700 ಅಧಿಕಾರಿಗಳ ಆಪರೇಷನ್ ಸ್ಪಾಟಲ್ಲಿ ಸಿಕ್ತು 104 ಕೆಜಿ ಚಿನ್ನ!
₹75 ಕೋಟಿ ಚಿನ್ನವನ್ನು ಇಟ್ಟುಕೊಂಡು ಮೋಸ ಮಾಡಿದ್ಯಾರು?
ಏನೀ ಆಪರೇಷನ್ ಟೊರ್ರೆ ಡೆಲ್ ಓರೊ? ಬಂಗಾರದ ಬೇಟೆ!
ಬಂಗಾರ ವ್ಯಾಪಾರ ಎಂದ ಕೂಡಲೇ ನೆನಪಾಗೋ ಒಂದು ಊರು ತ್ರಿಶೂರ್. ಕೇರಳದ ತ್ರಿಶೂರ್‌ನ ಬಂಗಾರದ ಬೇಟೆ ಇದೀಗ ಸಖತ್ ಸದ್ದು ಮಾಡುತ್ತಿದೆ. 700 ಜಿಎಸ್ಟಿ ಅಧಿಕಾರಿಗಳ ಆಪರೇಷನ್ ಮುಗಿದಿದ್ದು, ಭರ್ತಿ 104 ಕೆಜಿ ಚಿನ್ನ ಸಿಕ್ಕಿದೆ. ಆ ಬಂಗಾರ ನೋಡಿ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ ಇದು ಕಣ್ರಿ ಲಾಟರಿ ಅಂದ್ರೆ.. 8 ನಿಮಿಷಗಳಲ್ಲೇ ₹8.5 ಕೋಟಿ ಗೆದ್ದ ಬಡ ಕಾರ್ಮಿಕ!
700 ಅಧಿಕಾರಿಗಳು, 78 ಕಡೆ ದಾಳಿ, ಬಂಗಾರದ ಬೇಟೆ
ಬಂಗಾರದ ಆಭರಣಗಳ ತಯಾರಿಕೆಯ ಯುನಿಟ್ಗಳ ಮೇಲೆ ಬುಧವಾರ ದಾಳಿ ನಡೆದಿದೆ. ಕೇರಳ ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್(GST)ನ 700 ಅಧಿಕಾರಿಗಳು 78 ಕಡೆ ಏಕಕಾಲಕ್ಕೆ ಬಂಗಾರದ ಬೇಟೆ ಆರಂಭಿಸಿದ್ದರು. ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳನ್ನು ದಂಗುಬಡಿಸಿದ್ದು ಭರ್ತಿ 104 ಕೆಜಿ ಚಿನ್ನ. ಈ ಬಂಗಾರ ಸುಮಾರು 75 ಕೋಟಿ ಬೆಲೆ ಬಾಳುತ್ತದೆ. ಕೇರಳದಲ್ಲಿ ಇದೀಗ ಇದೇ ಬಂಗಾರದ ಬೇಟೆ ಬಹುದೊಡ್ಡ ಚರ್ಚೆ ನಡೀತಿದೆ.
ಸರ್ಕಾರಕ್ಕೆ ಮೋಸ ಮಾಡಿ ಕೋಟ್ಯಂತರ ಲಾಭದ ಲೆಕ್ಕ!
ಬಿಲ್ಲಿಂಗ್, ಟ್ಯಾಕ್ಸೇಷನ್ ಪ್ರಕ್ರಿಯೆಯಲ್ಲಿ ಅಕ್ರಮ ಮಾಡುತ್ತಿದ್ದ ಬಗ್ಗೆ GST ಅಧಿಕಾರಿಗಳಿಗೆ ಸುಳಿವು ಸಿಕ್ಕಿತ್ತು. ಹಾಗಾಗಿಯೇ ಬಂಗಾರದ ಆಭರಣದ ತಯಾರಕರು ಹಾಗೂ ಅವರ ಯುನಿಟ್ಗಳ ಮೇಲೆ ದಾಳಿ ನಡೆಸಿದ್ದರು. ಇದೇ ಸಂದರ್ಭವೇ ಅವರ ಮನೆಗಳ ಮೇಲೂ ದಾಳಿ ನಡೆಸಿದಾಗ 104 ಕೆಜಿ ಚಿನ್ನ ಸಿಕ್ಕಿದೆ. ಇದೇ ವೇಳೆಯೇ ಲೆಕ್ಕವೇ ಸಿಗದ 120 ಕೆಜಿ ಚಿನ್ನವನ್ನು ಜಿಎಸ್ಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿ ವರ್ಗಗಳು ಹೇಳಿಕೊಂಡಿವೆ. ಜಿಎಸ್ಟಿ ಅಧಿಕಾರಿಗಳು ಇಂಥದ್ದೊಂದು ಆಪರೇಷನ್ಗೆ ಟೊರ್ರೆ ಡೆಲೆ ಓರೊ ಎಂದು ಹೆಸರಿಟ್ಟಿದ್ದರು. ಸ್ಪ್ಯಾನಿಷ್ನಲ್ಲಿ ಟೊರ್ರೆ ಡೆಲೆ ಓರೊ ಎಂದರೆ ಚಿನ್ನದ ಸ್ತಂಭ ಎಂದು ಅರ್ಥ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ