newsfirstkannada.com

ಭಾವನಿಂದ ಅತ್ಯಾ**ಕ್ಕೊಳಗಾದ ಮಹಿಳೆ.. ವಿಷಯ ತಿಳಿಸಿದಂತೆ ಪತ್ನಿಯನ್ನೇ ಕೊಲೆ ಮಾಡಲು ಮುಂದಾದ ಗಂಡ

Share :

Published April 28, 2024 at 11:12am

Update April 28, 2024 at 11:13am

    ಅತ್ಯಾಚಾರಕ್ಕೆ ಒಳಗಾದ ಹೆಂಡತಿಯನ್ನು ಅತ್ತಿಗೆ ಎಂದುನ ಕರೆದ ಗಂಡ

    ಭಾವ ಅತ್ಯಾಚಾರವೆಸಗಿದರು ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಕೊಲೆ ಮಾಡಲು ಯತ್ನಿಸುವ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ಭಾವ

ಮಹಿಳೆಯೊಬ್ಬಳು ತನ್ನ ಭಾವನಿಂದ ಅತ್ಯಾಚಾರಕ್ಕೊಳಗಾಗಿದ್ದು, ಈ ವಿಚಾರವನ್ನು ಗಂಡನ ಬಳಿ ತಿಳಿಸುತ್ತಿದ್ದಂತೆಯೇ ಆತ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಮುಜಾಫರ್​ ನಗರದ ಮಹಿಳೆ ತನ್ನ ಗಂಡನ ಸಹೋದರನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.

ಏಪ್ರಿಲ್​ 2 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾವ ತನ್ನ ಮೇಲೆ ಅತ್ಯಾಚಾರವೆಸಗಿದ್ದನು ಮಹಿಳೆ ತನ್ನ ಗಂಡ ಬಳಿ ಹೇಳಿಕೊಂಡಿದ್ದಾಳೆ. ಆದರೆ ಈ ವಿಚಾರ ತಿಳಿದ ಬಳಿಕ ಆಕೆಯ ಗಂಡ ‘ನೀನು ನನ್ನ ಹೆಂಡತಿಯಲ್ಲ ಅತ್ತಿಗೆ’ ಎಂದು ಹೇಳಿದ್ದಾನೆ.

ಮರುದಿನ ಗಂಡ ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಸಿದ್ದಾನೆ. ಈ ಸಮಯದಲ್ಲಿ ಅತ್ಯಾಚಾರವೆಸಗಿದ ಭಾವ ತನ್ನ ಮೊಬೈಲ್​ನಲ್ಲಿ ಘಟನೆಯನ್ನ ರೆಕಾರ್ಡ್​​ ಮಾಡಿದ್ದಾನೆ.

ಇದನ್ನೂ ಓದಿ: ‘ಚಾಣಕ್ಯನನ್ನೇ ಬಿಟ್ಟಿಲ್ಲ, ಇನ್ನು ನಾನ್ಯಾವ ಲೆಕ್ಕ​’; ಟ್ರೋಲಿಗರಿಗೆ ಖಡಕ್​ ಉತ್ತರ ಕೊಟ್ಟ ಪ್ರಾಚಿ

ಮಹಿಳೆ ತನಗಾದ ಅನ್ಯಾಯವನ್ನು ವಿಡಿಯೋ ಮತ್ತು ಲಿಖಿತ ದೂರಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ತಿಳಿದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಐಪಿಸಿ ಸೆಕ್ಷನ್​ 376, 307, 328 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More