newsfirstkannada.com

ತಾಯಿಯ ಮಡಿಲು ಸೇರಿದ ಸಾತ್ವಿಕ.. ಸಾವು ಗೆದ್ದು ಬಂದ ಮಗುವಿನ ಅಳು ಕೇಳಿ ಆಸ್ಪತ್ರೆಯಲ್ಲಿ ಆನಂದ

Share :

Published April 4, 2024 at 4:19pm

  ಸಾತ್ವಿಕ್‌ಗೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ

  ಅಮ್ಮನ ಮಡಿಲಲ್ಲಿ ಮಲಗಿ ಚಿಕಿತ್ಸೆಗೆ ಸ್ಪಂದಿಸಿದ 2 ವರ್ಷದ ಬಾಲಕ ಸಾತ್ವಿಕ್‌

  ಸಿದ್ದಲಿಂಗ ಮಹಾರಾಜರ ಪವಾಡ ಇದು ಎಂದು ಪ್ರಾರ್ಥನೆ, ರುದ್ರಾಭಿಷೇಕ

ವಿಜಯಪುರ: 16 ಅಡಿಯ ಕೊಳವೆ ಬಾವಿಗೆ ಬಿದ್ದು ಪವಾಡ ರೀತಿಯಲ್ಲಿ ಬದುಕಿ ಬಂದ ಸಾತ್ವಿಕ ಆರಾಮಾಗಿದ್ದಾನೆ. ಸಾವನ್ನೇ ಗೆದ್ದು ಮೃತ್ಯುಂಜಯನಂತೆ ಪ್ರತ್ಯಕ್ಷವಾಗಿದ್ದು, 2 ವರ್ಷದ ಬಾಲಕ ಸಾತ್ವಿಕ ಕೊನೆಗೂ ತಾಯಿಯ ಮಡಿಲು ಸೇರಿದ್ದಾನೆ. ಚಿಕಿತ್ಸೆ ವೇಳೆ ತಾಯಿ ಮಡಿಲಲ್ಲಿ ಸಾತ್ವಿಕ ಮಲಗಿದ್ದು, ಅಳುತ್ತಿರುವ ಸಾತ್ವಿಕನನ್ನ ನೋಡಿ ಆಸ್ಪತ್ರೆ ಸಿಬ್ಬಂದಿ ಸಂತೋಷಗೊಂಡಿದ್ದಾರೆ.

ಸಾವನ್ನು ಗೆದ್ದು ಬಂದಿರುವ ಸಾತ್ವಿಕ್‌ಗೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸಿದ ಸಾತ್ವಿಕ್‌ ಅಮ್ಮನ ಮಡಿಲಲ್ಲಿ ಮಲಗಿ ಅಳುತ್ತಿದ್ದ. ಸಾತ್ವಿಕ್‌ನನ್ನು ನೋಡಿದ ವೈದ್ಯರ ಸಂತೋಷಕ್ಕೂ ಪಾರವೇ ಇಲ್ಲ.

ಸಾವನ್ನು ಗೆದ್ದು ಬಂದಿರುವ ಸಾತ್ವಿಕ್‌ಗೆ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಮೊದಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದ ಸಾತ್ವಿಕ್‌ ಅಮ್ಮನ ಮಡಿಲಲ್ಲಿ ಮಲಗಿ ಅಳುತ್ತಿದ್ದ. ಸಾತ್ವಿಕ್‌ನನ್ನು ನೋಡಿದ ವೈದ್ಯರ ಸಂತೋಷಕ್ಕೂ ಪಾರವೇ ಇಲ್ಲ.

ಸಾತ್ವಿಕ ಸದ್ಯ ಆರಾಮಾಗಿದ್ದಾನೆ. ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದ್ದಾರೆ.

ಇದನ್ನೂ ಓದಿ: ಕೊಳವೆ ಬಾವಿಯಲ್ಲಿ ಬದುಕಿದ್ದೇ ಪವಾಡ.. ಸಾತ್ವಿಕ್‌ ನೋಡಿ ಅಚ್ಚರಿಗೊಂಡ ವೈದ್ಯರು; ಹೇಳಿದ್ದೇನು?

ಇನ್ನು, ಸಾತ್ವಿಕ ಜೀವಂತವಾಗಿ ಬದುಕಿ ಬರಲಿ ಎಂದು ಬೆಳಗ್ಗೆಯಿಂದ ಇಂಡಿ ತಾಲೂಕಿನ ಲಚಾಣ್ಯ ಗ್ರಾಮಸ್ಥರು ಪ್ರಾರ್ಥನೆ, ರುದ್ರಾಭಿಷೇಕ ನೆರವೇರಿಸಿದ್ದರು. ಜೀವಂತವಾಗಿ ಸಾತ್ವಿಕ ಹೊರ ಬಂದಿರೋ ಹಿನ್ನೆಲೆಯಲ್ಲಿ ಸಿದ್ದಲಿಂಗ ಮಹಾರಾಜರ ಪವಾಡ ಇದು ಎಂದು ಮಠದಲ್ಲಿ ಕಾಯಿ ಒಡೆದು, ದೀರ್ಘ ದಂಡ ನಮಸ್ಕಾರ ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿಯ ಮಡಿಲು ಸೇರಿದ ಸಾತ್ವಿಕ.. ಸಾವು ಗೆದ್ದು ಬಂದ ಮಗುವಿನ ಅಳು ಕೇಳಿ ಆಸ್ಪತ್ರೆಯಲ್ಲಿ ಆನಂದ

https://newsfirstlive.com/wp-content/uploads/2024/04/Vijayapura-Borewell-Satwik-2.jpg

Load More