ಟಿ20 ವಿಶ್ವಕಪ್ಗೆ ಮುತ್ತಿಟ್ಟಿರುವ ಟೀಂ ಇಂಡಿಯಾ
ಐಸಿಸಿ ಪ್ರಕಟಿಸಿರುವ ತಂಡದಲ್ಲಿ ಯಾರೆಲ್ಲ ಇದ್ದಾರೆ?
ಸ್ಥಾನ ಪಡೆದ 6 ಭಾರತೀಯ ಆಟಗಾರರು ಯಾಱರು?
ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಐಸಿಸಿ ಟೂರ್ನಮೆಂಟ್ ಆಫ್ ದ ಟೀಂನಲ್ಲಿ ಭಾರತದ 6 ಆಟಗಾರರಿಗೆ ಸ್ಥಾನ ಸಿಕ್ಕಿದೆ.
ಐಸಿಸಿ ವಿಶ್ವಕಪ್ ತಂಡ..!
ರೋಹಿತ್ ಶರ್ಮಾ, ರಹನಾನುಲ್ಲಾ ಗುರ್ಬಾಜ್, ನಿಕೋಲಸ್ ಪೂರನ್, ಸೂರ್ಯಕುಮಾರ್ ಯಾದವ್, ಮಾರ್ಕಸ್ ಸ್ಟೋಯಿನಿಸ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಶೀದ್ ಖಾನ್, ಜಸ್ಪ್ರೀತ್ ಬೂಮ್ರಾ, ಅರ್ಷ್ದೀಪ್ ಸಿಂಗ್, ಫಜಲ್ಹಕ್ ಫಾರೂಖಿ ಹಾಗೂ 12ನೇ ಆಟಗಾರರಾಗಿ ಎನ್ರಿಚ್ ನೊರ್ಟ್ಜೆ ಅವರನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಸಂಕಷ್ಟ.. ಅಯ್ಯೋ ಏನಾಯ್ತು..?
ಟೀಂ ಇಂಡಿಯಾದ ಒಟ್ಟು ಆರು ಆಟಗಾರರು ಆಯ್ಕೆ ಆಗಿದ್ದಾರೆ. ಮೊದಲ ಪ್ಲೇಸ್ನಲ್ಲಿ ರೋಹಿತ್ ಶರ್ಮಾ ಇದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 156.7 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಅವರು 36.71 ಸಾಸರಿಯೊಂದಿಗೆ 257 ರನ್ಗಳಿಸಿದ್ದಾರೆ. ಅದರಲ್ಲಿ ಮೂರು ಅರ್ಧಶತಕ ಕೂಡ ಇದೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಡ್ನ್ಯೂಸ್.. ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..!
ಹಾಗೆ ಸೂರ್ಯಕುಮಾರ್ ಯಾದವ್ ಅವರು 135.37 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು, 28.42 ಸರಾಸರಿ ರನ್ ಹೊಂದಿದ್ದಾರೆ. ಒಟ್ಟು 199 ರನ್ಗಳಿಸಿ ಎರಡು ಅರ್ಧಶತಕ ಕೂಡ ಇದೆ. ಇನ್ನು ಹಾರ್ದಿಕ್ ಪಾಂಡ್ಯ 151.57 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು 144 ರನ್ಗಳಿಸಿದ್ದಾರೆ. 11 ವಿಕೆಟ್ ಪಡೆದುಕೊಂಡಿದ್ದಾರೆ. ಅಕ್ಸರ್ ಪಟೇಲ್ ಕೂಡ ಸ್ಥಾನ ಗಿಟ್ಟಿಸಿಕೊಂಡವರಲ್ಲಿ ಒಬ್ಬರು, 92 ರನ್ಗಳಿಸಿರುವ ಅಕ್ಸರ್, 139.39 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಭಾರತದ ಪರ 9 ವಿಕೆಟ್ ಪಡೆದುಕೊಂಡಿದ್ದಾರೆ. ಬೂಮ್ರಾ ಅವರು ಭಾರತದ ಪರ 15 ವಿಕೆಟ್ ಪಡೆದುಕೊಂಡಿದ್ದು, ಕೇವಲ 7 ರನ್ ನೀಡಿ 3 ವಿಕೆಟ್ ಪಡೆದಿರೋದು ಅತ್ಯಂತ ಬೆಸ್ಟ್ ಆಗಿದೆ. ಅರ್ಷ್ದೀಪ್ ಸಿಂಗ್ 17 ವಿಕೆಟ್ ಪಡೆದುಕೊಂಡಿದ್ದು, 9ರನ್ಗೆ ನಾಲ್ಕು ವಿಕೆಟ್ ಅವರ ಅತ್ಯಂತ ಬೆಸ್ಟ್ ಆಗಿದೆ.
ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ