/newsfirstlive-kannada/media/post_attachments/wp-content/uploads/2024/09/CBSC_STUDENT_1.jpg)
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಮದ್ರಾಸ್, ಶಾಲಾ ವಿದ್ಯಾರ್ಥಿಗಳಿಗೆ 2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮ ಆಯೋಜನೆ ಮಾಡಿದೆ. ಇದು ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ ಬಗೆಗಿನ ಮಾಹಿತಿ ಒಳಗೊಂಡಿರುತ್ತದೆ. ಅರ್ಹ ಹಾಗೂ ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಪ್ರಯೋಜನಾ ಪಡೆಯಬಹುದು.
ಇದನ್ನೂ ಓದಿ:SSLC, PUC ಬೋರ್ಡ್ ಎಕ್ಸಾಂ ಯಾವಾಗ.. ಈ ತಿಂಗಳಲ್ಲೇ CBSE ಪರೀಕ್ಷೆ ನಡೆಸುತ್ತಾ?
ಇದು 8 ವಾರಗಳು ಅಂದರೆ 2 ತಿಂಗಳುಗಳ ಕಾಲ ಪ್ರಮಾಣೀಕರಣ ಕೋರ್ಸ್ ಆಗಿರುತ್ತದೆ. ವಿದ್ಯಾರ್ಥಿಗಳ ಜೀವನಕ್ಕೆ ಉಪಯೋಗವಾಗುಂತ ಅತ್ಯಂತ ಪ್ರಮುಖ ಮಾಹಿತಿ ಒದಗಿಸುತ್ತದೆ. ಪಾಲುದಾರ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲಾ ಪ್ರಾಧಿಕಾರವನ್ನು ಸಂಪರ್ಕ ಮಾಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. 2 ಆನ್‌ಲೈನ್ ಪ್ರಮಾಣಪತ್ರ ಕಾರ್ಯಕ್ರಮಕ್ಕೆ ತಲಾ 500 ರೂ. ಶುಲ್ಕ ಇರುತ್ತದೆ. 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳು ಅಪ್ಲೇ ಮಾಡಬಹುದು.
ಅರ್ಹತೆಯ ಮಾನದಂಡ
- ಡಾಟಾ ಸೈನ್ಸ್​ ಹಾಗೂ ಎಐ- 11, 12ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯ
- ಎಲೆಕ್ಟ್ರಾನಿಕ್ ಸಿಸ್ಟಮ್‌ಗಳ- 11, 12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ ಅಧ್ಯಯನ ಮಾಡಿರಬೇಕು
ಇದನ್ನೂ ಓದಿ: 10ನೇ ಕ್ಲಾಸ್ ಪಾಸ್ ಆಗಿದ್ರೆ ಸರ್ಕಾರಿ ಕೆಲಸ.. ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ಫಾರ್ಮ್
/newsfirstlive-kannada/media/post_attachments/wp-content/uploads/2024/09/CBSC_STUDENT.jpg)
ಕೋರ್ಸ್​ನ ವಿವಿರ ಇಲ್ಲಿದೆ
- 30 ನಿಮಿಷಗಳ ಕೋರ್ಸ್ ಬಗ್ಗೆ ರೆಕಾರ್ಡ್ ಮಾಡಿದ ಉಪನ್ಯಾಸ ವೀಡಿಯೊಗಳು ಒಳಗೊಂಡಿದೆ
- 1 ಗಂಟೆ ಸಾಪ್ತಾಹಿಕ ವಿಷಯ ಅವಧಿಯೊಂದಿಗೆ ಪ್ರತಿ ಸೋಮವಾರ ವಿಡಿಯೋ ಅಪ್​ಲೋಡ್ ಮಾಡಲಾಗುತ್ತದೆ
- ಆ ವಾರದಲ್ಲಿ ಯಾವ ದಿನವಾದರೂ ವಿದ್ಯಾರ್ಥಿಗಳು ವಿಡಿಯೋವನ್ನು ನೋಡಬಹುದು
- ತಿಂಗಳಿಗೊಮ್ಮೆ ವಾರಾಂತ್ಯದಲ್ಲಿ ನೇರ ಸಂವಾದಾತ್ಮಕ ( live interactive) ಸೆಷನ್ ಇರುತ್ತದೆ
- ಪ್ರತಿ 2 ವಾರಗಳಿಗೊಮ್ಮೆ ಆನ್‌ಲೈನ್ ಅಸೈನ್​ಮೆಂಟ್ ನೀಡಲಾಗುತ್ತೆ. 2 ವಾರಗಳ ಒಳಗೆ ವಿದ್ಯಾರ್ಥಿಗಳು ಸಲ್ಲಿಸಬೇಕು
ಕೋರ್ಸ್‌ಗಳು: ಪಾಲುದಾರ ಶಾಲೆಗಳನ್ನು ಪರಿಶೀಲಿಸಲು ಕ್ರಮಗಳು
- ಅಧಿಕೃತ ವೆಬ್‌ಸೈಟ್‌ಗೆ ಹೋಗಿ, school-connect.study.iitm.ac.inStep
- ಹೋಮ್​ಪೇಜ್​​ ಕ್ಲಿಕ್ ಮಾಡಿ, ಪಾಲುದಾರ ಶಾಲೆಗಳ ಸ್ಟೆಪ್ ಫಾಲೋ ಮಾಡಿ
- ಒಂದು ಹೊಸ ಪೇಜ್ ಓಪನ್ ಆಗುತ್ತೆ, ಅದರಲ್ಲಿ ನಿಮ್ಮ ಶಾಲೆ ಹೆಸರು ಹುಡುಕಿ
- Ctrl + F ಪ್ರಸ್ ಮಾಡುವ ಮೂಲಕ ನಿಮ್ಮ ಶಾಲೆ ಹುಡುಕಬಹುದು
ಐಐಟಿ ಮದ್ರಾಸ್ ವೇಳಾಪಟ್ಟಿ
- ರಿಜಿಸ್ಟ್ರೇಷನ್ ಕೊನೆಯ ದಿನಾಂಕ- ಅಕ್ಟೋಬರ್ 4, 2024
- ಪಾಲುದಾರ ಶಾಲೆಗಳ ರಿಜಿಸ್ಟ್ರೇಷನ್ ಕೊನೆಯ ದಿನಾಂಕ- ಸೆ.30
- ಕಾರ್ಯಕ್ರಮ ಆರಂಭದ ದಿನಾಂಕ- ಅಕ್ಟೋಬರ್ 21, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us