/newsfirstlive-kannada/media/post_attachments/wp-content/uploads/2025/07/Ganesh-with-rcb-5.jpg)
ಕೇರಳ ನರ್ಸ್ ನಿಮಿಷಾ ಪ್ರಿಯಾ (Nimisha Priya) ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಭಾರತದಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಇದೀಗ ಆಕೆಯ ಮಗಳು ಕೂಡ ಯೆಮೆನ್ಗೆ ಹೋಗಿದ್ದು, ಅಲ್ಲಿನ ಅಧಿಕಾರಿಗಳ ಬಳಿ ಅಮ್ಮನನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಿ ಮತ್ತು ಬಂಧಮುಕ್ತಗೊಳಿಸಿ ಎಂದು ಕಣ್ಣೀರು ಇಟ್ಟಿದ್ದಾಳೆ.
ಇದನ್ನೂ ಓದಿ: ಕಾಲಾಯ ತಸ್ಮೈ ನಮಃ..! ಡಿ ಬಾಸ್ ಫ್ಯಾನ್ಸ್ ಪೇಜ್ನಿಂದ ಅಭಿಮಾನಿಗಳಿಗೆ ಎಚ್ಚರಿಕೆ
ಮಿಷೆಲ್ (Mishel) ಎಂಬ 13 ವರ್ಷದ ಮಗಳು ಅಮ್ಮನ ಬಿಡಿಸಿಕೊಂಡು ಬರಲು ಯೆಮೆನ್ಗೆ ಹೋಗಿದ್ದಾಳೆ. ತಂದೆ ಟಾಮಿ ಥಾಮಸ್ ಹಾಗೂ ಜಿಪಿಐ (Global Peace Initiative) ಸಂಸ್ಥಾಪಕ ಡಾ.ಕೆ.ಎ.ಪೌಲ್ ಜೊತೆ ಮಿಷೆಲ್ ಯೆಮೆನ್ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾಳೆ.
10 ವರ್ಷದಿಂದ ಅಮ್ಮನ ಮುಖ ನೋಡದ ಮಗಳು
ಕೇರಳದ ನಿಮಿಷ ಪ್ರಿಯಾ ಯೆಮೆನ್ ಜೈಲಿನಲ್ಲಿ ತುಂಬಾ ವರ್ಷಗಳಿಂದ ಇದ್ದಾಳೆ. ಆಕೆಯ ಮಗಳಾದ ಮಿಷೆಲ್ ದಶಕಗಳಿಂದ ಅಮ್ಮನನ್ನು ನೋಡಿಲ್ಲ. ಅಮ್ಮನಿಗಾಗಿ ಹಂಬಲಿಸುತ್ತಿರುವ ಆಕೆ, ಇಂಗ್ಲಿಷ್ ಹಾಗೂ ಮಲಿಯಾಳಿಯಲ್ಲಿ ಮನವಿ ಮಾಡಿಕೊಂಡಿದ್ದಾಳೆ. ಐ ಲವ್ ಯೂ ಮಮ್ಮಿ. ದಯವಿಟ್ಟು ಅಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ. ನನಗೆ ಆಕೆಯನ್ನು ನೋಡಬೇಕು ಅಂತಾ ತುಂಬಾ ಕಾಡುತ್ತಿದೆ. ಐ ಮಿಸ್ ಯೂ ಮಮ್ಮಿ ಎಂದು ಕಣ್ಣೀರು ಇಟ್ಟಿದ್ದಾಳೆ.
ಇದನ್ನೂ ಓದಿ: ರಕ್ತ ಹಣ ಬೇಡ ಎಂದ ಸಂತ್ರಸ್ತ ಕುಟುಂಬ; ನಿಮಿಷಾಳ ಉಳಿಸಿಕೊಳ್ಳಲು ಎಷ್ಟು ಕೋಟಿ ನೀಡಲು ಸಿದ್ಧವಿದೆ..?
ಇನ್ನು ನಿಮಿಷಾ ಪ್ರಿಯಾ ಅವರ ಪತಿ ಟಾಮಿ ಥಾಮಸ್ ಕೂಡ ಪತ್ನಿಗಾಗಿ ಕಣ್ಣೀರು ಇಟ್ಟಿದ್ದಾರೆ. ದಯವಿಟ್ಟು ಮಡದಿಯನ್ನು ಉಳಿಸಿ. ವಾಪಸ್ ಆಕೆಯನ್ನು ತವರಿಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
ಸಂತ್ರಸ್ಥ ಕುಟುಂಬಕ್ಕೆ ಧನ್ಯವಾದ
ಬಳಿಕ ಯೆಮೆನ್ ಅಧಿಕಾರಿಗಳಿಗೆ ಹಾಗೂ ಸಂತ್ರಸ್ತ ತಲಾಲ್ ಕುಟುಂಬಕ್ಕೆ ನಿಮಿಷಾ ಪ್ರಿಯಾ ಕುಟುಂಬದ ಪರವಾಗಿ ಕೃತಜ್ಞತೆ ಸಲ್ಲಿಸಿ ಮಾತನಾಡಿರುವ ಡಾ.ಕೆ.ಎ.ಪೌಲ್, ನಿಮಿಷಾ ಪ್ರಿಯಾಗೆ ಇರುವ ಏಕೈಕ ಮಗಳು ಮಿಷೆಲ್. ಆಕೆ ಕಳೆದ 10 ವರ್ಷಗಳಿಂದ ಅಮ್ಮನನ್ನೇ ನೋಡಿಲ್ಲ. ಮಿಷೆಲ್ ಇಲ್ಲಿದ್ದಾಳೆ. ಈ ಸಂದರ್ಭದಲ್ಲಿ ನಾನು ತಲಾಲ್ ಕುಟುಂಬಕ್ಕೆ ಧನ್ಯವಾದ ಹೇಳುತ್ತೇನೆ. ನೀವು ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಿದ ತಕ್ಷಣ.. ಅದು ಇಂದಲ್ಲ, ನಾಳೆ ಆಗಿರಬಹುದು ಅಥವಾ ನಾಡಿದ್ದೇ ಆಗಿರಬಹುದು. ನಾವು ತುಂಬಾ ಕೃತಜ್ಞರಾಗಿರುತ್ತವೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿಮಿಷಾ ಪ್ರಿಯಾಳನ್ನ ಯೆಮೆನ್ ಸರ್ಕಾರ ಗಲ್ಲು ಶಿಕ್ಷೆಯಿಂದ ವಿನಾಯತಿ ನೀಡಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತ ಸರ್ಕಾರವಾಗಲಿ ಅಥವಾ ಯೆಮೆನ್ ಸರ್ಕಾರವಾಗಲಿ ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಮಾತ್ರವಲ್ಲ ನಿಮಿಷ ಪ್ರಿಯಾಳ ಕುಟುಂಬ ಕೂಡ ಈ ಬಗ್ಗೆ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: TCS ಕಂಪನಿಯಿಂದ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್.. ಕೆಲಸದಿಂದ ತೆಗೆಯಲು ಕಾರಣ ಏನು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ