newsfirstkannada.com

ಬೆಂಗಳೂರಲ್ಲಿ ಭಯಾನಕ ಅಪಘಾತ.. ಅಕ್ಕ-ತಮ್ಮನ ತಲೆ ಮೇಲೆ ಹರಿದ ವಾಟರ್ ಟ್ಯಾಂಕರ್‌ ಚಕ್ರ; ಇಬ್ಬರು ಸಾವು

Share :

Published June 7, 2024 at 3:16pm

  ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ-ತಮ್ಮ ಬಲಿಯಾದ ಘಟನೆ

  ವಾಟರ್ ಟ್ಯಾಂಕರ್ ಚಾಲಕನ ಅತಿಯಾದ ವೇಗಕ್ಕೆ ಇಬ್ಬರ ಸಾವು

  ಕಾಲೇಜಿಗೆ ಹೋಗುವ ಮೊದಲ ದಿನವೇ ವಿದ್ಯಾರ್ಥಿನಿ ಸಾವು

ಬೆಂಗಳೂರು: ಅತಿಯಾದ ವೇಗದಲ್ಲಿ ಬರುತ್ತಿದ್ದ ವಾಟರ್ ಟ್ಯಾಂಕರ್ ಗುದ್ದಿದ್ದಕ್ಕೆ ಬೈಕ್‌ನಲ್ಲಿದ್ದ ಅಕ್ಕ-ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡನಾಗಮಂಗಲದಲ್ಲಿ ನಡೆದಿದೆ. ಕಿಲ್ಲರ್ ವಾಟರ್ ಟ್ಯಾಂಕರ್‌ಗೆ ಅಕ್ಕ-ತಮ್ಮ ಬಲಿಯಾಗಿದ್ದಾರೆ.

ಮಧುಮಿತ(20), ರಂಜನ್(18) ಮೃತ ಅಕ್ಕ-ತಮ್ಮರಾಗಿದ್ದಾರೆ. ಇವರಿಬ್ಬರು ದೊಡ್ಡ ನಾಗಮಂಗಲದ ಕೆಂಪೇಗೌಡ ಬಡಾವಣೆ ನಿವಾಸಿಗಳು. ಅಕ್ಕ-ತಮ್ಮ ಇಬ್ಬರು ಇಂದು ಬೆಳಗ್ಗೆ ಬೈಕ್‌ನಲ್ಲಿ ಕಾಲೇಜಿಗೆ ಹೊರಟಿದ್ದರು.

ಇದನ್ನೂ ಓದಿ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ದುರಂತ.. 7 ವರ್ಷದ ಬಾಲಕಿ ದಾರುಣ ಸಾವು; ಆಗಿದ್ದೇನು? 

ಮೃತಪಟ್ಟ ಮಧುಮಿತ ಬೆಂಗಳೂರಿನ SSMRV ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿನ ಮೊದಲ ದಿನ ಅಕ್ಕನನ್ನು ಕಾಲೇಜಿಗೆ ಬಿಟ್ಟು ಬರಲು ತಮ್ಮ ಬೈಕ್‌ನಲ್ಲಿ ಹೋಗಿದ್ದ. ಕಾಲೇಜಿಗೆ ಹೋಗುವ ಮೊದಲ ದಿನವೇ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

ದೊಡ್ಡನಾಗಮಂಗಲದ ಬಳಿ ಕಿಲ್ಲರ್‌ ವಾಟರ್ ಟ್ಯಾಂಕರ್‌ ವೇಗವಾಗಿ ಬಂದಿದೆ. ವಾಟರ್ ಟ್ಯಾಂಕರ್ ಬೈಕ್‌ನ ಮಿರರ್‌ಗೆ ಹೊಡಿದಿದ್ದು, ಬೈಕ್‌ನಲ್ಲಿದ್ದವರು ಕೆಳಗೆ ಬಿದ್ದಿದ್ದಾರೆ. ಬೈಕ್ ಕೆಳಗೆ ಬೀಳುತ್ತಿದ್ದಂತೆ ಇಬ್ಬರ ತಲೆ ಮೇಲೆ ಹಿಂಬದಿಯ ಚಕ್ರ ಹರಿದಿದೆ.

ಇದನ್ನೂ ಓದಿ: ಜಸ್ಟ್​ ಮಿಸ್​​! ಕಂಡೆಕ್ಟರ್​ ಸಹಾಯದಿಂದ ಬದುಕಿ ಬಂದ ಬಡ ಜೀವ.. ಸಾವು ಕಣ್ಣೆದುರೇ ಪಾಸಾಯ್ತು ಅಂದ್ರೆ ಇದೇನಾ? 

ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದ ಭಯಾನಕ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಟರ್ ಟ್ಯಾಂಕರ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಭಯಾನಕ ಅಪಘಾತ.. ಅಕ್ಕ-ತಮ್ಮನ ತಲೆ ಮೇಲೆ ಹರಿದ ವಾಟರ್ ಟ್ಯಾಂಕರ್‌ ಚಕ್ರ; ಇಬ್ಬರು ಸಾವು

https://newsfirstlive.com/wp-content/uploads/2024/06/Bangalore-Water-Tanker-Accident.jpg

Load More