newsfirstkannada.com

ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ ಪ್ರಕರಣ; NIA ವಿಶೇಷ ಕೋರ್ಟ್‌ನಿಂದ ಮಹತ್ವದ ತೀರ್ಪು

Share :

Published January 18, 2024 at 12:44pm

Update January 18, 2024 at 12:49pm

    ISIS ಉಗ್ರ ಸಂಘಟನೆ ಪರ ಟ್ವೀಟ್ ಮಾಡಿದ್ದ ಮೆಹದಿ ಬಿಸ್ವಾಸ್

    ಬೆಂಗಳೂರಿನ ಜಾಲಹಳ್ಳಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದ ಸಿಸಿಬಿ

    ವಿಶೇಷ ನ್ಯಾಯಾಲಯದಿಂದ ಇದೇ ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟ

ಬೆಂಗಳೂರು: ISIS ಭಯೋತ್ಪಾದನಾ ಸಂಘಟನೆ ಬಗ್ಗೆ ಒಲವು ಹೊಂದಿದ್ದ ಮೆಹದಿ ಮಸರೂರ್ ಬಿಸ್ವಾಸ್ ಅಪರಾಧಿ ಎಂದು NIA ವಿಶೇಷ ಕೋರ್ಟ್ ತೀರ್ಪು ನೀಡಿದೆ. 2014ರ ಡಿಸೆಂಬರ್‌ನಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಶಂಕಿತ ಉಗ್ರ ಮೆಹದಿ ಬಿಸ್ವಾಸ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

ಶಂಕಿತ ಉಗ್ರ ಮೆಹದಿ ಮಸರೂರ್‌ ಬಿಸ್ವಾಸ್, ಸಾಮಾಜಿಕ ಜಾಲತಾಣವಾದ Xನಲ್ಲಿ ISIS ಉಗ್ರ ಸಂಘಟನೆ ಪರ ಟ್ವೀಟ್ ಮಾಡಿದ್ದ. ಜಮಾತ್ ನಸ್ರತ್ ಅಲ್ ಇಸ್ಲಾಂ ವಲ್ ಮುಸ್ಲಿಮಿನ್ ಉಗ್ರಗಾಮಿ ಸಂಘಟನೆಗೆ ಬೆಂಬಲವಾಗಿ ಟ್ವೀಟ್ ಮಾಡಿದ್ದ. ಇದಿಷ್ಟೇ ಅಲ್ಲದೇ ಸಿರಿಯಾದ ಉಗ್ರಗಾಮಿಗಳ ಜೊತೆಗೆ ಬಿಸ್ವಾಸ್ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿತ್ತು. ಈ ಸ್ಫೋಟಕ ಸುಳಿವಿನ ಹಿನ್ನೆಲೆಯಲ್ಲಿ UAPA ಕಾಯಿದೆ ಅಡಿ ಕೇಸ್ ದಾಖಲಿಸಿದ್ದ ಸಿಸಿಬಿ ಶಂಕಿತ ಉಗ್ರನನ್ನು ಬಂಧಿಸಿತ್ತು.

ಇದನ್ನೂ ಓದಿ: ಹೋಟೆಲ್​ ಮುಂದೆ ನಿಂತಿದ್ದ ಯುವತಿಗೆ ಬ್ಯಾಡ್​ ಟಚ್​.. ವಿಕೃತಿ ಮೆರೆದ ಕಾಮುಕನ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶಂಕಿತ ಉಗ್ರ ಮೆಹದಿ ಮಸರೂರ್ ಬಿಸ್ವಾಸ್ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ಕೋರ್ಟ್ ಅಪರಾಧಿ ಎಂದು ತೀರ್ಪು ನೀಡಿದೆ. ಇದೇ ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಪ್ರಕಟಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ ಪ್ರಕರಣ; NIA ವಿಶೇಷ ಕೋರ್ಟ್‌ನಿಂದ ಮಹತ್ವದ ತೀರ್ಪು

https://newsfirstlive.com/wp-content/uploads/2024/01/Bangalore-ISIS-Suspect-case.jpg

Load More