newsfirstkannada.com

ಹುಬ್ಬಳ್ಳಿ ನೇಹಾ, ಅಂಜಲಿ ಹತ್ಯೆ ಕೇಸ್​; CID ವಿಚಾರಣೆಗೆ ಹಾಜರಾದ ನಿರಂಜನ ಹಿರೇಮಠ.. ಏನಂದ್ರು?

Share :

Published May 27, 2024 at 7:42am

    ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನ ಮುಂದೆ ಕೂರಿಸಿ ವಿವರಣೆ

    ವಿಚಾರಣೆಯ ಬಳಿಕ ಬೆಂಡಿಗೇರಿ ಠಾಣೆಗೆ ಹಂತಕ ಗಿರೀಶ್​ ಶಿಫ್ಟ್

    ಎಸ್​ಐಟಿ ಅಧಿಕಾರಿಗಳು ತಮ್ಮ ಲೇವೆಲ್​ನಲ್ಲಿ ತನಿಖೆ ಮಾಡ್ತಿದ್ದಾರೆ

ಹುಬ್ಬಳ್ಳಿಯನ್ನ ಬೆಚ್ಚಿ ಬೀಳಿಸಿದ್ದ ಅಂಜಲಿ ಹಾಗೂ ನೇಹಾ ಹತ್ಯೆ ಪ್ರಕರಣಗಳ ತನಿಖೆ ಮುಂದುವರಿದಿದೆ. ಎರಡೂ ಪ್ರಕರಣಗಳನ್ನ ಸೀರಿಯಸ್ ಆಗಿ ಪರಿಗಣಿಸಿರೋ ಸಿಐಡಿ ಹಲವು ಆಯಾಮಾಗಳಲ್ಲಿ ತನಿಖೆ ನಡೆಸ್ತಿದೆ. ಈ ನಡುವೆ ನೇಹಾ ತಂದೆಗೂ ವಿಚಾರಣೆ ನಡೆದಿದೆ. ಅತ್ತ ಆರೋಪಿಗಳೂ ಸಿಐಡಿ ಪ್ರಶ್ನೆ ಸುತ್ತಿಕೊಂಡಿದೆ.

ಅಂಜಲಿ ಹತ್ಯೆ ಹಾಗೂ ನೇಹಾ ಕೊಲೆ.. ಇವೆರಡು ಪ್ರಕರಣ ಗಂಡು ಮೆಟ್ಟಿದ ನಾಡನ್ನ ಬೆಚ್ಚಿ ಬೀಳಿಸಿತ್ತು. ಹಾಡಹಗಲೇ ರಕ್ತ ಹರಿದಿದ್ದ ಈ ಪ್ರಕರಣಗಳ ತನಿಖೆಯನ್ನ ಸಿಐಡಿ ಚುರುಕುಗೊಳಿಸಿದೆ. ವಿಚಾರಣಾ ವ್ಯೂಹವನ್ನ ತನಿಖಾಧಿಕಾರಿಗಳು ಬಿಗಿಗೊಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣಾರ್ಭಟ.. ಬಾಲಕಿ ಸಾವು, ಸಿಡಿಲು ಬಡಿದು ಮಳೆಯಲ್ಲೂ ಹೊತ್ತಿ ಉರಿದ ತೆಂಗಿನ ಮರ

ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶ್​ಗೆ ಸಿಐಡಿ ವಿಚಾರಣೆ

ಅಂಜಲಿಯನ್ನ ಇರಿದು ಕೊಂದಿರೋ ಆರೋಪಿ ಗಿರೀಶ್​ಗೆ ಹುಬ್ಬಳ್ಳಿಯ ಐಬಿಯಲ್ಲಿ ವಿಚಾರಣೆ ನಡೆಸಲಾಯ್ತು. ನಿನ್ನೆ ಬೆಳಗ್ಗೆ ಆರಂಭವಾದ ಪ್ರಶ್ನೋತ್ತರ ಸಂಜೆವರೆಗೂ ನಡೀತು. ಈ ವೇಳೆ ಪ್ರಕರಣ ಸಂಬಂಧ ಹಲವು ಮಾಹಿತಿ ಕೇಳಲಾಯ್ತು. ಇನ್ನು, ಅಂಜಲಿ‌ ಕೊಲೆ ನಂತರ ಟ್ರೈನ್​ನಲ್ಲಿ ದಾವಣಗೆರೆ ಹತ್ತಿರ ಆರೋಪಿ ಗಿರೀಶ್ ಲಕ್ಷ್ಮೀ ಎಂಬಾಕೆಗೆ ಚಾಕು ಇರಿದಿದ್ದ. ಈ ಹಿನ್ನೆಲೆ ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಐಬಿಗೆ ಕರೆಸಿಕೊಂಡ ಸಿಐಡಿ ಅಧಿಕಾರಿಗಳು, ಹಂತಕನ ಮುಂದೆಯೇ ಘಟನೆ ವಿವರಣೆ ಕೇಳಿದ್ರು. ಹೀಗೆ ವಿವಿಧ ಆಯಾಮಗಳಲ್ಲಿ ವಿಚಾರಣೆಯ ಬಳಿಕ ಬೆಂಡಿಗೇರಿ ಠಾಣೆಗೆ ಹಂತಕ ಗಿರೀಶ್​ನನ್ನ ಶಿಫ್ಟ್ ಮಾಡಲಾಗಿದೆ.

ನೇಹಾ ತಂದೆ ನಿರಂಜನ ಹಿರೇಮಠಗೂ ಸಿಐಡಿ ವಿಚಾರಣೆ

ಅಂಜಲಿ ಹತ್ಯೆ ಕೇಸ್​ ಸಂಬಂಧ ನೇಹಾ ತಂದೆ ನಿರಂಜನ ಹಿರೇಮಠಗೂ ಸಿಐಡಿ ವಿಚಾರಣೆ ನಡೆಸಿದೆ. ಪ್ರಕರಣ ಸಂಬಂಧ ಹಿರೇಮಠ ಬಳಿ ಒಂದಷ್ಟು ಮಾಹಿತಿ ಪಡೆದುಕೊಂಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ವಿಚಾರಣೆಯ ಬಳಿಕ ಮಾತನಾಡಿದ ನಿರಂಜನ ಹಿರೇಮಠ ಸಂಪೂರ್ಣವಾಗಿ ಅಂಜಲಿ ಪ್ರಕರಣ ಬೇಧಿಸಬೇಕು, ನ್ಯಾಯ ಸಿಗಬೇಕು ಅಂತಾ ಹೇಳಿದ್ರು.

ನೇಹಾ ತಂದೆ ನಿರಂಜನ ಹಿರೇಮಠ

ನ್ಯಾಯ ಸಿಗೋ ಭರವಸೆ ಇದೆ

ಅಂಜಲಿಯವರ ತಂದೆ, ಸಹೋದರ ಇಲ್ಲ. ಅವರ ಮನೆಯಲ್ಲಿ ಯಾರು ಇಲ್ಲ. ಹೀಗಾಗಿ ಆ ಭಾಗದ ಮಹಾನಗರ ಪಾಲಿಕೆ ಸದಸ್ಯ ನಾನು ಆಗಿದ್ದರಿಂದ ಅವರಿಗೆ ಬೆಂಬಲವಾಗಿ ನಿಂತಿದ್ದೇನೆ. ಅವರಿಗೆ ಏನು ಬೇಕು ಅದೆಲ್ಲ ಮಾಡಿಕೊಡಬೇಕು. ನನ್ನ ಮಗಳು ನೇಹಾ ತನಿಖೆ ಹೇಗೆ ನಡೆಯುತ್ತಿದೆ ಅದೇ ರೀತಿ ಅಂಜಲಿ ಕೇಸ್​ ಕೂಡ ತನಿಖೆ ಆಗಬೇಕು. ತನಿಖೆ ಮೇಲೆ ನಮಗೂ ವಿಶ್ವಾಸ ಮೂಡಿದೆ. ಸಿಐಡಿ ಅಧಿಕಾರಿಗಳು ತಮ್ಮ ಲೇವೆಲ್​ನಲ್ಲಿ ತನಿಖೆ ಮಾಡುತ್ತಿದ್ದಾರೆ. ಹೀಗಾಗಿ ಅವರು ನ್ಯಾಯ ಕೊಡಿಸುತ್ತಾರೆ ಎನ್ನುವ ಭರವಸೆ ಇದೆ.

ನಿರಂಜನ ಹಿರೇಮಠ, ಮೃತ ನೇಹಾ ತಂದೆ

ನೇಹಾ ಹತ್ಯೆ ಕೇಸ್ ಬಗ್ಗೆ ಸಿಐಡಿ ಜೊತೆ ಹಿರೇಮಠ ಚರ್ಚೆ

ಅಂಜಲಿ ವಿಚಾರ ಮಾತ್ರವಲ್ಲದೇ ಪುತ್ರಿ ನೇಹಾ ಕೊಲೆ ಪ್ರಕರಣ ಸಂಬಂಧವೂ ಸಿಐಡಿ ಅಧಿಕಾರಿಗಳ ಜೊತೆ ನಿರಂಜನ ಹಿರೇಮಠ ಒಂದಷ್ಟು ಚರ್ಚೆ ನಡೆಸಿದ್ರು. ನೇಹಾ ಕೊಲೆ ಕೇಸ್ ದಿಕ್ಕು ತಪ್ಪಿಸೋ ಕೆಲಸ ಆಗಬಾರದು ಅಂತಾ ತನಿಖಾಧಿಕಾರಿಗಳನ್ನ ಮನವಿ ಮಾಡಿದ್ರು.

ಇದನ್ನೂ ಓದಿ: ಸಿಲಿಕಾನ್​ ಸಿಟಿಯ ಮಾಲ್, ಗೇಮಿಂಗ್ ಝೋನ್ಸ್​ ಮೇಲೆ ಹದ್ದಿನ ಕಣ್ಣು.. ಖಡಕ್ ಸೂಚನೆ ಕೊಟ್ಟ DCM

ದಿಕ್ಕು ತಪ್ಪಿಸೋ ಕೆಲಸ ಆಗಬಾರದು

ಮಗಳ ಹತ್ಯೆಯಾದ ನಂತರ ಒಬ್ಬನೇ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೇರೆಯವರನ್ನು ಬಂಧಿಸಿಲ್ಲ. ಆ ತನಿಖೆ ಎಲ್ಲಿಗೆ ಹೋಗಿದೆ ಎಂದು ಚರ್ಚೆ ಮಾಡಿದ್ದೇನೆ. ನಮಗೆ ಯಅರ ಮೇಲಾದ್ರೂ ಅನುಮಾನ ಇದ್ದಾರೆ ನಮಗೆ ಮೌಖಿಕವಾಗಿಯಾದರೂ ಹೇಳಿ, ಇಲ್ಲವಾದರೆ ಬರೆದುಕೊಡಿ ಎಂದು ಅಧಿಕಾರಿಗಳು ಹೇಳಿದರು. ಅಧಿಕಾರಿಗಳು ಯಾರನ್ನು ಟಚ್ ಮಾಡುತ್ತಿಲ್ಲ. ಅವರ ರೀತಿಯಲ್ಲೇ ಮಾಡುತ್ತಿದ್ದಾರೆ. ಸ್ಥಳೀಯರು ಮಾಹಿತಿ ಕೊಡದಿದ್ದರೇ ನಮಗೆ ಯಾವ ಕಡೆಯಿಂದ ಮಾಹಿತಿ ಪಡೆಯಬೇಕು ಎಂಬುದು ನಮಗೆ ಗೊತ್ತಿದೆ. ಕೆಲಸ ಮಾಡೋಕೆ ಬಿಡಿ ಎಂದು ಅವರು ಹೇಳಿದ್ದಾರೆ.

ನಿರಂಜನ ಹಿರೇಮಠ, ಮೃತ ನೇಹಾ ತಂದೆ

ಎರಡೂ ಪ್ರಕರಣದಲ್ಲೂ ತನಿಖೆ ಮುಂದುವರಿದಿದೆ. ಇನ್ನು, ಇಂದು ಹುಬ್ಬಳ್ಳಿಗೆ ಸಿಐಡಿ ಡಿಜಿ ಆಗಮಿಸ್ತಿದ್ದು, ಮೃತ ನೇಹಾ ಮನೆಗೆ ಭೇಟಿ ಕೊಡಲಿದ್ದಾರೆ ಅನ್ನೋ ಮಾಹಿತಿ ಇದೆ. ಈ ವೇಳೆ ಒಂದಷ್ಟು ಮಹತ್ವದ ಮಾಹಿತಿ ವಿನಿಮಯ ಆಗೋ ಸಾಧ್ಯತೆ ಇದೆ. ಪ್ರಕರಣವನ್ನ ಭೇಧಿಸಲು ಎಲ್ಲ ಅಗತ್ಯ ಕ್ರಮಗಳನ್ನ ಪೊಲೀಸರು ಕೈಗೊಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಬ್ಬಳ್ಳಿ ನೇಹಾ, ಅಂಜಲಿ ಹತ್ಯೆ ಕೇಸ್​; CID ವಿಚಾರಣೆಗೆ ಹಾಜರಾದ ನಿರಂಜನ ಹಿರೇಮಠ.. ಏನಂದ್ರು?

https://newsfirstlive.com/wp-content/uploads/2024/05/HBL_ANJALI_CASE_NEW.jpg

Load More