ಇದು ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಸ್ಟೋರಿ
ಆ ಘಟನೆಯಿಂದ ಸೆಹ್ವಾಗ್ ಮನೆಗೆ ಮರಳುವುದಾಗಿ ಪಟ್ಟು ಹಿಡಿದಿದ್ರು
ಪ್ರತ್ಯೇಕತೆಯ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಕ್ಕೆ ಸೆಹ್ವಾಗ್ಗೆ ಹೀಗಾಯ್ತ?
ವೀರೇಂದ್ರ ಸೆಹ್ವಾಗ್. ಟೀಮ್ ಇಂಡಿಯಾದ ಡೇರಿಂಗ್ ಆ್ಯಂಡ್ ಡ್ಯಾಶಿಂಗ್ ಬ್ಯಾಟ್ಸ್ಮನ್. ಚೆಂಡು ಇರೋದೆ ದಂಡಿಸೋಕೆ ಅನ್ನೋದು ಸೆಹ್ವಾಗ್ರ ಮಂತ್ರ. ಆದರೆ, ಇದೇ ಡೇರಿಂಗ್ ಬ್ಯಾಟಿಂಗ್ ಟೀಮ್ ಇಂಡಿಯಾದ ಮಾಜಿ ಕೋಚ್ ಜಾನ್ ರೈಟ್ ಕೋಪಕ್ಕೆ ಗುರಿಯಾಗಿತ್ತು. ಕೋಪದಲ್ಲಿ ವಿರೇಂದ್ರ ಸೆಹ್ವಾಗ್ ಕುತ್ತಿಗೆ ಹಿಡಿದು ವಾರ್ನಿಂಗ್ ಸಹ ನೀಡಿದ್ದರು.
ಹೌದು! 2002ರಲ್ಲಿ ಟೀಮ್ ಇಂಡಿಯಾ, ನ್ಯಾಟ್ವೆಸ್ಟ್ ತ್ರಿಕೋನ ಸರಣಿಗಾಗಿ ಇಂಗ್ಲೆಂಡ್ಗೆ ತೆರಳಿತ್ತು. ಈ ಸರಣಿಗೂ ಮುನ್ನ ಕೋಚ್ ಜಾನ್ ರೈಟ್, ನೆಟ್ಸ್ನಲ್ಲಿ ಗಾಳಿಯಲ್ಲಿ ಚೆಂಡು ಹೊಡೆಯದಂತೆ ತಾಕೀತು ಮಾಡಿದ್ದರು. ಆದರೆ, ಇದಕ್ಕೆ ಕಿವಿಗೊಡದ ಸೆಹ್ವಾಗ್, ಡರ್ಬನ್ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಬ್ಯಾಟ್ ಬೀಸಿದ್ದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್, 60 ರನ್ ಗಳಿಸಿದ್ದಾಗ ಕೆಟ್ಟ ಹೊಡತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದ್ದರು. ಇದರಿಂದ ಸಹನೆ ಕಳೆದುಕೊಂಡಿದ್ದ ಜಾನ್ ರೈಟ್, ಸೆಹ್ವಾಗ್ ಡ್ರೆಸ್ಸಿಂಗ್ ರೂಮ್ ಪ್ರವೇಶಿಸುತ್ತಿದ್ದಂತೆ ಕಾಲರ್ ಹಿಡಿದ ತರಾಟೆಗೆ ತೆಗೆದುಕೊಂಡಿದ್ದರು.
ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ವಾದವೇ ನಡೆದಿತ್ತು. ನಂತರ ಮಧ್ಯೆ ಪ್ರವೇಶಿಸಿದ ಗಂಗೂಲಿ, ಕೋಚ್ ನಡೆಯನ್ನೇ ಖಂಡಿಸಿದ್ದರು. ಈ ಬಳಿಕ ಸೆಹ್ವಾಗ್ ಬಳಿ ಕ್ಷಮೆಯಾಚಿಸಿದ್ರು. ಆದರೆ, ಸೆಹ್ವಾಗ್ ಮನೆಗೆ ಮರಳುವುದಾಗಿ ಪಟ್ಟು ಹಿಡಿದಿದ್ರು. ಅಂತಹ ಶಾಟ್ ಬಾರಿಸಿದರೆ ಮನೆಗೆ ಕಳುಹಿಸುವ ಬೆದರಿಕೆ ಹಾಕಿದ್ದಾರೆ ಎಂದು ಗಂಗೂಲಿ ಬಳಿ ಹೇಳಿದ್ದರು. ನಂತರ ಸೆಹ್ವಾಗ್ರನ್ನ ಗಂಗೂಲಿ ಕೂಲ್ ಮಾಡಿದರು. ಇಷ್ಟೆಲ್ಲಾ ನಡೆದ್ರೂ ಸೆಹ್ವಾಗ್ ತನ್ನ ಬ್ಯಾಟಿಂಗ್ ಶೈಲಿಯನ್ನ ಮಾತ್ರ ಬದಲಿಸಿರಲಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ