ಕಾಲೇಜಿನಲ್ಲಿ ಪ್ರೀತಿ, ಪ್ರೇಮ ವಿವಾಹ.. ಪತಿಯ ಸಾವಿನ ಸುದ್ದಿ ಕೇಳಿ ಬಿಲ್ಡಿಂಗ್​​ನಿಂದ ಹಾರಿ ಪ್ರಾಣಬಿಟ್ಟ ಪತ್ನಿ

author-image
Ganesh
Updated On
ಕಾಲೇಜಿನಲ್ಲಿ ಪ್ರೀತಿ, ಪ್ರೇಮ ವಿವಾಹ.. ಪತಿಯ ಸಾವಿನ ಸುದ್ದಿ ಕೇಳಿ ಬಿಲ್ಡಿಂಗ್​​ನಿಂದ ಹಾರಿ ಪ್ರಾಣಬಿಟ್ಟ ಪತ್ನಿ
Advertisment
  • ಇಬ್ಬರು ಚೆನ್ನಾಗಿಯೇ ಇದ್ದರು, ಅವರ ಬಾಳಲ್ಲಿ ಆಗಿದ್ದೇನು..?
  • ಅದೊಂದು ಸಮಸ್ಯೆಯಿಂದ ಜೀವವನ್ನೇ ತೆಗೆದುಕೊಂಡ!
  • ಪತಿಯ ಸಾವಿನ ಸುದ್ದಿ ತಿಳಿದು ಕಟ್ಟಡದಿಂದ ಜಿಗಿದ ಪತ್ನಿ

ಉತ್ತರ ಪ್ರದೇಶದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪಾಟ್ನಾ ನಿವಾಸಿ ಹರೀಶ್ ಬಾಗೇಶ್ ಮತ್ತು ಗೋರಖ್‌ಪುರ ನಿವಾಸಿ ಸಂಚಿತಾ ಶ್ರೀವಾಸ್ತವ್ ಶಾಲಾ ದಿನಗಳಿಂದಲೂ ಸ್ನೇಹಿತರಾಗಿದ್ದರು.

publive-image

ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ, ಪರಸ್ಪರ ಇಷ್ಟಪಟ್ಟು ಮದುವೆ ಆಗಿದ್ದರು.  ಮದುವೆಯಾಗಿ ಕೆಲವು ವರ್ಷಗಳ ಕಾಲ ಸಂಸಾರ ಮಾಡಿದ ಬಳಿಕ.. ಅಂದರೆ ನಿನ್ನೆ ವಾರಣಾಸಿಯಲ್ಲಿ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಪತಿಯ ಸಾವಿನ ಆಘಾತದಿಂದ ಸಂಚಿತಾ ತವರು ಮನೆಯ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾಳೆ.

ಇದನ್ನೂ ಓದಿ:22 ಬಾಲ್​​ನಲ್ಲಿ 48 ರನ್​​..! ನಿನ್ನೆಯ ಪಂದ್ಯದಲ್ಲಿ ರಿಂಕು ಸಿಂಗ್​ ಆರ್ಭಟ ಯಾರೂ ಮರೆಯುವಂತಿಲ್ಲ..!

publive-image

ದಂಪತಿಯ ಆತ್ಮಹತ್ಯೆಯಿಂದ ಎರಡು ಕುಟುಂಬಗಳಲ್ಲೂ ಶೋಕ ಮಡುಗಟ್ಟಿದೆ. ಪೊಲೀಸರ ಪ್ರಕಾರ, ಹರೀಶ್ ಮತ್ತು ಸಂಚಿತಾ ಇಬ್ಬರು ವಾರಣಸಿಯಲ್ಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಪಿಯುಸಿ ಬಂದ ಮೇಲೆ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ನಂತರ ಮದುವೆ ಕೂಡ ಆಗಿದ್ದರು. ಮದುವೆ ಬಳಿಕ ದಂಪತಿ ಮುಂಬೈಗೆ ಶಿಫ್ಟ್​ ಆಗಿತ್ತು. ಅಲ್ಲಿಯೇ ಎಂಬಿಎ ಮುಗಿಸಿದ್ದ ಹರೀಶ್, ಖಾಸಗಿ ಬ್ಯಾಂಕ್​ನಲ್ಲಿ ಕೆಲಸ ಮಾಡಲು ಶುರುಮಾಡಿದ್ದ.

publive-image

ಈ ಅವಧಿಯಲ್ಲಿ ಹರೀಶ್ ಅನೇಕ ಸ್ಥಳಗಳಲ್ಲಿ ಕೆಲಸಕ್ಕಾಗಿ ಹುಡುಕಾಡಿದ್ದ. ಆದರೆ ಕೆಲಸ ಎಲ್ಲಿಯೂ ಸಿಗಲಿಲ್ಲ. ಇದರಿಂದ ನೊಂದ ಹರೀಶ್, ತನ್ನ ಮನೆಗೆ ಹೋಗೋದಾಗಿ ಹೇಳಿ ಅತ್ತೆ ಮನೆಯಿಂದ ಹೊರಟಿದ್ದ. ಆದರೆ ಹರೀಶ್ ಮನೆಗೆ ಹೋಗದೇ ವಾರಣಸಿಗೆ ಹೋಗಿದ್ದಾನೆ. ಆಗ ಕುಟುಂಬಸ್ಥರು ಫೋನ್ ಕರೆ ಮಾಡಿದ್ದಾರೆ. ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ್ದಾರೆ. ತೀವ್ರ ಹುಡುಕಾಟ ನಡೆಸಿದಾಗ ವಾರಣಸಿಯ ಸೋಮನಾಥದಲ್ಲಿರುವ ಹೋಂ ಸ್ಟೇ ಒಂದಕ್ಕೆ ಹೋಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಈ ವಿಚಾರ ಗೋರಕ್​​ಪುರದಲ್ಲಿರುವ ಅವರ ಪತ್ನಿ ಸಿಂಚನಾಗೆ ಗೊತ್ತಾಗಿದೆ. ಆಕೆ ಮನೆಯ ಕಟ್ಟಡದಿಂದ ಹಾರಿ ಜೀವ ಬಿಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:180 ಸಾಕ್ಷ್ಯಗಳ ಸಂಗ್ರಹಿಸಿದ ಪೊಲೀಸರಿಗೆ ಆ ಎರಡು ವಸ್ತುಗಳದ್ದೇ ಟೆನ್ಷನ್..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment