newsfirstkannada.com

ಫೋಟೋ ರಿಲೀಸ್‌ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!

Share :

Published August 27, 2024 at 10:43pm

Update August 27, 2024 at 10:44pm

    ದರ್ಶನ್​​ ಕುಳಿತ್ತಿದ್ದ ಜಾಗಕ್ಕೆ ಬರುತ್ತಿದ್ದ ಸಿಗರೇಟು, ಎಣ್ಣೆ, ಬಿರಿಯಾನಿ!

    ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಮೊದಲು ಆತಿಥ್ಯ ನೀಡಿದ ರೌಡಿ?

    ದರ್ಶನ್​ಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಏನೆಲ್ಲ ಆಗಿದೆ ಗೊತ್ತಾ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ರಾಜಾತಿಥ್ಯದ ಹಿಂದೆ 2 ಗ್ಯಾಂಗ್‌ಗಳ ಮಧ್ಯೆ ಒಂದು ಕೋಲ್ಡ್​ ವಾರ್​ ಇದೆ. ಅದೂ ಸಹ ಕುಖ್ಯಾತ ರೌಡಿಗಳ ಗ್ಯಾಂಗ್​​ ವಾರ್. ಜೈಲಿನೊಳಗೆ ದರ್ಶನ್​​​ಗೆ ಆತಿಥ್ಯ ನೀಡೋದಕ್ಕೆ ಅಂತಲೇ ಎರಡು ರೌಡಿ ಗ್ಯಾಂಗ್​​ ಮಧ್ಯೆ ಗಲಾಟೆ ನಡೆದಿದೆ. ಹಾಗಾಗಿಯೇ ದರ್ಶನ್​​ ಫೋಟೋ ಮತ್ತು ವಿಡಿಯೋ ವೈರಲ್ ಅಗ್ತಿರೋದು. ಬಿರಿಯಾನಿ, ಸಿಗರೇಟು, ಎಣ್ಣೆ ಎಲ್ಲವೂ ದರ್ಶನ್​​ ಕುಳಿತಿರೋ ಜಾಗದಲ್ಲೇ ಸಿಗ್ತಿರೋದು. ಅಸಲಿಗೆ ದರ್ಶನ್​​​ ಜೈಲಿನೊಳಗೆ ಎಂತೆಂಥವರ ಜೊತೆ ಸಹವಾಸ ಮಾಡ್ತಿದ್ದಾರೆ ಗೊತ್ತಾ? ದರ್ಶನ್​ ಬೇಕರಿ ರಹಸ್ಯ ಏನು ಅನ್ನೋದನ್ನೇ ಹೇಳ್ತೀವಿ ನೋಡಿ.

ಇದನ್ನೂ ಓದಿ: ಬ್ರ್ಯಾಂಡೆಡ್‌ ಟೀ ಶರ್ಟ್‌, ಶೂ, ಡ್ರೈಫ್ರೂಟ್ಸ್‌.. ವಿಲ್ಸನ್‌ ಗಾರ್ಡನ್ ನಾಗನ ಲಕ್ಸುರಿ ಲೈಫ್ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರಾ!

ರೌಡಿಸಂ.. ಪಕ್ಕಾ ಪಾಪಿಗಳ ಲೋಕ.

ಕೊತ್ವಾಲ್.. ಜಯರಾಜ್.. ಬೂಟ್​​ಹೌಸ್​ ಕುಮಾರ್​.. ಇದೆಲ್ಲಾ ಸೀನಿಯರ್ಸ್​​ ಬ್ಯಾಚ್..​​ ಇದಾದ ಮೇಲೆ ಜ್ಯೂನಿಯರ್ಸ್​​.. ಸಬ್​ ಜ್ಯೂನಿಯರ್ಸ್.. ಸೂಪರ್​ ಸೂಪರ್​ ಜ್ಯೂನಿಯರ್ಸೂ ಬಂದಿದ್ದಾರೆ.. ಫೀಲ್ಡ್​​ನಲ್ಲಿದ್ದಾರೆ.. ಅಪ್ಪ ಅಮ್ಮರ ಕನಸನ್ನೇ ಕೊಂದು ಪಾತಕ ಲೋಕಕ್ಕೆ ಅಡ್ಮಿಷನ್​ ಆಗೋ ಬಹುಪಾಲು ಜೆಂಟಲ್​ ಹಂಟರ್ ಮೆಂಟಲ್​​ ಪಂಟರ್​​​ಗಳ ಕ್ಲೈಮ್ಯಾಕ್ಸ್​​ ಒಂದೇ ಆಗಿರುತ್ತೆ.. ಯಾಕಂದ್ರೆ, ರೌಡಿಸಂ.. ಪಕ್ಕಾ ಪಾಪಿಗಳ ಲೋಕ.

ಇಲ್ಲಿ ಕರುಣೆ ಅನ್ನೋ ಕಾಮನ್​​ ಸೆನ್ಸೂ ಇರಲ್ಲ.. ಪೇಷನ್ಸ್​ ಇಲ್ಲಿ ಪುಲ್ಚಾರ್​ ವಿಕ್ಸೇಸ್​.. ಫೈಟು ಪಕ್ಕಾ ಮೀಟರ್ ಮ್ಯಾಟರ್​. ಇವರಿಗೆ ಟನ್​​ಗಟ್ಟಲೇ ಪೊಗರು.. ಖಾನ್​ದಾನ್​​​ ಖದರ್ರು.. ತಲೈವಾ ತಿಮಿರು ಇರುತ್ತೆ.. ದಂಡಿ ದಂಡಿ ಹಂಗಾಮಿ ದುಡ್ಡಿನಲ್ಲೇ ದೌಲತ್ತಿನ ದರ್ಬಾರು ನಡೀತಿರುತ್ತೆ.. ಜೈಲು ಅನ್ನೋ ಪರಿವರ್ತನಾ ಕೇಂದ್ರ ಪಕ್ಕಾ ಫೈವ್​ ಸ್ಟಾರ್​ ರೆಸ್ಟೋಬಾರ್ ಆಗ್ಬಿಟ್ರೆ ರೌಡಿಗಳು ಬಯಸಿದಂತೆ ರಾಜಾಧಿರಾಜರಾಗೋದ್ರಲ್ಲಿ ಅಚ್ಚರಿ ಏನಿಲ್ಲ. ಸದ್ಯ, ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪರಪ್ಪನ ಅಗ್ರಹಾರ ಸೇರಿರೋ ದರ್ಶನ್​​ ಫೋಟೋ ಹಾಗೂ ವಿಡಿಯೋ ಕೂಡ ಇದನ್ನೇ ಹೇಳ್ತಿದೆ. ಅಷ್ಟಕ್ಕೂ ದರ್ಶನ್​​​ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗ್ತಿದೆಯೋ? ಅದನ್ನೂ ಮೀರಿ ಪರಪ್ಪನ ಅಗ್ರಹಾರ ದರ್ಶನ್​ ಪಾಲಿಗೆ ಇಂದ್ರನ ಅಮರಾವತಿ ಆಗಿಬಿಟ್ಟಿದೆಯಾ? ಇಂಥದ್ದೊಂದು ಅನುಮಾನಕ್ಕೂ ಕಾರಣ ಫೋಟೋ ವೈರಲ್ ಹಿಂದಿನ ಫೈಟ್​​.

ದರ್ಶನ್​​​ ಆತಿಥ್ಯಕ್ಕಾಗಿ ಗ್ಯಾಂಗ್​​ ವಾರ್..​​ ಫೋಟೋ ಫೈಟ್​!

ಗುಂಡು ತುಂಡು ದಂಡಿನ ಮಧ್ಯೆ ಇದ್ದ ದರ್ಶನ್​​ ಜೈಲಲ್ಲೂ ಅದೇ ರೇಂಜ್​​ನ ಸ್ಟಾರ್​ ರೀತಿ ಮೆರೀತಿದ್ದಾನೆ. ಕೊಲೆ ಆರೋಪದ ಪಾಪಪ್ರಜ್ಞೆಯೂ ಇಲ್ಲದೇ ರೌಡಿ ಅಡ್ಡೆ ರಾಜಾಧಿರಾಜನಂತೆ ದರ್ಬಾರ್​ ಮಾಡ್ತಿದ್ದಾನೆ. ಇದು ಸತ್ಯ. ಸತ್ಯ ಅನ್ನೋ ಸಾಕ್ಷಿಯನ್ನ ಜೈಲಿಂದ ರಿಲೀಸ್​ ಆಗಿರೋ ಫೋಟೋ ವಿಡಿಯೋಗಳು ಸಾರಿ ಸಾರಿ ಹೇಳ್ತಿವೆ.. ಆದರೆ, ಇಂಥದ್ದೊಂದು ವಿಡಿಯೋ ಹಾಗೂ ಫೋಟೋಗಳು ರಿಲೀಸ್​​ ಆಗಿದ್ದರ ಹಿಂದೆ ಎರಡು ಗ್ಯಾಂಗ್​​ಗಳ ನಡುವೆ ಯುದ್ಧ ನಡೀತಿದೆ.. ಆ ಗ್ಯಾಂಗ್​​ ವಾರ್​ ಕಾರಣಕ್ಕೆ ಫೋಟೋ ಫೈಟ್​​ ನಡೀತು ಅನ್ನೋ ಸತ್ಯ ಇದೀಗ ಬಟಾಬಯಲಾಗಿದೆ. ದರ್ಶನ್​​ ಜೈಲಿಗೆ ಎಂಟ್ರಿ ಕೊಟ್ಟ ಕೂಡಲೇ ಕೆಂಚಾಲೋ ಮಚ್ಚಾಲೋ ಸಾಂಗ್​​ ಹೇಗೆ ಕೈದಿಗಳ ಆಂಥಮ್ ಆಯ್ತೋ. ಆ ಕ್ಷಣವೇ ಡಿ ಬಾಸ್​​ ಓಡಾಡ್ತಿದ್ರೆ ಸೆಲ್​​ನಲ್ಲಿದ್ದ ಕೈದಿಗಳು ಶಿಳ್ಳೆ.. ಚಪ್ಪಾಳೆ ಮೂಲಕ ಸ್ಟಾರ್​ ಕೈದಿಯನ್ನು ಬರಮಾಡಿಕೊಳ್ತಿದ್ರು. ಇದಕ್ಕಿಂತ್ಲೂ ಮಿಗಿಲಾಗಿ ಜೈಲೊಳಗಿದ್ದ ಕುಖ್ಯಾತ ರೌಡಿಗಳು ದರ್ಶನ್​​ಗೆ ಬೇಕಾದ್ದು ನಾನು ಕೊಡ್ತೀನಿ. ನಾನು ಕೊಡ್ತೀನಿ ಅಂತ ಕಾಂಪಿಟೇಶನ್​​​ಗೆ ಬಿದ್ದಿದ್ರು.. ಇದೇ ಕಾಂಪಿಟೇಷನ್​​.. ರೌಡಿ ಗ್ಯಾಂಗ್​ಗಳ ನಡುವೆ ಕೋಲ್ಡ್​​ ವಾರ್​​ಗೆ ಕಾರಣವಾಗಿತ್ತು. ಕೊನೆಗೆ ಹೊಟ್ಟೆ ಕಿಚ್ಚಿನಿಂದ ದರ್ಶನ್​ ಆತಿಥ್ಯಕ್ಕೆ ಕೊಳ್ಳಿ ಇಟ್ಟು ವಿಡಿಯೋ, ಫೋಟೋ ರಿಲೀಸ್​​ ಮಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.

ವಿಲ್ಸನ್​​ ಗಾರ್ಡನ್​​ ನಾಗನಿಗೂ ಬೇಕರಿ ರಘುಗೂ ‘ದರ್ಶನ್’​​ ದುಷ್ಮನಿ!

ದರ್ಶನ್​​ ಜೊತೆ ದುಬಾರಿ ಟೀ ಷರ್ಟ್​​ ಹಾಕ್ಕೊಂಡು ಟೀ ಕುಡೀತಾ ಕೂತಿರೋ ವ್ಯಕ್ತಿಯೇ ನಾಗ ಅಲಿಯಾಸ್​​ ವಿಲ್ಸನ್ ಗಾರ್ಡನ್​ ನಾಗ. 20 ವರ್ಷಗಳಲ್ಲಿ 23 ಕೇಸ್​​ ತಲೆ ಮೇಲೆ ಹಾಕ್ಕೊಂಡಿರೋ, ಭರ್ಜರಿ 8 ಕೊಲೆ ಕೇಸ್​ ಎದುರಿಸುತ್ತಿರೋ ಮೋಸ್ಟ್​ ನಟೋರಿಯಸ್ ರೌಡಿ. ರಾಘವೇಂದ್ರ ಅಲಿಯಾಸ್​ ಬೇಕರಿ ರಘು. ಕುಖ್ಯಾತ ರೌಡಿ ಸೈಕಲ್ ರವಿಯ ರೈಟ್​ ಹ್ಯಾಂಡ್​. 6 ಕೊಲೆ, 7 ಕೊಲೆ ಯತ್ನ ಸೇರಿದಂತೆ 17 ಪ್ರಕರಣಗಳಿರೋ ನಟೋರಿಯಸ್​​ ರೌಡಿ. ಇದೇ ವಿಲ್ಸನ್ ಗಾರ್ಡನ್​​ ನಾಗನಿಗೂ, ಬೇಕರಿ ರಘುಗೂ ಮಧ್ಯೆ ದರ್ಶನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಕಾರಣಕ್ಕೇ ಕೋಲ್ಡ್​ ವಾರ್​ ನಡೀತಾ ಇತ್ತು. ಇಬ್ಬರ ಮಧ್ಯೆ ಫೈಟ್​ ಹೇಗಿತ್ತು ಅಂದ್ರೆ ಜೈಲು ಅನ್ನೋ ಅಡ್ಡಿಯೇ ಇಲ್ಲ ಅಂದಿದ್ರೆ ದರ್ಶನ್​ಗಾಗಿ ಪ್ರಾಣ ಬಿಡೋ ಫೈಟ್​ ಮಾಡ್ತಿದ್ರು ಅನ್ಸುತ್ತೆ. ಸದ್ಯ, ದರ್ಶನ್​​​​ ಹೊಸದೊಂದು ಪೀಕಲಾಟಕ್ಕೆ ಸಿಕ್ಕಿ ಹಾಕಿಕೊಂಡಿರೋದಕ್ಕೆ ಇದೇ ರೌಡಿಗಳ ಸಹವಾಸ. ರೌಡಿಗಳ ಆತಿಥ್ಯದ ಅತಿರೇಕವೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಸೀನಿಯಾರಿಟಿಯನ್ನೂ ಸೋಲಿಸಿ ದರ್ಶನ್​​ ಆತಿಥ್ಯ ಭಾಗ್ಯ ಗೆದ್ದ ನಾಗ?

ಜೈಲಿನಲ್ಲಿ ದರ್ಶನ್​​ ರಾಜಾತಿಥ್ಯ ಪಡ್ಕೊತಿದ್ದಾರೆ ಅನ್ನೋದಷ್ಟೇ ಬಹುಪಾಲು ಮಂದಿ ಚರ್ಚಿಸುತ್ತಿರೋ ವಿಚಾರ ಅಂಥಾ ರಾಜಾತಿಥ್ಯವನ್ನೂ ಮೀರಿಸೋ ದೌಲತ್ತಿನ ದರ್ಬಾರ್​​​ನಲ್ಲಿ ದರ್ಶನ್​​ರನ್ನು ಕೂರಿಸೋಕೇ ದೈತ್ಯ ರೌಡಿಗಳ ಮಧ್ಯೆ ದಂಗಲ್​​ ನಡೀತಿದೆ ಅನ್ನೋದೇ ಅಸಲಿ ಮ್ಯಾಟರ್​. ವಿಲ್ಸನ್​​ ಗಾರ್ಡನ್​​ ನಾಗ ಹೇಳಿ ಕೇಳಿ ಅಂಡರ್​​ವರ್ಲ್ಡ್​​ ರೌಡಿ. ಇನ್ನು, ಸೈಕಲ್ ರವಿಯ ರೈಟ್​​ ಹ್ಯಾಂಡ್​​ ಅನ್ನೋ ಸ್ಪೆಷಲ್​​ ಬ್ಯಾಡ್ಜ್ ಹೊಂದಿರೋ ಬೇಕರಿ ರಘು ರೌಡಿಸಂನಲ್ಲಿ ಸೀನಿಯರ್​​​. ಅಂಥಾ ಸೀನಿಯಾರಿಟಿಯನ್ನೂ ವಿಲ್ಸನ್​​ ಗಾರ್ಡನ್​​ ನಾಗ ಸೋಲಿಸಿಬಿಟ್ಟ. ಮೊದಲಿನಿಂದಲೂ ದರ್ಶನ್​​ ಹಾಗೂ ವಿಲ್ಸನ್​ ಗಾರ್ಡನ್​​ ನಾಗನ ನಡುವೆ ಸ್ನೇಹ ಒಡನಾಟವಿತ್ತು. ಹಾಗಂತ ಬೇಕರಿ ರಘು ಜೊತೆ ಇರ್ಲಿಲ್ಲ ಅಂತಲ್ಲ.. ನಾಗ, ರಘು ಇಬ್ಬರನ್ನೂ ದರ್ಶನ್​​ ಒಂದೇ ರೀತಿ ನೋಡ್ತಿದ್ನಂತೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್​​ ಜೈಲು ಸೇರಿದ ಕೂಡಲೇ ಇದೇ ವಿಲ್ಸನ್​ ಗಾರ್ಡನ್​ ನಾಗ ಮೊದಲಿಗೆ 3ನೇ ಬ್ಯಾರಕ್ಕಿಗೆ ಓಡೋಡಿ ಹೋಗಿದ್ನಂತೆ. ದರ್ಶನ್​​ ಜೈಲು ಸೇರಿದ ಆರಂಭದಲ್ಲಿ ಬೇಕರಿ ರಘುನೇ ಬಹುಪಾಲು ವ್ಯವಸ್ಥೆಗಳನ್ನು ಮಾಡಿದ್ದ ಅನ್ನೋ ಮಾತಿದೆ. ಆ ಬಳಿಕ ಒಂದು ಒಪ್ಪಂದಕ್ಕೆ ಬಂದಂತಹ ನಾಗ, ರಘು ದರ್ಶನ್​​ಗೆ ಆತಿಥ್ಯ ನೀಡೋದ್ರಲ್ಲೂ ಪಾಲು ಹಂಚಿಕೆಗಳು ನಡೆದಿದ್ದವು.

ಮೊದಲ ಹತ್ತು ದಿನಗಳ ದರ್ಶನ್​​ ಆತಿಥ್ಯ ಬೇಕರಿ ರಘು ಪಾಲಾಗಿತ್ತು!

ದರ್ಶನ್​​ ಅನ್ನೋ ಮಾಸ್​​ ಹೀರೋ. ಲಾಂಗ್​​ ಲಕ್ಷ್ಮೀಪತಿ.. ಪರದೆ ಮೇಲಿನ ಪಾತಕ ಲೋಕ ಪರಮ ಪತೀತ ಪರಮೇಶ್ವರ ಜೈಲಿಗೆ ಬಂದ ಕೂಡಲೇ ನಾಮುಂದು ತಾಮುಂದು ಅಂತ ಟ್ರೀಟ್​​ ಕೊಟ್ಟು ಚೆನ್ನಾಗಿ ನೋಡಿಕೊಳ್ಳೋದಕ್ಕೆ ರಿಯಲ್​ ರೌಡಿಗಳು ಮುಂದಾಗಿದ್ರು. ನಾಗ ಹಾಗೂ ಬೇಕರಿ ರಘು ಒಪ್ಪಂದದಂತೆ ಮೊದಲ 10 ದಿನಗಳ ದರ್ಶನ್​​ ಆತಿಥ್ಯದ ಭಾಗ್ಯದ ಪಾಲನ್ನ ಬೇಕರಿ ರಘು ವಹಿಸಿಕೊಂಡಿದ್ದ. ಹಾಗಾಗಿ ದರ್ಶನ್ ಜೈಲಿಗೆ ಎಂಟ್ರಿ ಕೊಟ್ಟ ಆರಂಭದ ದಿನಗಳ ಸಕಲ ಸೆಲ್​​ ಸೌಭಾಗ್ಯಗಳ ಅನ್ನದಾತ ರಘುನೇ ಆಗಿದ್ದ.. ಮಾತು ತಪ್ಪದ ವಿಲ್ಸನ್​ ಗಾರ್ಡನ್​ ನಾಗ 10 ದಿನಗಳ ಕಾಲ ಸುಮ್ಮನಿದ್ದ. 10 ದಿನಗಳ ಬಳಿಕ ದರ್ಶನ್​ ಜೈಲಲ್ಲೇ ಉಳಿಯೋ ಸಂದರ್ಭ ಎದುರಾದ್ಮೇಲೆ ದಿನಗಳ ಲೆಕ್ಕವೇ ಸಿಗಲಿಲ್ಲ. ಯಾವಾಗ ರಘು ಕೈಯಿಂದ ವಿಲ್ಸನ್​​ ಗಾರ್ಡನ್​​ ನಾಗನ ಕೈಗೆ ದರ್ಶನ್​​ ನೋಡಿಕೊಳ್ಳೋ ಅವಕಾಶ ಸಿಕ್ತೋ ಖುಲ್ಲಂಖುಲ್ಲಾ ಖರ್ಚು ಮಾಡಿ ದರ್ಶನ್​​ರನ್ನ ನಾಗ ನೋಡಿಕೊಳ್ಳುತ್ತಿದ್ದಾನೆ ಎನ್ನಲಾಗ್ತಿದೆ.

ನಾಗ.. ಬೇಕರಿ ರಘು.. ಇಬ್ಬರ ಮಧ್ಯೆ ಸಿಕ್ಕಿ ದರ್ಶನ್​​ ಅಪ್ಪಚ್ಚಿ!

ಒಬ್ಬನನ್ನ ಹೊಗಳಂಗಿಲ್ಲ.. ಮತ್ತೊಬ್ಬನನ್ನ ತೆಗಳಂಗೂ ಇಲ್ಲ.. ಬ್ಯಾಲೆನ್ಸ್​​ ಮಾಡ್ಕೊಂಡು ಹೋದ್ರಷ್ಟೇ ಬೆಲೆ.. ಇಲ್ದಿದ್ರೆ ಏನ್ ಬೇಕಾದ್ರೂ ಆಗಬಹುದು. ಇಂಥಾ ಇಕ್ಕಟ್ಟಿನ ಮಧ್ಯೆಯೇ ದರ್ಶನ್​​ ಇಬ್ಬರ ಆತಿಥ್ಯವನ್ನೂ ಸ್ವೀಕರಿಸಿದ್ದಾರೆ.. ಮೊದಲಿಗೆ ರಘು ಬಳಿ ಆದಷ್ಟು ಹತ್ತಿರವಾಗಿದ್ದ ದರ್ಶನ್, ಬಳಿಕ ನಾಗನ ಹತ್ತಿರವೂ ಫುಲ್ ಕ್ಲೋಸ್​​ ಆಗಿದ್ದು ಕಂಡು ರಘುಗೆ ಸಹಿಸೋಕೆ ಸಾಧ್ಯವಾಗಲಿಲ್ಲ ಎನ್ನಲಾಗ್ತಿದೆ. ಯಾಕಂದ್ರೆ, ತೆರೆ ಮೇಲಿನ ಇಂದ್ರ ಚಂದ್ರ ದೇವೇಂದ್ರ ಕಿಂಗ್ಗು ಖಿಲಾಡಿ ನೋಡಿ ರೌಡಿಗಳೇ ಕಳೆದುಹೋಗಿದ್ರು. ಹಾಗಾಗಿ ಬರೀ ಸಿಗರೇಟು.. ಎಣ್ಣೆ ಅಷ್ಟೇ ಅಲ್ಲ.. ಎಲ್ಲಾ ಸೇವೆ ಸರ್ವೀಸ್​​ ಅನ್ನೂ ಈ ಜೋಡಿ ಮಾಡ್ತಿತ್ತು ಅನ್ನೋ ಮಾತಿದೆ.. ಆದರೇ, ದರ್ಶನ್​​​ಗೆ ಅತಿ ಹೆಚ್ಚು ನಾಗ ಕ್ಲೋಸ್​​ ಆಗಿದ್ದು ಸೀನಿಯರ್​ ಬೇಕರಿ ರಘುಗೆ ಅಪಮಾನದಂತೆ ಕಂಡಿತ್ತು.. ತನಗಿಂತ ಜ್ಯೂನಿಯರ್​​ ದರ್ಶನ್​​​ ಆತ್ಮೀಯತೆ ಗಳಿಸಿದ್ದಾನೆ ಅಂತಲೋ. ನನ್ನನ್ನೇ ಹಿಂದಿಕ್ಕಿ ಹೋಗ್ತಿದ್ದಾನೆ ಅಂತ್ಲೋ ಬೇಕರಿ ರಘು ಬೇಸರ ಮಾಡ್ಕೊಂಡಿದ್ದಾನೆ. ಇದೇ ಕಾರಣಕ್ಕೇ ನೋಡಿ ದರ್ಶನ್​​ ಪಾಲಿನ ಪರಪ್ಪನ ಅಗ್ರಹಾರದ ಕೇರ್​ ಟೇಕರ್​ ವಿಲ್ಸನ್​ ಗಾರ್ಡನ್​ ನಾಗ ಹಾಗೂ ಕುಳ್ಳ ಸೀನನ ಮ್ಯಾಟರ್​ ಲೀಕ್ ಆಗುವಂತೆ ನೋಡಿಕೊಳ್ಳಲಾಗಿದೆ. ದರ್ಶನ್​​ ಜೈಲಿನೊಳಗೆ ಹೇಗಿದ್ದಾನೆ ಫ್ಯಾನ್ಸ್​​ ಕ್ಯೂರಿಯಾಸಿಟಿಗೂ ಜೈಲೊಳಗಿನ ಕೈದಿ ಫ್ಯಾನ್ಸ್​​ ಫೈಟ್​​ಗೂ ಸರಿ ಹೋಗುವಂತೆ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಆದ್ರೆ, ಅಸಲಿ ಮ್ಯಾಟರ್​ ಇದಲ್ಲವೇ ಅಲ್ಲ.

ಇದನ್ನೂ ಓದಿ: ದರ್ಶನ್​ ರೆಸಾರ್ಟ್​​ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?

ದರ್ಶನ್​​ ದರ್ಬಾರ್​​ನ ಹೆಚ್ಚಿನ ಫೋಟೋ, ವಿಡಿಯೋ ರಿವೀಲ್ ಆಗಲಿವೆಯೇ?

ರೌಡಿಸಂನಲ್ಲಿ ದುಷ್ಮನಿಯ ಅಪ್ಪ ಅಮ್ಮ ಯಾರು ಗೊತ್ತಾ? ಇಗೋ.. ಅಹಂ.. ದುರಂಹಕಾರ.. ದೌಲತ್ತು.. ತಾನು ಸೀನಿಯರ್​.. ಜ್ಯೂನಿಯರ್​ ಅನ್ನೋ ವ್ಯತ್ಯಾಸಗಳ ವೆಪನ್ಸ್​​ ಸುಮ್ಮನೇ ಸೌಂಡ್​​ ಮಾಡಿದ್ರೂ ಕೆಮ್ಮಿದಷ್ಟು ಸುಲಭಕ್ಕೆ ಕೊಲೆಗಳಾಗ್ತವೆ. ಇಲ್ಲೂ ಅಂಥದ್ದೇ ದರ್ಶನ್ ದುಷ್ಮನಿ ಇದೀಗ ಬೇಕರಿ ರಘು ತಲೆ ಹೊಕ್ಕಿದೆ ಎನ್ನಲಾಗುತ್ತಿದೆ. ಆದರೇ, ದುಷ್ಮನಿ ಇರೋದು ವಿಲ್ಸನ್​ ಗಾರ್ಡನ್​ ನಾಗನ ಮೇಲೆ, ಹಾಗಾಗಿಯೇ ಮತ್ತೊಂದು ಕೇಸ್​​ನಲ್ಲಿ ಫಿಟ್​​ ಮಾಡಿಸೋ ಲೆಕ್ಕಾಚಾರದಲ್ಲೇ ಸಾಕಷ್ಟು ಫೋಟೋಗಳನ್ನ ತೆಗೆದುಕೊಂಡಿದೆಯಂತೆ ಬೇಕರಿ ರಘು ಗ್ಯಾಂಗ್. ಪ್ರತಿ ದಿನವೂ ಲಕ್ಷಗಟ್ಟಲೇ ಲೆಕ್ಕದಲ್ಲೇ ನಾಗ ಖರ್ಚು ಮಾಡಿ ದರ್ಶನ್​​ ದರ್ಬಾರ್​​ ಸಾಂಗವಾಗಿ ನಡೆಯುವಂತೆ ನೋಡಿಕೊಂಡಿದ್ದಾನೆ ಅನ್ನೋ ವಾದವಿದೆ. ಇದಕ್ಕೆ ಪೂರಕ ಎನ್ನುವಂತೆ ಕಲರ್​​ಫುಲ್ ಟೀ ಷರ್ಟ್​​ ಜೊತೆ ಗೋವಾ ಗ್ಯಾಂಗ್​​ ರೀತಿ ವಿಲ್ಸನ್​ ಗಾರ್ಡನ್​​ ನಾಗನ ಗ್ಯಾಂಗ್​ ಕಾಣಿಸ್ತಿದೆ. ಪ್ರತೀ ದರ್ಬಾರ್​​ನ ವಿಡಿಯೋ ಫೋಟೋಗಳು ರಘು ಬತ್ತಳಿಕೆಯಲ್ಲಿದ್ದು. ಮತ್ತೊಂದು ಸಲ ರಿಲೀಸ್​ ಆದ್ರೂ ಅಚ್ಚರಿ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೋಟೋ ರಿಲೀಸ್‌ಗೆ ಗ್ಯಾಂಗ್ ವಾರ್ ಕಾರಣ.. ನಾಗನಿಗೂ ಬೇಕರಿ ರಘುಗೂ ದುಷ್ಮನಿ ಯಾಕೆ? ಇಲ್ಲಿದೆ ಡಿಟೇಲ್ ಸ್ಟೋರಿ!

https://newsfirstlive.com/wp-content/uploads/2024/08/NAGA_DARSHAN_RAGHU.jpg

Load More