newsfirstkannada.com

×

VIDEO: ನಾಯಿ ವಿಚಾರಕ್ಕೆ ಕಿರಿಕ್​​.. ಮಹಿಳೆಗೆ ಕಪಾಳಮೋಕ್ಷ ಮಾಡಿದ ನಿವೃತ್ತ ಐಎಎಸ್​​ ಅಧಿಕಾರಿ

Share :

Published October 31, 2023 at 4:53pm

    ನಾಯಿಯನ್ನು ಲಿಫ್ಟ್​ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಗಲಾಟೆ!

    ಮಹಿಳೆ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ನಡುವೆ ವಾಗ್ವಾದ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ

ಲಕ್ನೋ: ನಾಯಿಯನ್ನು ಲಿಫ್ಟ್​ನಲ್ಲಿ ಕರೆದೊಯ್ಯುವ ವಿಚಾರಕ್ಕೆ ಮಹಿಳೆ ಹಾಗೂ ನಿವೃತ್ತ ಐಎಎಸ್​ ಅಧಿಕಾರಿ ನಡುವೆ ಮಾರಾಮಾರಿ ನಡೆದಿರೋ ಘಟನೆ ನೋಯ್ಡಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಮಹಿಳೆಗೆ ಐಎಎಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್​ನ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ನಿವೃತ್ತ ಐಎಎಸ್​ ಅಧಿಕಾರಿ ಆರ್‌ಪಿ ಗುಪ್ತಾ ಸೆಕ್ಟರ್ 108ರ ಪಾರ್ಕ್ ಲಾರೇಟ್ ಸೊಸೈಟಿಯ ನಿವಾಸಿ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ..?

ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್​ನಲ್ಲಿ ಬಂದಿದ್ದರು. ಆದರೆ ಗುಪ್ತಾ ಅವರು ಮಹಿಳೆಗೆ ನಾಯಿಯೊಂದಿಗೆ ಲಿಫ್ಟ್​ನಲ್ಲಿ ಬಾರದಂತೆ ತಡೆದಿದ್ದಾರೆ. ಆಗ ಇದೇ ವಿಚಾರಕ್ಕೆ ಈ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಆ ಸಂದರ್ಭದಲ್ಲಿ ಮಹಿಳೆ ಗುಪ್ತಾ ಅವರ ಮೊಬೈಲ್​ನ್ನು ಲಿಫ್ಟ್​ನಿಂದ ಹೊರ ಎಸೆದಿದ್ದಾರೆ. ಇದಕ್ಕೆ ಕೋಪದಿಂದ ನಿವೃತ್ತ ಐಎಎಸ್​ ಅಧಿಕಾರಿ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಇನ್ನೂ ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ನೋಯ್ಡಾ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನಾಯಿ ವಿಚಾರಕ್ಕೆ ಕಿರಿಕ್​​.. ಮಹಿಳೆಗೆ ಕಪಾಳಮೋಕ್ಷ ಮಾಡಿದ ನಿವೃತ್ತ ಐಎಎಸ್​​ ಅಧಿಕಾರಿ

https://newsfirstlive.com/wp-content/uploads/2023/10/dog-fight.jpg

Load More