newsfirstkannada.com

ಕೊಳವೆ ಬಾವಿಯಲ್ಲಿ ಬದುಕಿದ್ದೇ ಪವಾಡ.. ಸಾತ್ವಿಕ್‌ ನೋಡಿ ಅಚ್ಚರಿಗೊಂಡ ವೈದ್ಯರು; ಹೇಳಿದ್ದೇನು?

Share :

Published April 4, 2024 at 3:32pm

Update April 4, 2024 at 3:41pm

    ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡಲು ನಿರ್ಧಾರ

    ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು, ಪವಾಡ ಎಂದ ವೈದ್ಯರು

    ಆಂಬ್ಯುಲೆನ್ಸ್‌ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಶಿಫ್ಟ್

ವಿಜಯಪುರ: ಕೋಟ್ಯಂತರ ಕರುನಾಡಿಗರ ಪ್ರಾರ್ಥನೆ ಕೊನೆಗೂ ಫಲ ಕೊಟ್ಟಿದೆ. ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಬೋರ್​ವೆಲ್​​ಗೆ ಬಿದ್ದಿದ್ದ ಪುಟ್ಟ ಮಗು ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ 20 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ಬಳಿಕ ಮಗು ಅಪಾಯದಿಂದ ಪಾರಾಗಿದೆ.

ಈ ದೃಶ್ಯ ನೋಡೋದಕ್ಕೆ ಇಡೀ ಕರುನಾಡೇ ಕಾದು ಕುಳಿತಿತ್ತು. ಪುಟ್ಟ ಪೋರ ಸಾತ್ವಿಕ್ ಸಾವು ಗೆದ್ದು ಬರಲೆಂದು ಕೋಟಿ ಮನಸ್ಸುಗಳು ಬಯಸಿದ್ದವು. ದೇವ್ರೇ ಆ ಕಂದಮ್ಮನಿಗೆ ಏನೂ ಆಗಬಾರದೆಂದು ಮನೆಗಳಿಂದಲೇ ಪ್ರಾರ್ಥನೆ ಸಲ್ಲಿಸಿದ್ದರು. ಕೊನೆಗೂ ಕೋಟ್ಯಾಂತರ ಮಂದಿಯ ಪ್ರಾರ್ಥನೆ ಫಲ ಕೊಟ್ಟಿದೆ. ಸಾವು ಜಯಿಸಿ ಮೃತ್ಯುಂಜಯನಾಗಿ ಸಾತ್ವಿಕ್​​ ಹೊರಬಂದಿದ್ದಾನೆ.

ಜೆಸಿಬಿಯಲ್ಲಿ ಆಳವಾಗಿ ಮಣ್ಣು ತೆಗೆದ ಬಳಿಕ ಅಡ್ಡವಾಗಿ ರಂಧ್ರ ಕೊರೆದು ಮಗುವನ್ನು ಹೊರತೆಗೆಯಲಾಗಿದೆ. ಮಗುವಿಗೆ ನಿರಂತರವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿತ್ತು. ರಂಧ್ರ ಕೊರೆಯುವ ವೇಳೆ ಮಗು ಅಳುವಿನ ಧ್ವನಿ ಕೇಳಿ ಎಲ್ಲರಿಗೂ ಆಶಾಭಾವನೆ ಮೂಡಿತ್ತು. ಕೊನೆಗೂ ರಕ್ಷಣಾ ಸಿಬ್ಬಂದಿ ಮಗುವನ್ನ ಹೊರತೆಗೆದಿದ್ದಾರೆ. ಆ ಬಳಿಕ ಮಗುವನ್ನ ಆಂಬುಲೆನ್ಸ್‌ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ಸಾತ್ವಿಕ್ ಅನ್ನು ರವಾನೆ ಮಾಡಲಾಗಿದೆ. ಸಾತ್ವಿಕ್‌ಗೆ ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಸಾವು ಗೆದ್ದು ಬಂದ ಸಾತ್ವಿಕ್‌.. ಕೊಳವೆ ಬಾವಿಗೆ ಬಾಲಕ ಬಿದ್ದಿದ್ದು ಹೇಗೆ? ತಂದೆ, ತಾಯಿಗೆ ಗೊತ್ತಾಗಿದ್ದೇ ಪವಾಡ!

ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡಲು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು, ಪವಾಡ ರೀತಿಯಲ್ಲಿ ಸಾತ್ವಿಕ ಬದುಕುಳಿದಿದ್ದಾನೆ. ಸಾತ್ವಿಕ ಆರಾಮವಾಗಿದ್ದಾನೆ ಎಂದು ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ನ್ಯೂಸ್ ಫಸ್ಟ್ ಗೆ ಹೇಳಿಕೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾನದಲ್ಲಿ 2 ವರ್ಷದ ಪುಟ್ಟ ಕಂದ ಸಾತ್ವಿಕ್ ನಿನ್ನೆ ಸಂಜೆ 5.30ಕ್ಕೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. 16 ಅಡಿ ಆಳದಲ್ಲಿ ಸಿಲುಕಿದ್ದ ಮಗು ರಕ್ಷಣೆಗೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆದಿತ್ತು. ಎನ್​ಡಿಆರ್​​ಎಫ್ ಹಾಗೂ ಎಸ್​​ಡಿಆರ್​ಎಫ್​​ ಸಿಬ್ಬಂದಿ ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಳವೆ ಬಾವಿಯಲ್ಲಿ ಬದುಕಿದ್ದೇ ಪವಾಡ.. ಸಾತ್ವಿಕ್‌ ನೋಡಿ ಅಚ್ಚರಿಗೊಂಡ ವೈದ್ಯರು; ಹೇಳಿದ್ದೇನು?

https://newsfirstlive.com/wp-content/uploads/2024/04/Vijayapura-Borewell-Satwik-1.jpg

Load More