/newsfirstlive-kannada/media/post_attachments/wp-content/uploads/2024/10/RATAN-TATA-TITO-DOG.jpg)
ರತನ್ ಟಾಟಾ, ಅವರು ತಮ್ಮ ಶ್ರೀಮಂತಿಕೆಗೆಗಿಂತ ಐಷಾರಾಮಿ ಬದುಕಿಗಿಂತ, ಒಬ್ಬ ಉದ್ಯಮಿಗಿಂತ ಹೆಚ್ಚು ಜನಪ್ರಿಯವಾದದ್ದು ಅವರ ಉದಾತ್ತ ಚಿಂತನೆಗಳಿಂದ. ಬಡವರಿಗಾಗಿ ಅವರು ಕೈಗೆತ್ತಿಕೊಳ್ಳುತ್ತಿದ್ದ ಯೋಜನೆಗಳಿಂದ, ಜನಪರ ಕಾಳಜಿಯಿಂದ. ಮಾನವೀಯ ಮೌಲ್ಯಗಳನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡೇ ಈ ಲೋಕವನ್ನು ತ್ಯಜಿಸಿದ ಹಿರಿಯ ಚೇತನ ಈಗ ತಾವು ಬರೆದಿಟ್ಟ ಉಯಿಲುನಲ್ಲಿಯೂ ಕೂಡ ಮಾನವೀಯತೆ ಹಾಗೂ ಉದಾತ್ತ ಚಿಂತನೆಯನ್ನು ಮೆರೆದಿದ್ದಾರೆ.
ಟಾಟಾ ಉಯಿಲು ಬರೆದಿಟ್ಟಿದ್ದಾರೆ ಅಂದ್ರೆ ಅದರಲ್ಲಿ ಟಿಟೋ ಹೆಸರಿಲ್ಲದೇ ಇರುತ್ತದೆಯಾ? ಮೊದಲೇ ಪರೋಪಕಾರಿ ಜೀವ, ಪರೋಪಕಾರದಿಂದಲೇ ಗುರುತಿಸಿಕೊಂಡವರು ರತನ್ ಟಾಟಾ. ಅವರ 10 ಸಾವಿರ ಕೋಟಿ ಮೌಲ್ಯದ ಎಸ್ಟೇಟ್ವೊಂದನ್ನು ಈಗ ಎಲ್ಲರ ಪಾಲಿಗೆ ಬಿಟ್ಟು ಹೋಗಿದ್ದಾರೆ. ಅವರು ಬರೆದಿಟ್ಟಿರುವ ಉಯಿಲು ಪತ್ರದ ಪ್ರಕಾರ ಈ ಒಂದು ಆಸ್ತಿ ಕೇವಲ ಅವರ ಸಹೋದರ ಸಹೋದರಿಯರಿಗೆ ಮಾತ್ರವಲ್ಲ ಮನೆಯ ಅಡುಗೆ ಕೆಲಸದವನಿಗೆ, ಅವರ ಜೊತೆಗಾರರಾಗಿದ್ದ ಶಾಂತನು ನಾಯ್ಡು ಹಾಗೂ ಅವರ ನೆಚ್ಚಿನ ಶ್ವಾನ ಜರ್ಮನ್ ಶಫರ್ಡ್ ಟಿಟ್ಟೋಗೂ ಕೂಡ ಪಾಲಿಟ್ಟು ಹೋಗಿದ್ದಾರೆ ರತನ್ ಟಾಟಾ.
ಇದನ್ನೂ ಓದಿ:104 ಕೆಜಿ ಬಂಗಾರದ ಬೇಟೆ.. ಕೇರಳದಲ್ಲಿ ‘Torre del Oro’ ಮೆಗಾ ಆಪರೇಷನ್? ಏನಿದರ ಅರ್ಥ?
ತಮ್ಮ ಈ ಆಸ್ತಿಯಲ್ಲಿ ತಮ್ಮ ಶ್ವಾನ ಟಿಟೋ ಬಗ್ಗೆಯೂ ಪಾಲಿಟ್ಟಿರುವ ರತನ್ ಟಾಟಾ ಅವರು ತಮ್ಮ ಮನೆಯಲ್ಲಿ ಬಹಳ ಕಾಲದಿಂದ ಕೆಲಸ ಮಾಡುತ್ತಿದ್ದ ಸುಬ್ಬಯ್ಯ, ತಮ್ಮ ಆಪ್ತ ಸಹಾಯಕ ಶಾಂತನು ನಾಯ್ಡು, ಇನ್ನು ಟಿಟೋವನ್ನು ಕಾಳಜಿ ಪೂರ್ವಕವಾಗಿ ನೋಡುತ್ತಿದ್ದ ಬಹುಕಾಲದಿಂದಲೂ ಅಡುಗೆ ಮಾಡುತ್ತಿದ್ದ ರಾಜನ್ ಶಾಹ್ ಅವರಿಗೂ ಕೂಡ ಈ ಒಂದು 10 ಸಾವಿರ ಕೋಟಿ ಆಸ್ತಿಯಲ್ಲಿ ಪಾಲಿಟ್ಟಿರುವ ಬಗ್ಗೆ ಮಾಹಿತಿ ಇದೆ.
ಇದನ್ನೂ ಓದಿ:ಬಾಲಿವುಡ್ ಗಾಯಕನಿಗೆ ಡೂಡಲ್ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಗೂಗಲ್: ಯಾರು ಈ ಕೆಕೆ?
ಟಾಟಾ ಅವರು ಅಲಿಭಾಗ್ನಲ್ಲಿ 2 ಸಾವಿರ ಸ್ಕೇರ್ಫೀಟ್ ವಿಸ್ತಾರದ ಐಶಾರಾಮಿ ಬಂಗಲೆಯನ್ನು ಹೊಂದಿದ್ದಾರೆ. ಮುಂಬೈನ ಜುಹಾತಾರಾ ರಸ್ತೆಯಲ್ಲಿಯೂ ಕೂಡ ಎರಡು ಅಂತಸ್ತಿನ ಒಂದು ಮನೆಯನ್ನು ಹೊಂದಿದ್ದಾರೆ. ಅವರ ಹೆಸರಿನಲ್ಲಿ ಸುಮಾರು 350 ಕೋಟಿ ರೂಪಾಯಿ ಫಿಕ್ಸ್ ಡಿಪಾಸಿಟ್ ಇದೆ.
ಅವರ ಮನೆಯಲ್ಲಿ ದಶಕಗಳಿಂದ ಕೆಲಸ ಮಾಡುತ್ತಿರುವ ಕೆಲಸಗಾರ ಸುಬ್ಬಯ್ಯ ಹೇಳುವ ಪ್ರಕಾರ ಅವರು ರತನ್ ಟಾಟಾ ಅವರ ಹೃದಯಕ್ಕೆ ತುಂಬಾ ಹತ್ತಿರದವರಾಗಿದ್ದರಂತೆ. ಅವರು ವಿದೇಶಗಳಿಗೆ ಪ್ರವಾಸಕ್ಕೆ ಹೊರಟಾಗಲೆಲ್ಲಾ ನನಗೆ ಹಾಗೂ ಅವರಿಗೆ ಅಡುಗೆ ಮಾಡುತ್ತಿದ್ದ ರಂಜನ್ಗೆ ಡಿಸೈನರ್ಗಳನ್ನ ಕರೆಸಿ ನಮಗೆ ಸೂಟ್ ಆಗುವಂತಹ ಬಟ್ಟೆಯನ್ನು ತರಿಸಿ ನಮ್ಮನ್ನು ಕೂಡ ಅವರೊಂದಿಗೆ ಕರೆದುಕೊಂಡು ಹೋಗುತ್ತಿದ್ದರು ಎಂದು ಸುಬ್ಬಯ್ಯ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ