newsfirstkannada.com

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ಹೆಚ್‌.ಡಿ ರೇವಣ್ಣಗೆ ಕೋರ್ಟ್‌ನಲ್ಲಿ ಅಗ್ನಿ ಪರೀಕ್ಷೆ; ಇಂದೇ ಬಂಧನ?

Share :

Published May 3, 2024 at 10:56am

Update May 3, 2024 at 10:58am

    ಹಾಸನ ವಿಡಿಯೋ ಕೇಸ್‌ನಲ್ಲಿ ಹೆಚ್‌.ಡಿ ರೇವಣ್ಣಗೆ ಬೇಲ್ ಸಿಗುತ್ತಾ?

    ಪ್ರಜ್ವಲ್ ರೇವಣ್ಣ ತಲೆ ಮರೆಸಿಕೊಂಡಿರುವ ಬಗ್ಗೆ ಉಲ್ಲೇಖಿಸುವ ಸಾಧ್ಯತೆ

    ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧ ಸಾಲು, ಸಾಲು ಪ್ರಕರಣ

ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರಿಗೆ ಇಂದು ಅಗ್ನಿ ಪರೀಕ್ಷೆ ಎದುರಾಗಿದೆ. ಬಂಧನದ ಭೀತಿಯಲ್ಲಿರುವ ಮಾಜಿ ಸಚಿವ ರೇವಣ್ಣ ಅವರು ಇಂದು ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಹೆಚ್‌.ಡಿ ರೇವಣ್ಣ ಬೇಲ್ ಭವಿಷ್ಯ ನಿರ್ಧಾರವಾಗಲಿದೆ.

ನಿನ್ನೆ ಹೆಚ್‌.ಡಿ ರೇವಣ್ಣ ಪರ ಸಿನಿಯರ್ ಕೌನ್ಸಿಲ್ ಮೂರ್ತಿ ಡಿ.‌ ನಾಯ್ಕ್ ಅವರು ಬೆಂಗಳೂರು ಜನಪ್ರತಿನಿಧಿ‌ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಹಾಸನ ಪ್ರಕರಣದಲ್ಲಿ 376 ಸೇರಿಸಲು SIT ಮನವಿ ಬಗ್ಗೆ ಉಲ್ಲೇಖಿಸಿದ್ದರು. ಅದಕ್ಕೆ ಸಂಬಂಧಿಸಿದ ದಾಖಲೆ ಒದಗಿಸಲು ಕೋರ್ಟ್ ಹೇಳಿತ್ತು. ಇದರ ಜೊತೆ SIT ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತ್ತು. ಅದರಂತೆ ಇಂದು ಕೋರ್ಟ್‌ನಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಕುತೂಹಲ ಕೆರಳಿಸಿದೆ.

ಬೆಂಗಳೂರು ಜನಪ್ರತಿನಿಧಿ‌ ನ್ಯಾಯಾಲಯದಲ್ಲಿ ಇಂದು ಮೊದಲಿಗೆ ರೇವಣ್ಣ ಪರ ವಕೀಲರು ವಾದಿಸಲಿದ್ದಾರೆ. ಹೊಳೆನರಸೀಪುರ ಕೇಸ್‌ನಲ್ಲಿ ಸೆಕ್ಷನ್ 376 ಸೇರ್ಪಡೆ ಬಗ್ಗೆ ವಾದ ಮಂಡಿಸಲಿದ್ದಾರೆ. ರೇವಣ್ಣ ವಿರುದ್ಧ ಆರೋಪಕ್ಕೂ 376ಗೂ ಸಂಬಂಧ ಇಲ್ಲ ಎನ್ನಬಹುದು. ಅಲ್ಲದೇ ದುರುದ್ದೇಶಪೂರ್ವಕ FIR ಹಾಕಲಾಗಿದೆ ಎಂದು ವಾದಿಸಬಹುದು.

ರೇವಣ್ಣ ಅವರ ವಕೀಲರ ವಾದಕ್ಕೆ SIT ಪರ SP ಜಗದೀಶ್ ಅವರು ಪ್ರತಿವಾದ ಮಂಡಿಸಲಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಬಗ್ಗೆ ಉಲ್ಲೇಖಿಸಲಿದ್ದು, ದಾಖಲಾಗಿರುವ 164 ಹೇಳಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುತ್ತಾರೆ. ಇದರ ಜೊತೆಗೆ ವೈರಲ್ ಆಗಿರುವ ವಿಡಿಯೋ, A2 ಪ್ರಜ್ವಲ್ ರೇವಣ್ಣ ತಲೆ ಮರೆಸಿಕೊಂಡಿರುವ ಬಗ್ಗೆಯೂ ಉಲ್ಲೇಖಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: BREAKING: H.D ರೇವಣ್ಣ ಮೇಲೆ ಬಿತ್ತು ನಾನ್‌ ಬೇಲೆಬಲ್ ಸೆಕ್ಷನ್; ನಾಳೆಯೇ ಬಂಧನ ಭೀತಿ 

ಪ್ರಮುಖವಾಗಿ ವಿಚಾರಣೆ ನೀಡಿದ್ದ ನೊಟೀಸ್‌ಗೆ ಹೆಚ್‌.ಡಿ ರೇವಣ್ಣ ಅವರು ನಿನ್ನೆ ಉತ್ತರ ನೀಡಬೇಕಿತ್ತು. ಆದರೆ ಅವರು ಉತ್ತರ ನೀಡದ ಬಗ್ಗೆಯೂ ಉಲ್ಲೇಖ ಮಾಡುವ ಸಾಧ್ಯತೆ ಇದೆ. ಆರೋಪಿಯ ಪ್ರಭಾವ, ಸಂತ್ರಸ್ತರಿಗೆ ಬೆದರಿಕೆ ಹಾಕುವ ಬಗ್ಗೆ, ಇಲ್ಲಿ ತನಕ‌ ತನಿಖೆಯಲ್ಲಿ ಕಂಡು ಬಂದ ಅಂಶಗಳ ಬಗ್ಗೆಯೂ SIT ಪರ SP ಜಗದೀಶ್ ಅವರು ಉಲ್ಲೇಖಿಸುವ ಸಾಧ್ಯತೆ ಇದೆ.

ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ವಿರುದ್ಧ ಸಾಲು, ಸಾಲು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅತ್ಯಾಚಾರದಂತ ಗಂಭೀರ ಆರೋಪ ಕೇಳಿ ಬಂದಿದೆ. ಇಂದು ಜನಪ್ರತಿನಿಧಿ ಕೋರ್ಟ್‌ನಲ್ಲಿ ಜಾಮೀನು ಸಿಗದೇ ಇದ್ದರೆ ಹೆಚ್‌.ಡಿ ರೇವಣ್ಣ ಅವರು ವಿಚಾರಣೆಗೆ ಹಾಜರಾಗಬೇಕಿದೆ. ಈ ವೇಳೆ ಹೆಚ್.ಡಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನ ಅಶ್ಲೀಲ ವಿಡಿಯೋ ಪ್ರಕರಣ.. ಹೆಚ್‌.ಡಿ ರೇವಣ್ಣಗೆ ಕೋರ್ಟ್‌ನಲ್ಲಿ ಅಗ್ನಿ ಪರೀಕ್ಷೆ; ಇಂದೇ ಬಂಧನ?

https://newsfirstlive.com/wp-content/uploads/2023/09/HD-Revanna.jpg

Load More