newsfirstkannada.com

ತಂಗಿ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ ಗಂಡ.. ಆಮೇಲೇನಾಯ್ತು?

Share :

Published February 19, 2024 at 8:02pm

  ಗಂಡ ಮಾಡಿದ ಕೃತ್ಯಕ್ಕೆ ನರಕ ಯಾತನೆ ಅನುಭವಿಸುತ್ತಿರೋ ಪತ್ನಿ

  ಆ ಇಬ್ಬರ ಸುಖ ಸಂಸಾರದಲ್ಲಿ ವಕ್ಕರಿಸಿತ್ತು ಅನುಮಾನವೆಂಬ ಭೂತ

  2019ರಲ್ಲಿ ದಿವ್ಯನ ಜೊತೆ ಪ್ರೀತಿಸಿ ಮದುವೆಯಾಗಿದ್ದ ಜಯ ಪ್ರಕಾಶ್

ಬೆಂಗಳೂರು: ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಆ ಸಂಸಾರ ಚೆನ್ನಾಗಿಯೂ ಇತ್ತು. ಆದ್ರೆ ಈ ಸುಖ ಸಂಸಾರದಲ್ಲಿ ಅನುಮಾನವೆಂಬ ಭೂತ ವಕ್ಕರಿಸಿತ್ತು. ಆಗಲೇ ಸಂಸಾರದ ಹಳಿ ತಪ್ಪಿ ಬದುಕಿನ ಹಾದಿಯೇ ಬದಲಾಗಿತ್ತು. ಗಂಡತಿ ಮೇಲೆ ಪದೇ ಪದೇ ಅನುಮಾನ ಪಡುತ್ತಿದ್ದ ಪಾಪಿ ಪತಿ ಈಗ ಪತ್ನಿಗೆ ಚಾಕೂ ಹಾಕಿ ಬಿಟ್ಟಿದ್ದಾನೆ. ಅನುಮಾನಂ ಪೆದ್ದರೋಗಂ ಅನ್ನೋ ಮಾತಿದೆ. ಒಮ್ಮೊಮ್ಮೆ ಈ ಅನುಮಾನದ ಭೂತ ಎಂತೆಂಥಾ ಕೆಲಸ ಮಾಡುತ್ತೆ ಅಂದ್ರೆ ಅದರ ಪರಿಣಾಮ ರಣ ಭಯಕಂರವಾಗಿರುತ್ತೆ. ಇದೀಗ ಅನುಮಾನದ ಭೂತಕ್ಕೆ ಪತ್ನಿಯೊಬ್ಬಳು ನರಕ ಯಾತನೆ ಅನುಭವಿಸಿಬಿಟ್ಟಿದ್ದಾಳೆ.

2019ರಲ್ಲಿ ದಾವಣಗೆರೆಯ ದಿವ್ಯ ಅನ್ನೋ ಹುಡುಗಿಯನ್ನ ಜಯ ಪ್ರಕಾಶ್ ಮದುವೆಯಾಗಿದ್ದ. 32 ವರ್ಷದ ಜಯಪ್ರಕಾಶ್ ಹಾಗೂ 26 ವರ್ಷದ ದಿವ್ಯಶ್ರೀ ಪರಸ್ಪರ ಪ್ರೀತಿಸಿ 2019ರಲ್ಲಿ ದಾವಣಗೆರೆಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ರು. ಆದ್ರೀಗ ಪ್ರೀತಿಸಿ ಮದುವೆಯಾದ ಹೆಂಡತಿಗೆ ಈ ಪಾಪಿ ಚಾಕು ಹಾಕಿಬಿಟ್ಟಿದ್ದಾನೆ. ಮದುವೆಯಾದ ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು. ಆರಂಭದಲ್ಲಿ ಇಬ್ಬರೂ ಕ್ಯಾಟರಿಂಗ್ ಒಂದು ಶುರು ಮಾಡಿ ಸಂಸಾರ ಸಾಗಿಸ್ತಿದ್ರು. ಆದ್ರೆ ಅದ್ಯಾವಾಗ ಜಯ ಪ್ರಕಾಶ್​ ಆರೋಗ್ಯದಲ್ಲಿ ಏರುಪೇರು ಉಂಟಾಯ್ತು ಸಂಸಾರದ ಬಂಡಿಯೇ ಉಲ್ಟಪಲ್ಟ ಆಗೋಯ್ತು. ಅತ್ತ ಜಯ ಪ್ರಕಾಶ್ ಕೆಲಸ ಕಾರ್ಯ ಬಿಟ್ಟು ಮನೆಯಲ್ಲೇ ಇದ್ದ. ಇನ್ನು ದಿವ್ಯ ಕೂಡ ಕ್ಯಾಟರಿಂಗ್ ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋಗುತ್ತಿದ್ದಳು.

ಇದನ್ನು ಓದಿ: ಹೈಕೋರ್ಟ್‌ನಲ್ಲಿ ನಿತ್ಯಾನಂದನ ಕೈಲಾಸದ ಬಗ್ಗೆ ಪ್ರಸ್ತಾಪ.. ಕಿಂಗ್ ಆಫ್ ಕಿಂಗ್ ಎಂದು ಕಿಚಾಯಿಸಿದ ಜಡ್ಜ್‌

ಇಡೀ ಮನೆಯ ಜವಾಬ್ದಾರಿಯನ್ನು ತಾನೇ ಹೊತ್ತಿದ್ಳು. ಜೊತೆಗೆ ಗಂಡನ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ತಿದ್ಳು. ಆದ್ರೆ ಈ ವೇಳೆ ಜಯಪ್ರಕಾಶ್​ಗೆ ಹೆಂಡತಿ ಮೇಲೆ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಇದೇ ಕಾರಣಕ್ಕೆ ಪ್ರತಿ ದಿನ ದಿವ್ಯ ಜೊತೆ ಜಗಳ ಗಲಾಟೆ ಮಾಡೋದಕ್ಕೂ ಶುರು ಮಾಡಿದ್ದಾನೆ. ಮೂಡಲಪಾಳ್ಯದಲ್ಲಿ ಮನೆ ಮಾಡಿಕೊಂಡು ವಾಸವಿದ್ದ ದಂಪತಿ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡಿತಲೇ‌ ಇತ್ತು. ಅಲ್ಲದೇ ಪತ್ನಿ ಫೋನ್​ನಲ್ಲಿ‌ ಹೆಚ್ಚು ಮಾತಾಡ್ತಾಳೆ ಹಾಗಾಗಿ ಆಕೆಗೆ ಅಕ್ರಮ ಸಂಬಂಧ ಇದೆ ಅನ್ನೋ ಅನುಮಾನ ಗಂಡನ ತಲೆಗೆ ಬಂದಿತ್ತು. ಅಲ್ಲಿ ಮನೆ ಖಾಲಿ ಮಾಡಿ ಸುಂಕದಕಟ್ಟೆ ಸಮೀಪ ಹೊಸದೊಂದು ಮನೆ ಬಾಡಿಗೆ ಪಡೆದು ಬದುಕು ಶುರು ಮಾಡಿದ್ದರು. ಆದ್ರೆ ಫೆಬ್ರವರಿ 15ರಂದು ಜಯಪ್ರಕಾಶ್​ ಪತ್ನಿ ದಿವ್ಯ ತೊಡೆಗೆ ಚಾಕು ಚುಚ್ಚಿಬಿಟ್ಟಿದ್ದಾನೆ.

ತಂಗಿ ನಿಶ್ಚಿತಾರ್ಥಕ್ಕೆ ಬರಲಿಲ್ಲ ಅಂತ ಚಾಕು ಹಾಕಿದ ಪಾಪಿ ಪತಿ

ಹೌದು, ಫೆಬ್ರವರಿ 15ರಂದು ಈ ಜಯಪ್ರಕಾಶ್ ತಂಗಿ ನಿಶ್ಚಿತಾರ್ಥಕ್ಕೆ ಇತ್ತಂತೆ. ಆದ್ರೆ ದಿವ್ಯ ಈ ನಿಶ್ಚಿತಾರ್ಥಕ್ಕೆ ಹೋಗಿಲ್ಲ. ಇದು ಜಯಪ್ರಕಾಶ್ ಕೋಪಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ದಿವ್ಯಶ್ರೀ ಜೊತೆಗೆ ಜಯಪ್ರಕಾಶ್ ಗಲಾಟೆ ಶುರು ಮಾಡಿದ್ದ. ಗಲಾಟೆ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಕೊಲ್ಲಲು ಬಂದಿದ್ದಾನೆ. ದಿವ್ಯಶ್ರೀ ತಪ್ಪಿಸಿಕೊಂಡಿದ್ದ ಕಾರಣ ಆಕೆ ತೊಡೆಗೆ ಚಾಕು ಚುಚ್ಚಿದ್ದು ಗಂಭೀರವಾಗಿ ಗಾಯವಾಗಿದೆ. ಗಂಡ ದುಡಿತಿಲ್ಲ ಅಂತ ಗೊತ್ತಿದ್ರೂ ದಿವ್ಯ ಅದೇಗೋ ಕಷ್ಟಪಟ್ಟು ಸಂಸಾರ ಸಾಗಿಸುತ್ತಿದ್ದಳು. ಆದ್ರೆ, ಪಾಪಿ ಜಯಪ್ರಕಾಶ್​ ತಲೆಗೆ ಅನುಮಾನದ ಭೂತ ಹೊಕ್ಕಿಬಿಟ್ಟಿತ್ತು. ಇದೇ ಅನುಮಾನದ ಭೂತದಿಂದಾಗಿ ಪದೇ ಪದೇ ಜಗಳ ಮಾಡ್ತಿದ್ದ. ಇದೇ ವೇಳೆ ದಿವ್ಯ ಜಯಪ್ರಕಾಶ್ ತಂಗಿ ನಿಶ್ಚಿತಾರ್ಥಕ್ಕೆ ಹೋಗಿಲ್ಲ. ಇದನ್ನು ನೆಪ ಮಾಡಿಕೊಂಡಿದ್ದ ಜಯಪ್ರಕಾಶ್ ಪತ್ನಿ ಜೊತೆ ಜಗಳ ಮಾಡ್ಕೊಂಡು ಕೊನೆಗೆ ದಿವ್ಯಗೆ ಚಾಕೂ ಹಾಕಿ ಬಿಟ್ಟಿದ್ದಾನೆ.

ಪಾಪಿ ಪತಿಯ ಅಟ್ಟಹಾಸಕ್ಕೆ ಪಾಪ ದಿವ್ಯ ಆಸ್ಪತ್ರೆಗೆ ದಾಖಲಾಗಿ 8 ಹೊಲಿಗೆ ಬಿದ್ದಿದೆ. ಗಂಡ ಮಾಡಿದ ಕೃತ್ಯಕ್ಕೆ ದಿವ್ಯ ಈಗ ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸ್ತಿದ್ದಾಳೆ. ಪ್ರೀತಿಸಿ ಮದುವೆಯಾದವಳ ಪಾಲಿಗೆ ಗಂಡನೇ ವಿಲನ್ ಆಗಿ ಬಿಟ್ಟಿದ್ದಾನೆ. ಘಟನೆಗೆ ಸಂಬಂಧಪಟ್ಟಂತೆ ದಿವ್ಯಶ್ರೀ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಎಫ್ಐಆರ್ ದಾಖಲಿಸಿಕೊಂಡಿರೊ ಪೊಲೀಸರು ಜಯಪ್ರಕಾಶ್ ನನ್ನ ಅರೆಸ್ಟ್ ಮಾಡಿದ್ದಾರೆ. ಮಾಡಿದ ತಪ್ಪಿಗಾಗಿ ಈಗ ಜಯ ಪ್ರಕಾಶ್ ಕಂಬಿ ಎಣಿಸುವಂತಾಗಿದೆ. ಏನೇ ಹೇಳಿ ಪ್ರೀತಿಸಿ ಮದುವೆಯಾದವರು ಛಲದೊಂದಿಗೆ ಬದುಕು ನಡೆಸಿ ಪ್ರೀತಿಗೆ ವಿರೋಧವಾಗಿದ್ದ ಪೋಷಕರಿಗೆ ಉತ್ತರ ನೀಡಬೇಕಿತ್ತು. ಆದ್ರೆ ಗಂಡನ ಅನುಮಾನದ ಭೂತಕ್ಕೆ ಇಡೀ ಸಂಸಾರವೇ ಹಳಿ ತಪ್ಪಿದ್ದು, ಪ್ರೀತಿ ಮಾಡಿದ ತಪ್ಪಿಗೆ ದಿವ್ಯ ಈಗ ಯಮ ಯಾತನೆ ಅನುಭವಿಸ್ತಿರೋದು ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂಗಿ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ ಗಂಡ.. ಆಮೇಲೇನಾಯ್ತು?

https://newsfirstlive.com/wp-content/uploads/2024/02/death_-1.jpg

Load More