newsfirstkannada.com

ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೆ​ ಪವಿತ್ರಾ ಗೌಡ ಹೋಗೋದು ಎಲ್ಲಿ? ಇಲ್ಲಿದೆ ಆರೋಪಿಗಳ ಪಟ್ಟಿ

Share :

Published August 28, 2024 at 7:15am

    ಪರಪ್ಪನ ಅಗ್ರಹಾರದಲ್ಲಿ ಒಟ್ಟಿಗೆ ಇದ್ದ ದರ್ಶನ್​ ಗ್ಯಾಂಗ್ ದಿಕ್ಕಾಪಾಲು

    ನಟ ದರ್ಶನ್​ ಮನವೊಲಿಕೆ ಮಾಡಲು ಅಧಿಕಾರಿಗಳು ಹರಸಾಹಸ

    ಕೋರ್ಟ್​ ಸೂಚನೆಯಂತೆ ಆರೋಪಿಗಳನ್ನು ಸ್ಥಳಾಂತರಿಸಲು ತಯಾರಿ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಪಾಲಾದ ದರ್ಶನ್​ ಸೆರೆಮನೆಯನ್ನೇ ಅರಮನೆಯಂತೆ ಮಾಡಿಕೊಳ್ಳಲು ಹೋಗಿ ಮತ್ತಷ್ಟು ಸಂಕಷ್ಟ ತಂದುಕೊಂಡಿದ್ದಾರೆ. ದರ್ಶನ್​ಗೆ ಪರಪ್ಪನ ಅಗ್ರಹಾರದಲ್ಲಿನ ರಾಜಾತಿಥ್ಯ ಪ್ರಕರಣ ಮುಳುವಾಗಿ ಸಂಭವಿಸಿದ್ದು, ಬಳ್ಳಾರಿ ಜೈಲಿನ ದರ್ಶನ ಭಾಗ್ಯ ದೊರೆತಿದೆ.

ಇದನ್ನೂ ಓದಿ: ಫೋಟೋ ರಿಲೀಸ್‌ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ಗೆ ರಾಜಾತಿಥ್ಯ ಸಿಗ್ತಿರುವ ಫೋಟೋ ವೈರಲ್​ ಆಗ್ತಿದ್ದಂತೆ, ಇಲ್ಲಿನ ವ್ಯವಸ್ಥೆ ಬಗ್ಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ದರ್ಶನ್​ ರಾಜಾತಿಥ್ಯವನ್ನು ಕಂಡು ಗರಂ ಆದ ಸಿಎಂ ಸಿದ್ದರಾಮಯ್ಯ, ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಜೈಲು ಅಧಿಕಾರಿಗಳು ಕೋರ್ಟ್​ ಮೊರೆ ಹೋಗಿದ್ರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಜೈಲು ಅಧಿಕಾರಿಗಳ‌ ಮನವಿ ಮೇರೆಗೆ 24ನೇ ಎಸಿಎಂಎಂ ಕೋರ್ಟ್ ನಟ ದರ್ಶನ್​ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಅನುಮತಿ ನೀಡಿತು.

ಕೋರ್ಟ್​ ಅನುಮತಿಯಂತೆ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಮುಂದಾದಾಗ ಕೊಲೆ ಆರೋಪಿ ನಟ ದರ್ಶನ್​ ಅಧಿಕಾರಿಗಳ ಜೊತೆ ಮೊಂಡಾಟ ಪ್ರದರ್ಶಿಸಿರುವ ಬಗ್ಗೆ ನ್ಯೂಸ್​ಫಸ್ಟ್​ಗೆ ಮಾಹಿತಿ ಲಭ್ಯವಾಗಿದೆ. ಬಳ್ಳಾರಿ ಜೈಲಲ್ಲಿ ಒಬ್ಬನೇ ಒಂಟಿಯಾಗಿರಬೇಕಾದ ಆತಂಕದಲ್ಲಿ ದರ್ಶನ್​, ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಹೋಗಲು ಹಿಂದೇಟು ಹಾಕಿದ್ದನಂತೆ. ಇಲ್ಲೇ ನಾನು ಆರಾಮಾಗಿದ್ದೇನೆ ಅಲ್ಲಿಗೆ ಯಾಕೆ? ನಾನು ಯಾವುದೇ ಕಾರಣಕ್ಕೂ ಬಳ್ಳಾರಿಗೆ ಹೋಗಲ್ಲ ಎಂದು ಅಧಿಕಾರಿಗಳ ಮುಂದೆ ದರ್ಶನ್​ ಹಠ ಹಿಡಿದ್ದ ಎಂದು ತಿಳಿದು ಬಂದಿದೆ. ದರ್ಶನ್​ ವರ್ತನೆಯಿಂದ ಬೇಸತ್ತ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲು ಹರಸಾಹಸ ಪಟ್ಟಿದ್ದು, ದರ್ಶನ್​ ಮನವೊಲಿಕೆ ಮಾಡಿ ಶಿಫ್ಟ್​ ಮಾಡಲು ಮುಂದಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್​​ ರಾಜಾತಿಥ್ಯ ಪ್ರಕರಣದಿಂದ ಇಡೀ ಡಿ-ಗ್ಯಾಂಗ್​ಗೆ ಬಿಗ್​ ಶಾಕ್​ ಎದುರಾಗಿದೆ. ಇಷ್ಟು ದಿನ ಪರಪ್ಪನ ಅಗ್ರಹಾರ ಜೈಲಲ್ಲಿ ಒಟ್ಟಿಗಿದ್ದ ದರ್ಶನ್ ಅಂಡ್​ ಗ್ಯಾಂಗ್ ಈಗ ದಿಕ್ಕಾಪಾಲಾಗುತ್ತಿದ್ದು, ಬೇರೆ ಬೇರೆ ಜೈಲಿಗೆ ಶಿಫ್ಟ್​ ಮಾಡಲು ಕೋರ್ಟ್​ ನಿರ್ದೇಶಿಸಿದೆ.

ಯಾಱರು ಯಾವ ಜೈಲಿಗೆ ಶಿಫ್ಟ್​​!

ಎ-1 ಪವಿತ್ರಗೌಡ : ಪರಪ್ಪನ ಅಗ್ರಹಾರ ಜೈಲು
ಎ-2 ದರ್ಶನ್ : ಬಳ್ಳಾರಿ ಜೈಲು
ಎ3 ಪವನ್ : ಮೈಸೂರು ಜೈಲು
ಎ4 ರಾಘವೇಂದ್ರ : ಮೈಸೂರು ಜೈಲು
ಎ5 ನಂದೀಶ್ : ಮೈಸೂರು ಜೈಲು
ಎ6 ಜಗದೀಶ್ : ಶಿವಮೊಗ್ಗ ಜೈಲು
ಎ 7 ಅನುಕುಮಾರ್: ಪರಪ್ಪನ ಅಗ್ರಹಾರ ಜೈಲು
ಎ9 ಧನರಾಜ್ : ಧಾರವಾಡ ಜೈಲು
ಎ10 ವಿನಯ್ : ವಿಜಯಪುರ ಜೈಲು
ಎ11 ನಾಗರಾಜ್ : ಕಲಬುರಗಿ ಜೈಲು
ಎ12 ಲಕ್ಷ್ಮಣ : ಶಿವಮೊಗ್ಗ ಜೈಲು
ಎ13 ದೀಪಕ್ : ಪರಪ್ಪನ ಅಗ್ರಹಾರ ಜೈಲು
ದ14 ಪ್ರದೂಶ್ : ಬೆಳಗಾವಿ ಜೈಲು
ಎ-8 ರವಿ ಶಂಕರ್ – ತುಮಕೂರು ಜೈಲು
ಎ15 ಕಾರ್ತಿಕ್ – ತುಮಕೂರು ಜೈಲು
ಎ16 ಕೇಶವಮೂರ್ತಿ – ತುಮಕೂರು ಜೈಲು
ಎ17 ನಿಖಿಲ್ -ತುಮಕೂರು ಜೈಲು

ಎ-1 ಪವಿತ್ರಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಎ-2 ದರ್ಶನ್, ಬಳ್ಳಾರಿ ಜೈಲು, ಎ3 ಪವನ್ ಮೈಸೂರು ಜೈಲು, ಎ4 ರಾಘವೇಂದ್ರ ಮೈಸೂರು ಜೈಲು, ಎ5 ನಂದೀಶ್, ಮೈಸೂರು ಜೈಲು, ಎ6 ಜಗದೀಶ್ ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ನು ಎ 7 ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಉಳಿದಂತೆ ಎ9 ಧನರಾಜ್, ಧಾರವಾಡ ಜೈಲು, ಎ10 ವಿನಯ್ ವಿಜಯಪುರ ಜೈಲು, ಎ11 ನಾಗರಾಜ್ ಕಲಬುರಗಿ ಜೈಲಿಗೆ ಎ12 ಲಕ್ಷ್ಮಣ ಶಿವಮೊಗ್ಗ ಜೈಲಿಗೆ ಶಿಫ್ಟ್​ ಆಗಲಿದ್ದಾರೆ. ಇನ್ನು ಎ13 ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ಎ14 ಪ್ರದೂಶ್​ನನ್ನು ಬೆಳಗಾವಿ ಜೈಲಿಗೆ ಶಿಫ್ಟ್​ ಮಾಡಲಿದ್ದಾರೆ. ಆದ್ರೆ ಎ-8 ರವಿ ಶಂಕರ್, ಎ15 ಕಾರ್ತಿಕ್, ಎ16 ಕೇಶವಮೂರ್ತಿ ಮತ್ತು ಎ17 ನಿಖಿಲ್ ಈಗಾಗಲೇ ತುಮಕೂರು ಜೈಲಿನಲ್ಲಿದ್ದಾರೆ. ಕೋರ್ಟ್​ ಸೂಚನೆಯಂತೆ ಅಧಿಕಾರಿಗಳು ಸ್ಯಾಂಡಲ್​ವುಡ್​ ಸಾರಥಿಯನ್ನು ಬಳ್ಳಾರಿಗೆ ಜೈಲಿಗೆ ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೆ​ ಪವಿತ್ರಾ ಗೌಡ ಹೋಗೋದು ಎಲ್ಲಿ? ಇಲ್ಲಿದೆ ಆರೋಪಿಗಳ ಪಟ್ಟಿ

https://newsfirstlive.com/wp-content/uploads/2024/06/darshan27.jpg

Load More