ಬೆಂಬಲಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ 1ಟಿಬಿ ತನಕ ಆಂತರಿಕ ಸಂಗ್ರಹಣೆಯ ಆಯ್ಕೆಯಲ್ಲೂ ಸಿಗುತ್ತಿದೆ.

ಸ್ಮಾರ್ಟ್​ಫೋನ್​ನಲ್ಲಿ ಫೋಟೋಗ್ರಫಿಗಾಗಿ ಡ್ಯುಯೆಲ್​ ರಿಯರ್​​ ಕ್ಯಾಮೆರಾ ನೀಡಲಾಗಿದೆ. 50 ಮೆಗಾಫಿಕ್ಸೆಲ್​ ಲೆನ್ಸ್​ನೊಂದಿಗೆ 8 ಮೆಗಾಫಿಕ್ಸೆಲ್​ ಅಲ್ಟ್ರಾವೈಡ್​​ ಆ್ಯಂಗಲ್​​ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸೆಲ್ಫಿಗಾಗಿ 32 ಮೆಗಾಫಿಕ್ಸೆಲ್​ ಕ್ಯಾಮೆರಾ ನೀಡಲಾಗಿದೆ.

publive-image

ಇದನ್ನೂ ಓದಿ: ವಯನಾಡು ಭೂಕುಸಿತದಲ್ಲೊಂದು ಮನಮಿಡಿಯುವ ಲವ್ ಸ್ಟೋರಿ! ಸತ್ತ ಪ್ರೇಯಸಿ ಬದುಕಿ ಬಂದ ರೋಚಕ ಕತೆ!

Advertisment

ನೂತನ ಸ್ಮಾರ್ಟ್​ಫೊನ್​ನಲ್ಲಿ 4000 mAh ಬ್ಯಾಟರಿ ನೀಡಲಾಗಿದ್ದು, 66 ವ್ಯಾಟ್​​ ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಇದಲ್ಲಿದೆ ಫೋನ್​ 4.2 ಹಾರ್ಮೊನಿಒಎಸ್​ನಿಂದ ಕಾರ್ಯ ನಿರ್ವಹಿಸುತ್ತದೆ.

ಗ್ರಾಹಕರಿಗಾಗಿ ಹಸಿರು, ಪಿಂಕ್​, ಝಿರೋ ವೈಟ್​ ಆ್ಯಂಡ್​​ ಸ್ಟಾರಿ ಬ್ಲಾಕ್​ ಬಣ್ಣದಲ್ಲಿ ಸಿಗುತ್ತಿದೆ. 62 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment