Advertisment

EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್‌ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು

author-image
admin
Updated On
EXCLUSIVE: ಮಾಜಿ ಕಾರ್ಪೊರೇಟರ್ ಮಗನ ಲವ್‌ ದೋಖಾ.. ಯುವತಿ ಸಾವು; ನ್ಯಾಯಕ್ಕಾಗಿ ತಾಯಿ ಕಣ್ಣೀರು
Advertisment
  • ಮಾಗಡಿ ರೋಡ್‌ ಠಾಣೆಯಲ್ಲಿ FIR ದಾಖಲಾದ್ರೂ ಆರೋಪಿ ಬಂಧಿಸಿಲ್ಲ
  • ಆರೋಪಿಯ ತಂದೆ ಪ್ರಭಾವಿ ಆಗಿರುವುದರಿಂದ ತನಿಖೆಗೆ ಮೀನಾಮೇಷ?
  • ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಹೆತ್ತತಾಯಿಯ ಪ್ರಾರ್ಥನೆ

ಬೆಂಗಳೂರಿನ ಮಾಜಿ ಕಾರ್ಪೊರೇಟರ್ ಮಗ ಮದುವೆಯಾವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಾಜಿ ಕಾರ್ಪೊರೇಟರ್‌ ಮಗನನ್ನು ಪ್ರೀತಿಸುತ್ತಿದ್ದ ಯುವತಿ ಸಾವಿಗೆ ಶರಣಾಗಿದ್ದಾಳೆ. ಮಗಳ ದುರಂತಕ್ಕೆ ಕಂಗಾಲಾಗಿರೋ ಯುವತಿ ತಾಯಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

Advertisment

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಹಿಂದಿದೆ ಪೊಲೀಸ್ ಲಾಠಿಯ ರೋಚಕ ಕಥೆ.. ದರ್ಶನ್​​ ಕೈಗೆ ಲಾಠಿ ಸಿಕ್ಕಿದ್ದು ಹೇಗೆ?

ಸಾವಿಗೆ ಶರಣಾಗಿರೋ ಯುವತಿ ಹೆಸರು ವಾಸುಕಿ. ವಾಸುಕಿ ತಾಯಿ RT ನಗರ ಮಾಜಿ ಕಾರ್ಪೊರೇಟರ್ ಗೋವಿಂದರಾಜು ಮಗ ಶ್ರವಣ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ FIR ಕೂಡ ದಾಖಲಿಸಿದ್ದಾರೆ. ಆದರೆ ಪೊಲೀಸರು ಮಗಳ ಸಾವಿಗೆ ಕಾರಣರಾದ ಆರೋಪಿಯನ್ನ ಬಂಧಿಸಿಲ್ಲ ಅಂತ ಕಣ್ಣೀರು ಹಾಕುತ್ತಿದ್ದಾರೆ.

publive-image

ಏನಿದು ಲವ್ ದೋಖಾ?
25 ವರ್ಷದ ಯುವತಿ ವಾಸುಕಿ ಜೊತೆ ಶ್ರವಣ್ 6 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ಕೊನೆಗೆ ಮದುವೆಯಾಗೋದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶ್ರವಣ್‌ ಮದುವೆಯಾಗದೇ ಸತಾಯಿಸುತ್ತಿದ್ದಕ್ಕೆ ನೊಂದು ವಾಸುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

Advertisment

ಇದನ್ನೂ ಓದಿ: ಬಾಲಿವುಡ್‌ಗೆ ಬಿಗ್ ಶಾಕ್‌.. ನಟಿ ಮಲೈಕಾ ಅರೋರ ತಂದೆ ದುರಂತ ಅಂತ್ಯ; ಕಾರಣವೇನು? 

publive-image

ಶ್ರವಣ್ ವರ್ತನೆಯಿಂದ ನೊಂದಿದ್ದ ವಾಸುಕಿ ಬೇರೆ ಯುವಕನ ಜೊತೆಯಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ನಿಶ್ಚಿತಾರ್ಥವೂ ಆಗಿತ್ತು, ಆದ್ರೆ, ಶ್ರವಣ್ ಬಂದು ಧಮ್ಕಿ ಹಾಕಿದ್ದನಂತೆ. ಹೇಗೆ ಮದುವೆ ಆಗ್ತೀಯೋ ನೋಡೋಣ ಅಂತ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ.

publive-image

ಯುವತಿ ಸಾವಿಗೆ ಕಾರಣವೇನು?
ಕಳೆದ ಆಗಸ್ಟ್‌ 22ರ ಸಂಜೆ 7.45ಕ್ಕೆ ವಾಸುಕಿ ಅವರು ಸಾವಿಗೆ ಶರಣಾಗಿದ್ದಾರೆ. ಈ ಘಟನೆಯ ಬಳಿಕ ಆಕೆಯ ಮೊಬೈಲ್ ಅ​ನ್ನ ಚೆಕ್​ ಮಾಡಲಾಗಿದೆ. ಆಗ ಆರೋಪಿ ಶ್ರವಣ್​​, ಅಶ್ಲೀಲ ವಿಡಿಯೋ ಕಳುಹಿಸುತ್ತಿದ್ದ ಸತ್ಯ ಗೊತ್ತಾಗಿದೆ. ಇದರಿಂದಲೇ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಗಡಿ ರೋಡ್‌ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಿಸಿದ್ದಾರೆ.

Advertisment

publive-image

ಆರೋಪಿಯ ತಂದೆ ಪ್ರಭಾವಿ ಆಗಿರುವುದರಿಂದ ಪೊಲೀಸರು ನೋಟಿಸ್​ ನೀಡಿ ತನಿಖೆಗೂ ಕರೆದಿಲ್ಲ. ತನಿಖೆಯೂ ಮಾಡ್ತಿಲ್ಲ ಎಂದು ವಾಸುಕಿ ಕುಟುಂಬಸ್ಥರು ಆರೋಪಿಸಿದ್ದಾರೆ. ಇದ್ದ ಒಬ್ಬಳೇ ಒಬ್ಬ ಮಗಳನ್ನ ಕಳೆದುಕೊಂಡು ತಾಯಿ ವೆಂಕಟಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment