newsfirstkannada.com

ನನ್ನ ಮಗಳು ಅಂತವಳಲ್ಲ ಮೇಡಂ.. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಗಳ ಗಳನೇ ಅತ್ತ ನೇಹಾ ತಂದೆ

Share :

Published April 20, 2024 at 1:46pm

Update April 20, 2024 at 2:16pm

    ತುಂಬಾ ನ್ಯಾಲೆಡ್ಜ್ ಇತ್ತು ಅವಳಿಗೆ, ಐಎಎಸ್ ಬಗ್ಗೆ ಬಹಳ ಆಸಕ್ತಿ ಇತ್ತು

    ಏಪ್ರಿಲ್​ 19 ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್​​ನಲ್ಲಿ ಕೃತ್ಯ

    ‘ರಾಜಕೀಯ ಬೇಡ, ನಮಗೆ ಸಾಮಾಜಿಕತೆ ಇರಬೇಕು ಎಂದು ಹೇಳಿದ್ದಳು’

ಹುಬ್ಬಳ್ಳಿ: ಮಗಳು ಹುಟ್ಟಿದ ಮೇಲೆಯೇ ನಮಗೆ ಎಲ್ಲವೂ ಕೂಡಿ ಬಂದಿತು. ನಮ್ಮ ಮನೆಯ ಲಕ್ಷ್ಮಿಯಂತೆ ಇದ್ದಳು. ನನ್ನ ಮಗಳು ಅಂತವಳಲ್ಲ ಮೇಡಂ ಎಂದು ನಿರಂಜನ​ ಹಿರೇಮಠ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಗಳಗಳನೇ ಕಣ್ಣೀರು ಹಾಕಿದ್ದಾರೆ.

ನಾನು ರಾಜಕೀಯದಲ್ಲಿ ಬ್ಯುಸಿ ಇರುವಾಗ, ಪತ್ನಿ ಕಚೇರಿಯಲ್ಲಿ ಬ್ಯುಸಿ ಇರುವಾಗ 6 ತಿಂಗಳು ಮನೆಯನ್ನೇ ನಿರ್ವಹಿಸಿದ್ದಳು. ತುಂಬಾ ನ್ಯಾಲೆಡ್ಜ್ ಹೊಂದಿದ್ದಳು. ಐಎಎಸ್ ಬಗ್ಗೆ ಬಹಳ ಆಸಕ್ತಿ ಇತ್ತು. ಇದರಿಂದ ಐಎಎಸ್ ಮಾಡ್ತೀನಿ ಎಂದು ಹೇಳಿದ್ದಳು. ಕೋಚಿಂಗ್ ಸೆಂಟರ್ ಬಗ್ಗೆ ಎಲ್ಲಾ ತಿಳಿದುಕೊಂಡಿದ್ದಳು. ಯಾರಿಗೂ ಅನ್ಯಾಯ ಆಗುವುದನ್ನ ನೋಡೋಕ್ಕೆ ಮಗಳಿಗೆ ಆಗುತ್ತಿರಲಿಲ್ಲ. ರಾಜಕೀಯ ಬೇಡ, ನಮಗೆ ಸಾಮಾಜಿಕತೆ ಇರಬೇಕು ಎಂದು ನಮ್ಮಿಬ್ಬರಿಗೂ ಹೇಳುತ್ತಿದ್ದಳು ಎಂದು ನಿರಂಜನ್ ಹಿರೇಮಠ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ಪಳೆಯುಳಿಕೆ ಪತ್ತೆ.. ಇದು ಅನಕೊಂಡಗಿಂತ ಅತಿ ದೊಡ್ಡ ವಾಸುಕಿ ಸರ್ಪ..!

ಇದನ್ನೂ ಓದಿ: ಭಾರತದಲ್ಲಿದ್ದ ಅತಿದೊಡ್ಡ ಹಾವಿನ ತಲೆಬುರಡೆ ಇನ್ನೂ ಪತ್ತೆಯಾಗಿಲ್ಲ.. ವಾಸುಕಿ ನಾಗ್ ಏನೇನು ತಿನ್ನುತ್ತಿತ್ತು ಗೊತ್ತಾ?

ಅವಳ ಒಳ್ಳೆತನ ನೋಡಿ ನಮ್ಮನೆ ಡ್ರೈವರ್​ ಕೂಡ ತನ್ನ 2ನೇ ಮಗಳಿಗೆ ನೇಹಾ ಎಂದು ಹೆಸರಿಟ್ಟಿದ್ದಾನೆ. ಅವಳು ಒಳ್ಳೆತನಕ್ಕೆ ಕಪ್ಪು ಚುಕ್ಕೆ ಇಡಬೇಡಿ. ಆಕೆ ಹುಟ್ಟಿದಾಗಿಂದ ಇಷ್ಟೆಲ್ಲ ಮಾಡಿದ್ದೇವೆ. ಯಾವ ಹೆಣ್ಮುಕ್ಕಳಿಗೂ ಈ ರೀತಿ ಆಗಬಾರ್ದು ಎಂದು ತಂದೆ ಕಣ್ಣೀರು ಹಾಕಿದ್ದಾರೆ.

ನನ್ನ ಮಗಳು ಅಂತವಳಲ್ಲ. ಹೊರಗಡೆ ಒಂದು ದಿನ ಹೋಗಿದ್ದವಳಲ್ಲ. ಅವಳ ಜೊತೆಗೆ ನಾನೇ ಹೋಗಬೇಕಿತ್ತು. ಮಗಳು ಹೋದ್ಮೇಲೆ ಇನ್ನು ಯಾರಿದಾರೆ ನಮಗೆ. ಯಾರಿಗಾದರೂ ಅಷ್ಟೇ ಜೋರಾಗಿ ಮಾತನಾಡಿದವಳಲ್ಲ. ಬದಲಿಗೆ ಅಣ್ಣ, ಅಕ್ಕ, ಕಾಕಾ, ಆಂಟಿ, ದೊಡ್ಡಮ್ಮ ಅಂತ ಎಲ್ಲರನ್ನೂ ಅಷ್ಟು ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಮನೆಗೆ ಬಂದವರು ನನ್ನನ್ನ ಕೇಳುತ್ತಿರಲಿಲ್ಲ, ನೇಹಾ ಎಲ್ಲಿ ಎಂದು ಕೇಳುತ್ತಿದ್ದರು. ಅವಳಿಗೆ ಜನನೇ ಬೇಕಿತ್ತು. ಬಡವರ ಮಕ್ಕಳಿಗೆ ಏನಾದರೂ ಆಗಿದೆ ಎಂದರೆ ಅಯ್ಯೋ ಪಾಪ ಹೀಗೆ ಆಗಬಾರದಿತ್ತು ಅಮ್ಮ ಎನ್ನುತ್ತಿದ್ದಳು ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ

ಮೊನ್ನೆ ರೋಡ್​ನಲ್ಲಿ ಬರುವಾಗ ರಾತ್ರಿ 11ವರೆಗೆ ಒಂದು ಹುಡುಗಗೆ ಹೊಡೆಯುತ್ತಿದ್ದರು. ಆಗ ಕಾರಿನಲ್ಲಿ ಕೂತುಕೊಂಡೇ ಅಯ್ಯೋ ಅಪ್ಪ, ಅಮ್ಮ ಅಲ್ಲಿ ನೋಡಿ ಹುಡಗನಿಗೆ ಹೊಡೆಯುತ್ತಿದ್ದಾರೆ ನೋಡಿ. ಕಾರು ನಿಲ್ಲಿಸಿ ಎಂದು ಹೇಳಿದ್ದಳು. ಬಳಿಕ ನೇಹಾ ತಂದೆ ಹೋಗಿ ಆ ಗಲಾಟೆಯನ್ನು ಬಿಡಿಸಿ ಬಂದರು ಎಂದು ನೇಹಾ ತಾಯಿ ಗೀತಾ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮಗಳು ಅಂತವಳಲ್ಲ ಮೇಡಂ.. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಗಳ ಗಳನೇ ಅತ್ತ ನೇಹಾ ತಂದೆ

https://newsfirstlive.com/wp-content/uploads/2024/04/HBL_NEHA-4.jpg

Load More