newsfirstkannada.com

ರಾಮಲಲ್ಲಾನ ಶುಭ ಕಾರ್ಯಕ್ಕೆ ದೈತ್ಯ ಲಡ್ಡು; 1265 ಕೆಜಿ ತೂಕದ ಲಡ್ಡುವನ್ನೇ ತಯಾರಿಸಲು ಕಾರಣವೇನು ಗೊತ್ತಾ..?

Share :

Published January 18, 2024 at 7:49am

    ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ

    ದೇಶದ ನಾನಾ ಭಾಗಗಳಿಂದ ರಾಮಲಲ್ಲಾನಿಗೆ ಉಡುಗೊರೆ

    ಹೈದ್ರಾಬಾದ್​​ನಿಂದ ಹೊರಟ ದೈತ್ಯ ಲಡ್ಡು

ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಭಕ್ತರು ರಾಮಲಲ್ಲಾಗಾಗಿ ವಿಶೇಷ ಉಡುಗೊರೆಗಳನ್ನು ನೀಡ್ತಿದ್ದಾರೆ. ಇದೀಗ ಹೈದ್ರಾಬಾದ್​ನ ವ್ಯಕ್ತಿಯೊಬ್ಬರು ಅಯೋಧ್ಯೆಗಾಗಿ 1,265 ಕೆಜಿ ತೂಕದ ವಿಶೇಷ ಲಡ್ಡುವನ್ನು ತಯಾರಿಸಿದ್ದಾರೆ.

ಹೈದ್ರಾಬಾದ್​ ಕಂಟೋನ್ಮಂಟ್ ಪಿಕೆಟ್ ಪ್ರದೇಶದ ಶ್ರೀ ರಾಮ್ ಕ್ಯಾಟರಿಂಗ್ ಸರ್ವಿಸಸ್ ಮಾಲೀಕ ನಾಗಭೂಷಣ ರೆಡ್ಡಿ ಈ ಲಡ್ಡು ತಯಾರಿಸಿದ್ದಾರೆ. ಈ ಲಡ್ಡು ಸುಮಾರು 1,265 ಕೆಜಿ ತೂಕವಿದ್ದು, ಜೈ ಶ್ರೀ ರಾಮ್ ಎಂದು ಚಿತ್ರಿಸಲಾಗಿದೆ. ಈ ಲಡ್ಡು ವಾಹನದ ಮೂಲಕ ಅಯೋಧ್ಯೆ ತಲುಪಲಿದೆ.

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯು ಜನವರಿ 22 ರಂದು ನಡೆಯಲಿದೆ. ಲಡ್ಡು ಜನವರಿ 21 ಬೆಳಗ್ಗೆ 10 ಗಂಟೆ ಸುಮಾರಿಗೆ ಅಯೋಧ್ಯೆ ತಲುಪುವ ನಿರೀಕ್ಷೆ ಇದೆ. ದೂರದ ಪ್ರಯಾಣ ಹಿನ್ನೆಲೆಯಲ್ಲಿ ಲಡ್ಡು ಹಾಳಾಗದಂತೆ ಗ್ಲಾಸ್​ಗಳ ಮೂಲಕ ರಕ್ಷಣೆ ನೀಡಲಾಗಿದೆ. ಅಯೋಧ್ಯೆಗೆ ಕಳುಹಿಸುವ ಸಲುವಾಗಿ ತಾವು ಕಳೆದ ಒಂದು ತಿಂಗಳಿಂದ ತಯಾರಿ ನಡೆಸಿರುವುದಾಗಿ ರೆಡ್ಡಿ ಹೇಳಿದ್ದಾರೆ. 1265 ಕೆಜೆ ತೂಕದ ಲಡ್ಡು ಯಾಕೆ ಮಾಡಲಾಗಿದೆ ಅಂದರೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಮಾಡಿದ ದಿನದಿಂದ ಉದ್ಘಾಟನೆ ಆಗುವವರೆಗೆ ಎಷ್ಟು ದಿನಗಳು ಆಗುತ್ತದೆ ಎಂದು ಲೆಕ್ಕ ಹಾಕಿ ಮಾಡಿದ್ದಾರೆ.

ಇದನ್ನೂ ಓದಿ: 1,265 ಕೆ.ಜಿ ತೂಕದ ಲಾಡು! ಅಯೋಧ್ಯೆಗೆ ಒಂದೇ ದಿನದಲ್ಲಿ ತಯಾರಾಯ್ತು ಈ ನೈವೇದ್ಯ!

ಲಡ್ಡುವನ್ನು ರೆಫ್ರಿಜರೇಟೆಡ್​​ ಗಾಜಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ಈ ಲಾಡನ್ನು ಸುಮಾರು 30 ಜನರು ತಯಾರಿಸಿದ್ದು, 24 ಗಂಟೆಗಳಲ್ಲಿ 1,265 ಕೆ.ಜಿ ತೂಕದ ಲಾಡನ್ನು ತಯಾರಿಸಿದ್ದಾರೆ. ನಾಗಭೂಷಣ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ‘ನಾನು 2000 ರಿಂದ ಶ್ರೀ ರಾಮ್ ಕ್ಯಾಟರಿಂಗ್ ಎಂಬ ಕೇಟರಿಂಗ್ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ರಾಮ ಜನ್ಮಭೂಮಿ ದೇವಸ್ಥಾನದ ಭೂಮಿ ಪೂಜೆ ನಡೆಯುತ್ತಿರುವಾಗ, ಶ್ರೀರಾಮನಿಗೆ ಯಾವ ನೈವೇದ್ಯವನ್ನು ನೀಡಬಹುದು ಎಂದು ಯೋಚಿಸಿದ್ದೆವು. ನಂತರ, ಭೂಮಿ ಪೂಜೆಯ ದಿನದಿಂದ ದೇವಾಲಯ ತೆರೆಯುವ ದಿನದವರೆಗೆ ನಾವು ಪ್ರತಿ ದಿನ 1 ಕೆಜಿ ಲಡ್ಡುವನ್ನು ನೀಡುತ್ತೇವೆ ಎಂಬ ಯೋಚನೆಗೆ ಬಂದೆವು’ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾನ ಶುಭ ಕಾರ್ಯಕ್ಕೆ ದೈತ್ಯ ಲಡ್ಡು; 1265 ಕೆಜಿ ತೂಕದ ಲಡ್ಡುವನ್ನೇ ತಯಾರಿಸಲು ಕಾರಣವೇನು ಗೊತ್ತಾ..?

https://newsfirstlive.com/wp-content/uploads/2024/01/LADDU-1.jpg

Load More