newsfirstkannada.com

ಐಎನ್​​ಡಿಐಎ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ ಎಂದ ಡಿಎಂಕೆ; ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ!

Share :

Published March 21, 2024 at 7:15pm

    ಪ್ರಣಾಳಿಕೆಯಲ್ಲಿನ ಕರ್ನಾಟಕ ವಿರೋಧಿ ಭರವಸೆಯನ್ನು ಹೇಗೆ ಸಮರ್ಥಿಸುವಿರಿ?

    ‘ಇಂಡಿಯಾ’ ಗೆದ್ದರೆ ಮೇಕೆದಾಟು ಡ್ಯಾಂಗೆ ತಡೆ ಎಂದ ಡಿಎಂಕೆ ಪ್ರಣಾಳಿಕೆ

    ಕಾಂಗ್ರೆಸ್​​ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ ಬಿ ವೈ ವಿಜಯೇಂದ್ರ

ಮುಂಬರುವ 2024 ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಗೆದ್ದರೆ ಮೇಕೆದಾಟು ಡ್ಯಾಂಗೆ ತಡೆ ಎಂದು ಡಿಎಂಕೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇಂಡಿಯಾ ಕೂಟದಲ್ಲಿ ಕಾಂಗ್ರೆಸ್‌ ಪ್ರಧಾನ ಪಕ್ಷವಾಗಿದ್ದು, ಆ ಪಕ್ಷದ ಸರ್ಕಾರವೇ ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದೆ. ಮೇಕೆದಾಟು ಅಣೆಕಟ್ಟೆ ನಿರ್ಮಾಣ ಮಾಡುವ ಭರವಸೆಯನ್ನೂ ನೀಡಿದೆ. ಈ ವಿಚಾರ ಗೊತ್ತಿದ್ದೂ, ಬುಧವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಡಿಎಂಕೆ ಈ ಅಂಶ ಸೇರ್ಪಡೆ ಮಾಡಿರುವುದು ವಿವಾದದ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ.

ಇದನ್ನು ಓದಿ: Viksit Bharat ಅಡಿಯಲ್ಲಿ ಜನರಿಗೆ ವಾಟ್ಸ್​​ಆ್ಯಪ್ ಮೆಸೇಜ್ ಕಳುಹಿಸುತ್ತಿದ್ದ ಕೇಂದ್ರಕ್ಕೆ ಬಿಗ್ ಶಾಕ್..!

ಇನ್ನು, ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಪ್ರಸ್ತಾಪ ಬೆನ್ನಲ್ಲೇ ರಾಜ್ಯ ಬಿಜೆಪಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್​ ಮೂಲಕ ಕೌಂಟರ್​ ಕೊಟ್ಟಿದೆ. ಮೇಕೆದಾಟು ಹೆಸರಿನಲ್ಲಿ ಬೊಂಡಾ ಬಜ್ಜಿ ತಿನ್ನುತ್ತಾ ವಾಕಿಂಗ್ ಮಾಡಿದ್ದ ಸಿಎಂ ಸಿದ್ದರಾಮಯ್ಯನವರೇ, ತಮಿಳುನಾಡಿನ ನಿಮ್ಮ ಮುದ್ದಿನ ತಮ್ಮ ಎಂ. ಕೆ. ಸ್ಟಾಲಿನ್, ಇಂಡಿ ಮೈತ್ರಿಕೂಟ ಗೆದ್ದರೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಬಿಡಲ್ಲ ಅಂತ ಪ್ರಣಾಳಿಕೆಯಲ್ಲಿಯೇ ತಿಳಿಸಿದ್ದಾರೆ. ಸ್ಟ್ರಾಂಗ್ ಎಂದು ಬೀಗುವ ವೀಕ್ ಸಿಎಂ ಸಿದ್ದರಾಮಯ್ಯ, ಡಿಎಂಕೆ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ ಖಂಡಿಸಿ ಅವರನ್ನು ಇಂಡಿ ಮೈತ್ರಿಕೂಟದಿಂದ ಉಚ್ಛಾಟಿಸಿ, ರಾಹುಲ್ ಗಾಂಧಿಗೆ ಈ ಬಗ್ಗೆ ಯಾವಾಗ ಪತ್ರ ಬರೆಯುತ್ತೀರಿ ಅಂತ ಪ್ರಶ್ನೆ ಮಾಡಿದೆ. ಅಲ್ಲದೇ ಡಿಕೆ ಶಿವಕುಮಾರ್​ ಅವ್ರೆ, ಡಿಎಂಕೆಯ ಈ ಪ್ರಣಾಳಿಕೆಯ ವಿರುದ್ಧ ಪಾದಯಾತ್ರೆ ಅಲಿಯಾಸ್ ಮೋಜು-ಮಸ್ತಿಯ ವಾಕಿಂಗ್ ಅನ್ನು ಆರಂಭಿಸುವುದು ಯಾವಾಗ ಅಂತ ವ್ಯಂಗ್ಯವಾಡಿದೆ.

ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಕೂಡ ಟ್ವೀಟ್​ ಮಾಡುವ ಮೂಲಕ  ಕಾಂಗ್ರೆಸ್​​ ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಸಿದ್ದರಾಮನವರೇ ನಾನು ಸ್ಟ್ರಾಂಗ್ ಎಂದು ಸ್ವ ಬಣ್ಣನೆ ಮಾಡಿಕೊಳ್ಳುತ್ತೀರಿ. ವಿಪರ್ಯಾಸವೆಂದರೆ ನೀವೆಷ್ಟು ‘ವೀಕ್’ ಎಂಬುದನ್ನು ಪರಿಪೂರ್ಣ ಮನಗಂಡಿರುವ ನಿಮ್ಮ ಸಹೋದರ ಮಿತ್ರ ತಮಿಳುನಾಡು ಮುಖ್ಯಮಂತ್ರಿ ಎಮ್​ ಕೆ ಸ್ಟಾಲೀನ್​ ‘I.N.D.I (A) ಕೂಟ ಗೆದ್ದರೆ ಮೇಕೆದಾಟು ಡ್ಯಾಂ ಕಟ್ಟಲು ಬಿಡುವುದಿಲ್ಲ’ ಎಂದು ಎಗ್ಗಿಲ್ಲದೇ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್​​ ಅವರ ಜತೆಗೂಡಿ ಮೇಕೆದಾಟು ಯೋಜನೆಗಾಗಿ ನೀವು ನಡೆಸಿದ ಪಾದಯಾತ್ರೆಗೆ ನಿಮ್ಮ ಕಾಂಗ್ರೆಸ್ ವರಿಷ್ಠರು ಕನಿಷ್ಠ ಕಿಮ್ಮತ್ತು ನೀಡಿಲ್ಲ ಎಂಬುದು DMK ಪಕ್ಷದ ಪ್ರಣಾಳಿಕೆ ಸಾಕ್ಷಿ ನುಡಿಯುತ್ತಿದೆ. ನಿಮ್ಮ ಬೂಟಾಟಿಕೆಯ ಮೇಕೆದಾಟು ಹೋರಾಟ ‘ಮೊಸಳೆಕಣ್ಣೀರಿನದು’ ಎಂಬುದು ಕರ್ನಾಟಕದ ಜನತೆಗೆ ಮನವರಿಕೆಯಾಗಿದೆ. ಗೋಕಾಕ್ ಚಳವಳಿ, ಕಾವೇರಿ ಚಳವಳಿಗಳನ್ನು ಈ ಹಿಂದೆಯೂ ಹತ್ತಿಕ್ಕಲು ಯತ್ನಿಸಿರುವ ಕುಖ್ಯಾತಿ ಹೊಂದಿರುವ ನಿಮ್ಮ ಕಾಂಗ್ರೆಸ್ ಕನ್ನಡನಾಡು, ನುಡಿ, ಜನರ ಹಿತಾಸಕ್ತಿಯ ಪರ ಎಂದೂ ನಿಂತಿಲ್ಲ, ನಿಲ್ಲವುದೂ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಮಾನ್ಯ ಮಲ್ಲಿಕಾರ್ಜುನ​ ಖರ್ಗೆ ಅವರೇ ನೀವೂ ಒಬ್ಬ ಕನ್ನಡಿಗರಾಗಿ ನಿಮ್ಮ ಮೈತ್ರಿಕೂಟದ ಹೆಸರಿನಲ್ಲಿ ಬಿಡುಗಡೆಯಾಗಿರುವ ಪ್ರಣಾಳಿಕೆಯಲ್ಲಿನ ಕರ್ನಾಟಕ ವಿರೋಧಿ ಭರವಸೆಯನ್ನು ಹೇಗೆ ಸಮರ್ಥಿಸುವಿರಿ? ಕರುನಾಡಿನ ಆರೂವರೆ ಕೋಟಿ ಜನರಿಗೆ ಉತ್ತರಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಎನ್​​ಡಿಐಎ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ ಎಂದ ಡಿಎಂಕೆ; ಕಾಂಗ್ರೆಸ್​​ ವಿರುದ್ಧ ಬಿಜೆಪಿ ಕಿಡಿ!

https://newsfirstlive.com/wp-content/uploads/2023/07/MK-Stalin.jpg

Load More