newsfirstkannada.com

ನೇಹಾ ಹತ್ಯೆ ಕೇಸ್.. ರಾಜ್ಯದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪನೆ

Share :

Published April 23, 2024 at 8:21am

Update April 23, 2024 at 8:48am

  ಆರೋಪಿಗೆ ಶಿಕ್ಷೆಯಾಗಬೇಕು ಅಂತ ಒಕ್ಕೊರಲಿಂದ ಆಗ್ರಹ ಕೇಳಿ ಬರ್ತಿದೆ

  ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

  ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಹೆಜ್ಜೆ ಇಟ್ಟಿರೋದು ಸ್ವಾಗತಾರ್ಹ

ನೇಹಾ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿದೆ. ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಮಹಿಳೆಯರು ರಕ್ಷಣೆಗಾಗಿ ಧ್ವನಿ ಎತ್ತುತ್ತಿದ್ದಾರೆ. ಈ ಬೆನ್ನಲ್ಲೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಹುಬ್ಬಳ್ಳಿಯಲ್ಲಿ ಯುವತಿಯ ಜೀವ ತೆಗೆದ ಪಾಪಿಯ ಪೈಶಾಚಿಕ ಕೃತ್ಯ ಖಂಡಿಸಿ ಪ್ರತಿಭಟನೆಗಳು ಮುಂದುವರಿದಿವೆ. ನೆತ್ತರು ಹರಿಸಿದ ಪಾಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಂತ ಒಕ್ಕೊರಲ ಆಗ್ರಹ ಕೇಳಿ ಬರ್ತಿದೆ. ಈ ನಡುವೆ ಪ್ರಕರಣದ ಸೂಕ್ಷ್ಮತೆ ಅರಿತುಕೊಂಡ ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಗೆ ಮುಂದಡಿ ಇಟ್ಟಿದೆ.

ಇದನ್ನೂ ಓದಿ: VIDEO: ಸಿದ್ದರಾಮಯ್ಯಗೆ ಫ್ರೀ ಬಸ್​ ಟಿಕೆಟ್​ ಹಾರ ಹಾಕಿದ ವಿದ್ಯಾರ್ಥಿನಿ; ಸಿಎಂ ಫುಲ್​ ಖುಷ್

ಮಹಿಳೆಯರಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪನೆಗೆ ನಿರ್ಧಾರ

ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ, ತೀವ್ರ ಒತ್ತಾಯಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ನೇಹಾ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ ಎಂದು ಹೇಳಿದ್ದಾರೆ. ಇದೀಗ ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹಿಳೆಯರಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

‘ವಿಶೇಷ ನ್ಯಾಯಾಲಯಕ್ಕೆ ಕೊಡ್ತೀವಿ’

ಹುಬ್ಬಳ್ಳಿಯಲ್ಲಿ ನಡೆದಿದೆಯಲ್ಲ ಆ ಕೇಸ್ ಅನ್ನು ಸಿಐಡಿಗೆ ಕೊಡುತ್ತಿದ್ದೇವೆ. ಮಹಿಳೆಯರಿಗಾಗಿ ಸ್ಪೆಷಲ್ ಕೋರ್ಟ್ ಮಾಡುತ್ತೇವೆ. ಕೇಸ್​ಗಳನ್ನು ಇತ್ಯರ್ಥ ಮಾಡಬೇಕು. ಅದಕ್ಕಾಗಿ ಅದನ್ನು ವಿಶೇಷ ನ್ಯಾಯಾಲಯಕ್ಕೆ ಕೊಡುತ್ತೇವೆ.

ಸಿದ್ದರಾಮಯ್ಯ, ಸಿಎಂ

ಮಹಿಳೆಯ ವಿರುದ್ಧ ಅಪರಾಧಗಳ ಕಡಿವಾಣಕ್ಕೆ ವಿಶೇಷ ಕೋರ್ಟ್​ ತೆರೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಮಾಡಿದೆ. ಈ ಬಗ್ಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್​​ ಅವರು ಸಿಎಂ ಸಿದ್ದರಾಮಯ್ಯಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ವಿಶೇಷ ಕೋರ್ಟ್ ಸ್ಥಾಪನೆ ಆದೇಶ ಹೊರಡಿಸಿದ್ದಾರೆ

ಆದೇಶದಲ್ಲಿ ಏನಿದೆ?

ಸರ್ವೋಚ್ಛ ನ್ಯಾಯಾಲಯವು ಮಹಿಳೆಯರ ವಿರುದ್ಧದ ಹೀನಾಯ ಅಪರಾಧ ಪ್ರಕರಣಗಳಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಕೂಲಕುಂಷವಾಗಿ ಪರಿಶೀಲಿಸಿದೆ. ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ದಂಡ ಸಂಹಿತೆ ಮಾಡಲಾಗಿರುವ ತಿದ್ದುಪಡಿಗಳನ್ನು ಸರ್ಕಾರ ಗಂಭೀರವಾಗಿ ಗಮನಿಸಿದೆ. ಬರ್ಬರ ಹತ್ಯೆ ಹಿನ್ನೆಲೆಯಲ್ಲಿ ಈ ಪ್ರಕರಣವು ಜನಮಾನಸದ ನೆನಪಿನ ಆಳದಿಂದ ಮಾಸುವ ಮೊದಲೇ ಅಪರಾಧಿಗೆ ಶಿಕ್ಷೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಪರಿಣಾಮಗಳನ್ನು ಪರಿಗಣಿಸಿ, ಕುಮಾರಿ ನೇಹಾ ಹಿರೇಮಠ ಪ್ರಕರಣವು ಸಾಮಾಜಿಕ ಮತ್ತು ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರುವಂತಾಗಿರುತ್ತದೆ. ಆದ ಕಾರಣ ಒಂದು ವಿಶೇಷ ನ್ಯಾಯಾಲಯದ ಅವಶ್ಯಕತೆಯನ್ನು ಸರ್ಕಾರ ಮನಗಂಡಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಕುರಿತು ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲು ತಕ್ಷಣವೇ ಅಗತ್ಯ ಕ್ರಮ ತೆಗೆದುಳ್ಳಲಾಗುತ್ತೆ.

ಇದನ್ನೂ ಓದಿ: ಸುಪ್ರೀಂ ತೀರ್ಪಿನ ಬೆನ್ನಲ್ಲೇ ಹೋರಾಟಕ್ಕೆ ಸಜ್ಜು.. ಮೋದಿ ಸರ್ಕಾರದ ವಿರುದ್ಧ ಸಿಎಂ, ಡಿಸಿಎಂ ಸೇರಿ ಕಾಂಗ್ರೆಸ್​ ಸಮರ

ಇದನ್ನೂ ಓದಿ: ವಿಧಿಯ ಆಟ ಘೋರ! ಮುದ್ದಾದ ಕಂದಮ್ಮನ ಮೇಲೆ ಕಾರು ಹರಿಸಿದ ಅಪ್ಪ.. ಮಗು ಸಾವು

ಮಹಿಳೆಯ ವಿರುದ್ಧ ಅಪರಾಧಕ್ಕೆ ಕಡಿವಾಣ ಹಾಕೋ ನಿಟ್ಟಿನಲ್ಲಿ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಗ್ತಿದೆ. ಇನ್ನೊಂದೆಡೆ ನೇಹಾ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಹೋರಾಟಗಳು ಮುಂದುವರಿದಿದೆ. ಕ್ಯಾಂಡಲ್ ಮಾರ್ಚ್​ಗಳು ನಡೀತಿವೆ. ರಾಯಚೂರಲ್ಲಿ ನೇಹಾ ಹತ್ಯೆ ಖಂಡಿಸಿ ವಿವಿಧ ಸಂಘಟನೆಗಳಿಂದ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಲಾಯ್ತು.

ನೇಹಾ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಹಂತಕನನ್ನು ಎನ್​ಕೌಂಟರ್​ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಈ ನಡುವೆ ಮಹಿಳೆಯರ ಸುರಕ್ಷತೆಗೆ ಸರ್ಕಾರ ಹೆಜ್ಜೆ ಇಟ್ಟಿರೋದು ಸ್ವಾಗತಾರ್ಹ ನಿರ್ಧಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೇಹಾ ಹತ್ಯೆ ಕೇಸ್.. ರಾಜ್ಯದಲ್ಲಿ ಮಹಿಳೆಯರಿಗಾಗಿಯೇ ವಿಶೇಷ ಕೋರ್ಟ್ ಸ್ಥಾಪನೆ

https://newsfirstlive.com/wp-content/uploads/2024/04/HBL_NEHA_SIDDARAMAIAH.jpg

Load More