Advertisment

ಕೋಲ್ಕತ್ತಾ ವೈದ್ಯೆ ಸಾವಿಗೆ ಮನಮಿಡಿದ IMA ಅಧ್ಯಕ್ಷ; ಕಣ್ಣೀರು ತರಿಸುತ್ತೆ ಅಶೋಕನ್ ಭಾವುಕ​ ಪತ್ರ

author-image
Gopal Kulkarni
Updated On
ಕೋಲ್ಕತ್ತಾ ವೈದ್ಯೆ ಸಾವಿಗೆ ಮನಮಿಡಿದ IMA ಅಧ್ಯಕ್ಷ; ಕಣ್ಣೀರು ತರಿಸುತ್ತೆ ಅಶೋಕನ್ ಭಾವುಕ​ ಪತ್ರ
Advertisment
  • ಕೋಲ್ಕತ್ತಾ ವೈದ್ಯೆಯ ಪ್ರಕರಣದ ಬಗ್ಗೆ ಮನಮಿಡಿಯುವ ಪತ್ರ ಬರೆದ ಅಶೋಕನ್​​
  • ಟ್ವಿಟರ್​ನಲ್ಲಿ ಪತ್ರವನ್ನು ಪೋಸ್ಟ್ ಮಾಡಿರುವ IMAನ ಅಧ್ಯಕ್ಷ ಆರ್.ವಿ.ಅಶೋಕನ್​​
  • ಇಡೀ ದೇಶದ ಅಸಹಾಯಕತೆ, ಹತಾಶೆಗೆ ಅಕ್ಷರ ರೂಪ ಕೊಟ್ಟಿರುವ IMA ಅಧ್ಯಕ್ಷ

ಕೋಲ್ಕತ್ತಾ: ಕಳೆದ ಒಂದು ವಾರದಿಂದ ದೇಶದಲ್ಲಿ ಕೋಟ್ಯಾನುಕೋಟಿ ಜನರು ಎದೆಯಲ್ಲೊಂದು ಬೆಂಕಿಯನ್ನಿಟ್ಟುಕೊಂಡೇ ದಿನ ದೂಡಿರಬಹುದು. ಕೋಲ್ಕತ್ತಾದ ಆರ್​ಜಿ ಕರ್ ಕಾಲೇಜ್​​ನಲ್ಲಿ ನಡೆದ ಘಟನೆಯೇ ಅಂತಹದು. ಕಲ್ಲು ಹೃದಯವೂ ಕೂಡ ಒಂದು ಕ್ಷಣ ಕಂಬನಿಗರೆಯುವಂತಹ ಹೃದಯವಿದ್ರಾವಕ ಘಟನೆ. ಇಡೀ ದೇಶದಲ್ಲಿಯೇ ಒಂದು ಆಕ್ರೋಶ ಮನೆಮಾಡಿದೆ. ಮತ್ತೆ ಮತ್ತೆ ನಿರ್ಭಯಾದಂತ ಘಟನೆ ಕಂಡು ಕೇಳಿ ದೇಶದ ಜನರ ಸಹನೆಯೂ ಕೂಡ ಕಟ್ಟೆಯೊಡೆದಿದೆ. ಆದ್ರೆ ಏನೂ ಮಾಡಲಾಗದ ನಿಸ್ಸಾಹಯಕತೆಯೂ ಕೂಡ ಅವರನ್ನು ರೋಸಿಹೋಗುವಂತೆ ಮಾಡಿದೆ. ಇಡೀ ದೇಶದ ಜನರ ನೋವನ್ನ, ನಿಸ್ಸಾಹಯಕತೆಯನ್ನ, ಎದೆಯಲ್ಲಿ ಉಳಿದ ಆರದ ಬೆಂಕಿಯನ್ನ ಈ ಎಲ್ಲವನ್ನೂ ಒಂದೇ ಒಂದು ಪತ್ರದ ಮೂಲಕ ಅಕ್ಷರಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಆರ್ ವಿ ಅಶೋಕನ್.​

Advertisment

ಇದನ್ನೂ ಓದಿ:ವ್ಯಾನ್​​, ಟೆಂಪೋ ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ 10 ಮಂದಿ ದಾರುಣ ಸಾವು..!

ಜೀವನದಲ್ಲಿ ಆಕೆಯ ಸೋಲಿಗೆ ನಾವು ಕಾರಣರಾಗಿರಬಹುದು ಆದ್ರೆ..

ಕೊಲ್ಕತ್ತಾದಲ್ಲಿ 31 ವರ್ಷದ ವೈದ್ಯೆಯ ಮೇಲೆ ದುರುಳರು ನಡೆಸಿದ ನೀಚ ಕೃತ್ಯವನ್ನು ಖಂಡಿಸಿ ಐಎಂಎದ ಅಧ್ಯಕ್ಷ ಆರ್ ಅಶೋಕನ್ ಒಂದು ಭಾವುಕ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ ಈ ದೇಶ , ಈ ದೇಶದ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳನ್ನು ಹೆತ್ತಂತ ಪೋಷಕರು ಅನುಭವಿಸುತ್ತಿರುವ ಸದ್ಯದ ನೋವನ್ನು ಅನಾವರಣ ಮಾಡಿದ್ದಾರೆ. ಜೀವನದಲ್ಲಿ ಆಕೆಯ ಸೋಲಿಗೆ ನಾವು ಕಾರಣರಾಗಿರಬಹುದು, ಆದ್ರೆ ಒಂದು ದೇಶವಾಗಿ ಆಕೆಯ ಸಾವಿಗೆ ನ್ಯಾಯ ಸಿಗುವಂತೆ ಆಗುತ್ತೆ.

ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆ ಕೇಸ್​​.. ಅಂದು ರಾತ್ರಿ ಅಸಲಿಗೆ ಆಗಿದ್ದೇನು? ಸ್ಫೋಟಕ ಸತ್ಯ ಬಿಚ್ಚಿಟ್ರು!

Advertisment

ದೇಶದ ಜನರ ಸದ್ಯದ ಮನಸ್ಥಿತಿಯನ್ನು ಗುರುತಿಸುವುದು ಅಷ್ಟು ಸುಲಭವಿಲ್ಲ. ಎಲ್ಲರಲ್ಲಿಯೂ ಒಂದು ಅಸಹಾಯಕತೆ, ಹತಾಶೆ ದುಃಖ ಎಂಬುದು ಎದೆಯಲ್ಲಿ ಮಡುಗಟ್ಟಿದೆ ಎಂದಿದ್ದಾರೆ. ಅವರು ಬರೆದ ಪತ್ರದ ಒಂದೊಂದು ಅಕ್ಷರವೂ ಕೂಡ ಈ ದೇಶ ಸದ್ಯ ಕೋಲ್ಕತ್ತಾದ ವೈದ್ಯೆಯ ಮೇಲೆ ನಡೆದ ಆ ಅನಾಚರದ ಬಗ್ಗೆ ಇಡೀ ದೇಶ ಹೇಗೆ ಪ್ರತಿಕ್ರಿಯಿಸುತ್ತಿದೆ ಅನ್ನೋದರ ಪ್ರತಿಫಲನವೇ ಆಗಿದೆ.


">August 18, 2024

ಅವಳು ಲಕ್ಷ ಲಕ್ಷ ಮೇಣುಬತ್ತಿಯಿಂದ ಬೆಳಗಿದಳು, ಸಾವಿರಾರು ಯುದ್ಧ ನಗಾರಿಗಳು ಪ್ರತಿಧ್ವನಿಸಿವೆ. ಭಾರತದ ಪ್ರತಿ ಕುಟುಂಬಗಳು ತನ್ನ ಮನೆಯ ಮಗಳನ್ನು ಕಳೆದುಕೊಂಡ ನೋವಿನಲ್ಲಿವೆ. ತಾಯಂದಿರೆಲ್ಲಾ ಕುದ್ದು ಹೋಗಿದ್ದಾರೆ, ತಂದೆ ಮೌನಕ್ಕೆ ಶರಣಾಗಿದ್ದಾನೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಎಲ್ಲರಲ್ಲೂ ಉಮ್ಮಳಿಸಿ ಬರುವ ದುಃಖ ಅಶೋಕನ್ ಅವರ ಪತ್ರದಲ್ಲಿ ಅಕ್ಷರಗಳಾಗಿ ಮೂಡಿವೆ. ಎಲ್ಲರಲ್ಲೂ ಮಡುಗಟ್ಟಿನಿಂತ ದುಃಖ ಇಲ್ಲಿ ಅಕ್ಷರ ರೂಪ ಪಡೆದಿವೆ. ದೇಶದ ಮನದ ಮಿಡಿತವನ್ನು ಪತ್ರದಲ್ಲಿ ಮೂಡಿಸಿದ್ದಾರೆ ಆರ್​ವಿ ಅಶೋಕನ್ .

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment