/newsfirstlive-kannada/media/post_attachments/wp-content/uploads/2024/09/JOB_FAIR.jpg)
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಅನುದಾನಿತ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯಾಲಯದಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್ ಸಿ ಹಾಗೂ ಡಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇಂಟರ್​ವ್ಯೂವ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಯುರ್ವೇದ ಮಹಾವಿದ್ಯಾಲಯದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಆಫ್​ಲೈನ್​ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಇನ್ನು ಈ ಹುದ್ದೆಗೆ ಬೇಕಾದ ಅರ್ಹತೆಗಳು ಏನೇನು ಎಂಬುದು ಇಲ್ಲಿ ನೀಡಲಾಗಿದೆ. ಆಸಕ್ತರು ಮೊದಲಿನಿಂದ ಕೊನೆವರೆಗೂ ಈ ಆರ್ಟಿಕಲ್ ಅನ್ನು ಓದಿಕೊಂಡು ಕೂಡಲೇ ಅಪ್ಲೇ ಮಾಡಬಹುದು. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ:SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?
ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸಿದ್ದಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು. ಇನ್ನು ಅರ್ಜಿಗಳು ಸರ್ಕಾರಿ ರಜೆ ಹಾಗೂ ಭಾನುವಾರದಂದು ಅರ್ಜಿಗಳು ಲಭ್ಯವಿರುವುದಿಲ್ಲ. ಕಾರ್ಯನಿರತ ದಿನಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರವರೆಗೆ ಫಾರ್ಮ್​​ಗಳನ್ನು ಇಲಾಖೆಯಿಂದ ಪಡೆಯಬಹುದು.
ಹುದ್ದೆಗಳ ಹೆಸರು: ದ್ವಿತೀಯ ದರ್ಜೆ ಸಹಾಯಕರು, ಬರಳಚ್ಚುಗಾರರು, ಸ್ಟಾಫ್ ನರ್ಸ್, ಎಂಎನ್​​ಎಂ ನರ್ಸ್, ಫಾರ್ಮಾಸಿಸ್ಟ್​, ಲ್ಯಾಬೋರೆಟರಿ ಟೆಕ್ನಿಷಿಯನ್, ಅಟೆಂಡರ್, ಸ್ಯಾನಿಟರಿ ಕೆಲಸಗಾರ, ವಾರ್ಡ್ ಆಯಾ,
ವೇತನ ಶ್ರೇಣಿ: 17,000 ದಿಂದ 62,600 ರೂ.ಗಳು
/newsfirstlive-kannada/media/post_attachments/wp-content/uploads/2024/09/JOB_FAIR_1.jpg)
ವಯೋಮಿತಿ: 18 ರಿಂದ 40 ವರ್ಷದ ಒಳಗಿನವರು ಸಲ್ಲಿಕೆ ಮಾಡಬಹುದು.
ವಿದ್ಯಾರ್ಹತೆ: SSLC, ಡಿಪ್ಲೋಮಾ ಇನ್ ನರ್ಸಿಂಗ್, ಡಿಪ್ಲೋಮಾ ಫಾರ್ಮಾಸಿಸ್ಟ್, ಡಿಪ್ಲೋಮಾ ಇನ್ ಸೆಕ್ರೆಟರಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಹಾಯಕ ನರ್ಸ್​ ಸೂಲಗಿತ್ತಿ ಪ್ರಮಾಣ ಹೊಂದಿರಬೇಕು.
ಅರ್ಜಿ ಶುಲ್ಕ: ಗ್ರೂಪ್​ ಸಿ ಹುದ್ದೆಗೆ 1,000 ರೂಪಾಯಿ ಹಾಗೂ ಡಿ ಹುದ್ದೆಗೆ 600 ರೂಪಾಯಿಗಳನ್ನು ಪಾವತಿ ಮಾಡಬೇಕು.
ಅರ್ಜಿ ಸಲ್ಲಿಕೆ ಮಾಡುವುದು: ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಕಾರ್ಯಾಲಯದಿಂದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿ 2 ಅರ್ಜಿಗಳನ್ನು ಪಡೆಯಬೇಕು. ಭರ್ತಿ ಮಾಡಿದ ಒಂದು ಪ್ರತಿಯನ್ನು ಪ್ರಾಚಾರ್ಯರು ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹೆಣ್ಣಿರಿ ಬಡಾವಣೆ ಹುಬ್ಬಳ್ಳಿ -580024 ಇವರಿಗೆ ಸಲ್ಲಿಕೆ ಮಾಡಬೇಕು. ಇನ್ನೊಂದು ಅರ್ಜಿಯನ್ನು ಆಯುಕ್ತರು, ಆಯುಷ್ ಇಲಾಖೆ, ಧನ್ವಂತರಿ ರಸ್ತೆ, ಬೆಂಗಳೂರು-560 009 ಇವರಿಗೆ ಅಂಚೆ ಮೂಲಕ ಸಲ್ಲಿಸಬೇಕು.
ಇದನ್ನೂ ಓದಿ: ಪದವೀಧರರಿಗೆ ವಿಮಾ ವಲಯದಲ್ಲಿ ಉದ್ಯೋಗಾವಕಾಶ.. ಅರ್ಜಿ ಆರಂಭ, ಎಷ್ಟು ಹುದ್ದೆ ಖಾಲಿ ಇವೆ?
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವುದು; ಅಕ್ಟೋಬರ್ 03, 2024
ಅರ್ಜಿ ಹಾಕುವ ಲಿಂಕ್ ಇಲ್ಲಿದೆ- https://ayush.karnataka.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us