newsfirstkannada.com

3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

Share :

Published July 1, 2024 at 7:58am

  ಇಂದಿನಿಂದ ದೇಶದಾದ್ಯಂತ 3 ಹೊಸ ಕ್ರಿಮಿನಲ್ ಕಾನೂನು ಜಾರಿ

  ಪೊಲೀಸರು, ವಕೀಲರು, ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಭಾರೀ ಬದಲಾವಣೆ..!

  ಬ್ರಿಟಿಷರ ಕಾಲದ ಕಾಯ್ದೆಗೆ ಗುಡ್​​ಬೈ, 3 ಹೊಸ ಕಾಯ್ದೆಗೆ ರಾಷ್ಟ್ರಪತಿ ಅಂಕಿತ

ದೇಶದಲ್ಲಿ ಇಂದಿನಿಂದ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೊಳ್ಳುತ್ತಿವೆ. ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ (Indian Penal Code), ಸಿಆರ್​​ಪಿಸಿ (Criminal Procedure Code) ಹಾಗೂ ಇಂಡಿಯನ್​ ಎವಿಡೆನ್ಸ್​ ಆ್ಯಕ್ಟ್​​ಗೆ ಬದಲಿಗೆ ಹೊಸ ಕಾನೂನು ಜಾರಿಗೆ ಬರುತ್ತಿವೆ.

ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆ
ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ 1860ರಲ್ಲಿ ಜಾರಿ ಮಾಡಿದ್ದ ಐಪಿಸಿ ಬದಲಿಗೆ ಭಾರತೀಯ ನ್ಯಾಯ ಸಂಹಿತೆ (BNS) ಎಂದು, 1898ರಲ್ಲಿ ಜಾರಿಗೆ ಬಂದಿದ್ದ CrPC ಬದಲಿಗೆ ಭಾರತೀಯ ನಾಗರಿಕ ರಕ್ಷಣಾ ಸಂಹಿತೆ (BNSS) ಎಂದು ಹಾಗೂ 1872ರಲ್ಲಿ ಬಂದಿದ್ದ ಇಂಡಿಯನ್ ಎವಿಡೆನ್ಸ್​ ಆ್ಯಕ್ಟ್​​ ಬದಲಾಗಿ ಭಾರತೀಯ ಸಾಕ್ಷ್ಯ ಕಾಯ್ದೆ ಎಂದು ಮಾಡಲಾಗಿದೆ. ಈ ಮೂರು ಹೊಸ ಕಾಯ್ದೆಗೆ ಕಳೆದ ವರ್ಷ ಸಂಸತ್​​ನಲ್ಲಿ ಅನುಮೋದನೆ ದೊರೆತಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾತ್ರ ಸದ್ಯಕ್ಕೆ ಜಾರಿಗೊಳಿಸದೆ ಇರಲು ಸರ್ಕಾರ ನಿರ್ಧಾರ ಮಾಡಲಾಗಿದೆ.

ಈ ಮೂರು ಹೊಸ ಕಾನೂನುಗಳ ಅನುಷ್ಠಾನದ ನಂತರ ಅನೇಕ ನಿಯಮ ಹಾಗೂ ನಿಬಂಧನೆಗಳು ಬದಲಾಗುತ್ತಿವೆ. ಇವುಗಳಲ್ಲಿ ಹಲವು ಹೊಸ ವಿಭಾಗಗಳನ್ನು ಸೇರಿಸಲಾಗಿದೆ. ಕೆಲವು ವಿಭಾಗಗಳನ್ನು ಬದಲಾಯಿಸಲಾಗಿದೆ, ಕೆಲವನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಇವತ್ತಿನಿಂದ ಜನಸಾಮಾನ್ಯರು, ಪೊಲೀಸರು, ವಕೀಲರು ಮತ್ತು ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ.

ಇದನ್ನೂ ಓದಿ:ದೇಶದಲ್ಲಿ ಇಂದಿನಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ.. ಯಾವುದು ಏನಾಗಿದೆ..?

ಭಾರತೀಯ ನಾಗರಿಕ ಸಂಹಿತೆ
ಸಿಆರ್​ಪಿಸಿಯಲ್ಲಿ ಒಟ್ಟು 484 ವಿಭಾಗಗಳಿದ್ದರೆ, ಭಾರತೀಯ ನಾಗರಿಕ ಭದ್ರತಾ ಸಂಹಿತೆಯಲ್ಲಿ (ಬಿಎನ್​​ಎಸ್​ಎಸ್​)ನಲ್ಲಿ 531 ವಿಭಾಗಗಳು ಬರುತ್ತವೆ. ಹೊಸ ಕಾನೂನಿನಲ್ಲಿ ಆಡಿಯೋ-ವಿಡಿಯೋ ಅಂದರೆ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಸಂಗ್ರಹಿಸಿದ ಸಾಕ್ಷ್ಯಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಅಪರಾಧಕ್ಕಾಗಿ ಜೈಲಿನಲ್ಲಿ ಗರಿಷ್ಠ ಶಿಕ್ಷೆಯನ್ನು ಅನುಭವಿಸಿದ ನಂತರ ಕೈದಿಗಳನ್ನು ಬಾಂಡ್​ನಲ್ಲಿ ಬಿಡುಗಡೆ ಮಾಡಲು ಹೊಸ ಕಾನೂನಿನಲ್ಲಿ ಅವಕಾಶ ಇದೆ.

ಯಾವುದೇ ನಾಗರಿಕರು ಅಪರಾಧಕ್ಕೆ ಸಂಬಂಧಿಸಿದಂತೆ ಎಲ್ಲಿಯಾದರೂ ಎಫ್​ಐಆರ್​​ ದಾಖಲಿಸಬಹುದು. ಎಫ್​ಐಆರ್​ ದಾಖಲಿಸಿದ 15 ದಿನಗಳ ಒಳಗೆ ಅಪರಾಧ ನಡೆದ ಠಾಣಾ ವ್ಯಾಪ್ತಿಯನ್ನು ಸೂಚಿಸಬೇಕು. ಅಧಿಕಾರಿ ಅಥವಾ ಸರ್ಕಾರಿ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು 120 ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆಯಬೇಕಾಗುತ್ತದೆ.

90 ದಿನಗಳ ಒಳಗೆ ಚಾರ್ಜ್​ಶೀಟ್​
ಎಫ್​ಐಆರ್ ದಾಖಲಿಸಿದ 90 ದಿನಗಳ ಒಳಗೆ ಕೋರ್ಟ್​ಗೆ ಜಾರ್ಜ್​ಶೀಟ್ ಸಲ್ಲಿಕೆ ಮಾಡಬೇಕು. 60 ದಿನಗಳ ಒಳಗೆ ಆರೋಪಗಳನ್ನು ರೂಪಿಸಬೇಕಾಗುತ್ತದೆ. ಪ್ರಕರಣದ ವಿಚಾರಣೆ ಮುಗಿದ 30 ದಿನಗಳ ಒಳಗೆ ತೀರ್ಪು ನೀಡಬೇಕಾಗುತ್ತದೆ. ತೀರ್ಪು ನೀಡಿದ ಪ್ರತಿಯನ್ನು 7 ದಿನಗಳಲ್ಲಿ ಒದಗಿಸಬೇಕು. ಪೊಲೀಸರು ಬಂಧಿತ ವ್ಯಕ್ತಿಯ ಕುಟುಂಬಕ್ಕೆ ಲಿಖಿತವಾಗಿ ತಿಳಿಸಬೇಕು. ಆಫ್​ಲೈನ್ ಹಾಗೂ ಆನ್​ಲೈನ್​​​ ಎರಡರಲ್ಲೂ ಮಾಹಿತಿ ನೀಡಬೇಕಾಗುತ್ತದೆ.

ಈ ಕೇಸ್​​ನಲ್ಲಿ ಮೇಲ್ಮನವಿಗೆ ಅವಕಾಶ ಇಲ್ಲ..!
ಭಾರತೀಯ ಸಿವಿಲ್ ಡಿಫೆನ್ಸ್​ ಕೋಡ್​ನ ಸೆಕ್ಷನ್ 417ರ ಪ್ರಕರಣಗಳಲ್ಲಿ ಶಿಕ್ಷೆ ಬಗ್ಗೆ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲ. ಅಪರಾಧಿಗೆ ಹೈಕೋರ್ಟ್​ 3 ತಿಂಗಳು ಅಥವಾ ಅದಕ್ಕಿಂತ ಕಡಿಮೆ ಜೈಲು ಶಿಕ್ಷೆ ಅಥವಾ 3 ಸಾವಿರ ವರೆಗೆ ದಂಡ ವಿಧಿಸಿದ್ದರೆ ಅದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ. ಈ ಹಿಂದೆ ಐಪಿಸಿಯಲ್ಲಿ ಸೆಕ್ಷನ್ 376 ಇತ್ತು. ಅದರ ಅಡಿಯಲ್ಲಿ 6 ತಿಂಗಳಿಗಿಂತ ಕಡಿಮೆ ಶಿಕ್ಷೆಯನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಈ ಹೊಸ ಕಾನೂನಿನಲ್ಲಿ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಇದನ್ನೂ ಓದಿ:‘ಆಟದ ನಂತರ ನಾನು ಅಳುವುದಿಲ್ಲ, ಆದರೆ ಇವತ್ತು..’ ಬೂಮ್ರಾ ಹೇಳಿದ್ದೇನು..?

ಜೊತೆಗೆ ಅಪರಾಧಿಗೆ ಸೆಷನ್ಸ್​ ಕೋರ್ಟ್ ಮೂರು ತಿಂಗಳ ಅಥವಾ ಅದಕ್ಕಿಂತ ಕಡಿಮೆ ಜೈಲು ಶಿಕ್ಷೆ ಅಥವಾ 200 ರೂಪಾಯಿ ದಂಡ ವಿಧಿಸಿದ್ದರೆ ಇದನ್ನೂ ಕೂಡ ಪ್ರಶ್ನೆ ಮಾಡುವಂತಿಲ್ಲ. ಹಾಗೆಯೇ ಯಾವುದೇ ಅಪರಾಧಕ್ಕಾಗಿ ಮ್ಯಾಜಿಸ್ಟ್ರೇಟ್​ ಕೊರ್ಟ್ 100 ರೂಪಾಯಿ ದಂಡ ವಿಧಿಸಿದರೆ ಅದರ ವಿರುದ್ಧವೂ ಮೇಲ್ಮನವಿ ಸಲ್ಲಿಸುವಂತಿಲ್ಲ.

ಕೈದಿಗಳಲ್ಲಿ ಏನು ಬದಲಾವಣೆ..?
ಹೊಸ ಕಾನೂನಿನಲ್ಲಿ ಜೈಲಿನಲ್ಲಿ ಆಗುತ್ತಿರುವ ಕೈದಿಗಳ ಹೊರೆಯನ್ನು ತಪ್ಪಿಸಲು ಆದ್ಯತೆ ನೀಡಲಾಗಿದೆ. ಬಿಎಸ್​ಎಸ್ ಪ್ರಕಾರ ವಿಚಾರಣಾಧೀನ ಕೈದಿಯೊಬ್ಬ ತನ್ನ ಶಿಕ್ಷೆಯ ಮೂರನೇ ಒಂದರಷ್ಟು ಶಿಕ್ಷೆಯನ್ನು ಜೈಲಿನಲ್ಲಿ ಅನುಭವಿಸಿದ್ದರೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು. ಅದಕ್ಕಾಗಿ ಸೆಕ್ಷನ್ 479ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಜೀವಾವಧಿ ಶಿಕ್ಷೆಯಂತ ದೊಡ್ಡ ಅಪರಾಧ ಎಸೆಗಿರುವ ಕೈದಿಗಳಿಗೆ ಜಾಮೀನು ಸಿಗುವುದಿಲ್ಲ. ಇದಲ್ಲದೆ ಶಿಕ್ಷೆಯ ವಿನಾಯತಿ ಬಗ್ಗೆಯೂ ಬದಲಾವಣೆ ಮಾಡಲಾಗಿದೆ.

ಅಂದರೆ ಕೈದಿಗಳಿಗೆ ಮರಣದಂಡನೆ ವಿಧಿಸಿದರೆ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬಹುದು. ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದು. 7 ವರ್ಷ ಅಥವಾ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದ ಅಪರಾಧಿಗಳ ಶಿಕ್ಷೆಯನ್ನು ಮೂರು ವರ್ಷಗಳ ಜೈಲು ಶಿಕ್ಷೆಗೆ ಬದಲಾಯಿಸಬಹುದು. ಆದರೆ 7 ವರ್ಷ ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಅಪರಾಧಿಗೆ ದಂಡ ಕೂಡ ವಿಧಿಸಬಹುದು.

ವಿಶೇಷ ವರದಿ: ಗಣೇಶ್ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

https://newsfirstlive.com/wp-content/uploads/2023/12/Court-1.jpg

Load More