newsfirstkannada.com

Toxic Big News: ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ಗೆ ಒಬ್ಬರಲ್ಲ, ಇಬ್ಬರೂ ಸ್ಟಾರ್ ಹೀರೋಯಿನ್‌? ಯಾರವರು?

Share :

Published March 19, 2024 at 5:29pm

    ಟಾಕ್ಸಿಕ್​ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ವಿಶೇಷ ಪಾತ್ರ

    ಕರೀನಾ ಕಪೂರ್​ ಜೊತೆ ಮತ್ತೊಬ್ಬ ಸ್ಟಾರ್ ಹೀರೋಯಿನ್ ಅಭಿನಯ

    ಕೆವಿಎನ್ ಸಂಸ್ಥೆಯ​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನಿಮಾ ಸಖತ್ ಹವಾ ಸೃಷ್ಟಿಸುತ್ತಿದೆ. ಲೇಟೆಸ್ಟ್ ಮಾಹಿತಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಒಬ್ಬರಲ್ಲ, ಇಬ್ಬರು ಸ್ಟಾರ್ ಹೀರೋಯಿನ್‌ಗಳು ಇರ್ತಾರೆ ಅನ್ನೋ ಅಪ್ಡೇಟ್‌ ಸಿಕ್ಕಿದೆ.

ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ಯಶ್ ತಮ್ಮ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಪ್ಲಾನ್ ಆರಂಭಿಸಿದ್ದಾರೆ. ಕೆವಿಎನ್​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾ ಜವಾಬ್ದಾರಿ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರಿಗೆ ನೀಡಲಾಗಿದೆ.

ಇದನ್ನೂ ಓದಿ: VIDEO: ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಯಶ್.. ವ್ಹಾ ಟಾಕ್ಸಿಕ್‌ ಎಂದ ರಾಕಿಭಾಯ್‌ ಫ್ಯಾನ್ಸ್‌!

ಇತ್ತೀಚಿಗೆ ಟಾಕ್ಸಿಕ್ ಸಿನಿಮಾ ತಂಡದಿಂದ ಕೇಳಿ ಬಂದ ಸುದ್ದಿಯ ಪ್ರಕಾರ ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಇದೀಗ ಕರೀನಾ ಕಪೂರ್​ ಮಾತ್ರವಲ್ಲ ಬಹುಭಾಷಾ ನಟಿ ಶ್ರುತಿ ಹಾಸನ್​ ಕೂಡ ಟಾಕ್ಸಿಕ್ ಸಿನಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಯಶ್​ ಟಾಕ್ಸಿಕ್​ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ವಿಶೇಷ ಪಾತ್ರ ಮಾಡಲಿದ್ದಾರಂತೆ. ಕರೀನಾ ಕಪೂರ್​ ಜೊತೆ ಶ್ರುತಿ ಹಾಸನ್​ ಸಹ ಅಭಿನಯಿಸ್ತಾರೆ ಎಂದು ಹೇಳಲಾಗಿದೆ. ಕೊನೆಯದಾಗಿ ಸಲಾರ್ ಚಿತ್ರದಲ್ಲಿ ಮೋಡಿ ಮಾಡಿದ್ದ ಶ್ರುತಿ ಹಾಸನ್ ಅವರು ಸದ್ಯ ಟಾಕ್ಸಿಕ್‌ ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಟಾಕ್ಸಿಕ್‌ ಸಿನಿಮಾ ತಂಡ ಬಿಗ್‌ ಬಜೆಟ್‌ನಲ್ಲಿ ಶೂಟಿಂಗ್ ಆರಂಭಿಸಲು ಸಜ್ಜಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Toxic Big News: ಟಾಕ್ಸಿಕ್ ಸಿನಿಮಾದಲ್ಲಿ ಯಶ್‌ಗೆ ಒಬ್ಬರಲ್ಲ, ಇಬ್ಬರೂ ಸ್ಟಾರ್ ಹೀರೋಯಿನ್‌? ಯಾರವರು?

https://newsfirstlive.com/wp-content/uploads/2024/03/Yash-Toxic-1.jpg

Load More