newsfirstkannada.com

ಸಾವು ಗೆದ್ದು ಬಂದ ಸಾತ್ವಿಕ್‌.. ಕೊಳವೆ ಬಾವಿಗೆ ಬಾಲಕ ಬಿದ್ದಿದ್ದು ಹೇಗೆ? ತಂದೆ, ತಾಯಿಗೆ ಗೊತ್ತಾಗಿದ್ದೇ ಪವಾಡ!

Share :

Published April 4, 2024 at 2:28pm

Update April 4, 2024 at 2:31pm

    ತೋಟದಲ್ಲಿ 2 ಕೊಳವೆ ಬಾವಿ ಕೊರೆಸಿದ್ದ ಸಾತ್ವಿಕ್ ತಂದೆ ಸತೀಶ್

    ಬ್ಯಾಟರಿಯೊಂದಿಗೆ ಕೊಳವೆ ಬಾವಿಯಲ್ಲಿ ನೋಡಿದಾಗ ಬಾಲಕನ ಗೆಜ್ಜೆ ಶಬ್ಧ ಕೇಳಿತ್ತು

    ರಾತ್ರಿ 9 ಗಂಟೆಗೆ ಅಗೆಯುವ ವೇಳೆ ಕಲ್ಲು ಬಂಡೆಯಿಂದಾಗಿ ಕಾರ್ಯಾಚರಣೆ ವಿಳಂಬ

ವಿಜಯಪುರ: ನಿನ್ನೆ ರಾತ್ರಿಯಿಂದ ಇಡೀ ರಾಜ್ಯದಲ್ಲಿ ಕೋಟ್ಯಾಂತರ ತಾಯಿ ಹೃದಯದ ಪ್ರಾರ್ಥನೆ ಒಂದೇ ಆಗಿತ್ತು. ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಸಾವನ್ನೇ ಗೆದ್ದು ಬರಲಿ. 2 ವರ್ಷದ ಬಾಲಕನ ತಾಯಿಯ ಕಣ್ಣೀರಿಗೆ ಆ ದೇವರು ಕಣ್ಣು ಬಿಟ್ಟು ನೋಡಲಿ ಅನ್ನೋದಾಗಿತ್ತು. ಕೊನೆಗೂ ಸತತ 20 ಗಂಟೆಯ ರಕ್ಷಣಾ ಕಾರ್ಯ ಮುಗಿದಿದ್ದು, ಕೊಳವೆ ಬಾವಿಯಲ್ಲಿ ಸಿಲುಕಿದ್ದ ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ.

ಅಸಲಿಗೆ ದುರಂತ ನಡೆದಿದ್ದು ಹೇಗೆ?
ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ಕಳೆದ ಮಾರ್ಚ್ 2ರಂದು ಸಾತ್ವಿಕ್ ತಂದೆ ಎರಡು ಕೊಳವೆ ಬಾವಿ ಕೊರೆಸಿದ್ರು. ಒಂದು ಕೊಳವೆ ಬಾವಿಯಲ್ಲಿ 2 ಇಂಚು ನೀರು ಹಾಗೂ ಮತ್ತೊಂದರಲ್ಲಿ ಒಂದೂವರೆ ಇಂಚು ನೀರು ಬಂದಿತ್ತು.

ಕಳೆದ ಮಾರ್ಚ್ 3ರಂದು ಕೊಳವೆ ಬಾವಿಗೆ ಮೋಟಾರ್ ಅಳವಡಿಸುವ ಕಾರ್ಯ ನಡೆದಿತ್ತು. 2 ಇಂಚು ನೀರು ಸಿಕ್ಕಿದ್ದ ಕೊಳವೆ ಬಾವಿಗೆ ಮೋಟಾರ್ ಅಳವಡಿಕೆ ಮಾಡುವಾಗ ಒಂದೂವರೆ ಇಂಚು ನೀರು ಸಿಕ್ಕ ಕೊಳವೆ ಬಾವಿ ತೆರೆಯಲಾಗಿತ್ತು. ಇದೇ ಕೊಳವೆ ಬಾವಿಗೆ ಮನೆಯಿಂದ ಆಟವಾಡುತ್ತಾ ಬಂದ ಬಾಲಕ ಸಾತ್ವಿಕ್‌ ಬಿದ್ದಿದ್ದಾನೆ.

2 ಇಂಚು ನೀರು ಸಿಕ್ಕಿದ್ದ ಕೊಳವೆ ಬಾವಿಗೆ ಮೋಟಾರ್ ಅಳವಡಿಸಿದ್ದ ಸಾತ್ವಿಕ ತಂದೆ ಸತೀಶ್ ನೀರು ಬಿಡಲು ಹೋಗಿದ್ದಾರೆ. ತಂದೆ ಕಂಡು ಆಟವಾಡಲು ಸಾತ್ವಿಕ ಹೋಗಿ ಮತ್ತೊಂದು ಕೊಳವೆ ಬಾವಿಯಲ್ಲಿ ಬಿದ್ದಿದ್ದಾನೆ. ಸಾತ್ವಿಕನನ್ನು ಹುಡುಕಾಡಿ, ಹುಡುಕಾಡಿ ಕೊನೆಗೆ ಕೊಳವೆ ಬಾವಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಟರಿಯೊಂದಿಗೆ ಕೊಳವೆ ಬಾವಿಯಲ್ಲಿ ನೋಡಿದಾಗ ಬಾಲಕನ ಗೆಜ್ಜೆ ಶಬ್ಧ ಕೇಳಿ ಬಂದಿದೆ. ಇದಾದ ಮೇಲೆ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.

ಇದನ್ನೂ ಓದಿ: ಕೊಳವೆ ಬಾವಿಯಲ್ಲಿ ಬಿದ್ದಿದ್ದ ಸಾತ್ವಿಕ್‌ ಸುರಕ್ಷಿತ.. ಬಾಲಕ ಬದುಕುಳಿಯುವ ಪ್ರಾರ್ಥನೆಗೆ ಫಲ

20 ಗಂಟೆಯ ರಕ್ಷಣಾ ಕಾರ್ಯಾಚರಣೆ
ಮಾರ್ಚ್ 3
ಸಂಜೆ 5.30ಕ್ಕೆ ಕೊಳವೆ ಬಾವಿಗೆ ಬಿದ್ದ ಸಾತ್ವಿಕ್‌
ಸಂಜೆ 6.40ಕ್ಕೆ ವೈದ್ಯರು, ಜೆಸಿಬಿ ಸ್ಥಳಕ್ಕೆ ಆಗಮನ
ರಾತ್ರಿ 7ಗಂಟೆಗೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ
ರಾತ್ರಿ 7.15ಕ್ಕೆ ವೆಂಟಿಲೇಟರ್ ಆಕ್ಸಿಜನ್, ಆಂಬ್ಯುಲೆನ್ಸ್ ಆಗಮನ
ರಾತ್ರಿ 7-30ಕ್ಕೆ ಇಂಡಿ ತಹಶೀಲ್ದಾರ್, ಎಸಿ, ಪಿಡಬ್ಲೂಡಿ ಸಿಬ್ಬಂದಿ ಭೇಟಿ
ರಾತ್ರಿ 8ಗಂಟೆಗೆ 2 ಜೆಸಿಬಿ, ನಾಲ್ಕು ಟ್ರ್ಯಾಕ್ಟರ್, 2 ಹಿಟಾಚಿಯಿಂದ ಕಾರ್ಯಾಚರಣೆ
ರಾತ್ರಿ 8-30ಕ್ಕೆ ಜಿಲ್ಲಾಧಿಕಾರಿ ಎಸ್ಪಿ, ಡಿಎಚ್ಓ, ಜಿಲ್ಲಾ ಅಗ್ನಿಶಾಮಕ ದಳ ಸಿಬ್ಬಂದಿ ಆಗಮನ

ರಾತ್ರಿ 9-30 ಗಂಟೆ ವಿಜಯಪುರದಿಂದ ಅಗ್ನಿಶಾಮಕ ದಳದ ಮತ್ತೊಂದು ತಂಡ
ರಾತ್ರಿ 10 ಗಂಟೆಗೆ SDRF ತಂಡ ಬೆಳಗಾವಿಯಿಂದ ಆಗಮನ
ರಾತ್ರಿ 2-30ಕ್ಕೆ ಕಲಬುರ್ಗಿಯಿಂದ ಮತ್ತೊಂದು SDRF ತಂಡ ಭೇಟಿ

ಮಾರ್ಚ್ 4
ಬೆಳಗ್ಗೆ 6 ಗಂಟೆಗೆ ಬಂಡೆ ಕೊರೆಯಲು ಡ್ರಿಲ್ಲಿಂಗ್‌ ಕಾರ್ಯ
ಬೆಳಗ್ಗೆ 9 ಗಂಟೆಗೆ ಸಾತ್ವಿಕ್ ಅಳುವಿನ ಶಬ್ದ ರೆಕಾರ್ಡ್ ಮಾಡಿ ಬಿಡುಗಡೆ
ಬೆಳಗ್ಗೆ 11 ಗಂಟೆಗೆ ಬಾಲಕನ ತಲೆ ಸೆರೆ ಹಿಡಿದ ವಿಡಿಯೋ ಬಿಡುಗಡೆ
ಮಧ್ಯಾಹ್ನ 1 ಗಂಟೆಗೆ ಅಂತಿಮ ಹಂತದ ಕಾರ್ಯಾಚರಣೆಗೆ ಯಶಸ್ಸು
ಮಧ್ಯಾಹ್ನ 2 ಗಂಟೆಗೆ ಸಾತ್ವಿಕ್ ಸುರಕ್ಷಿತವಾಗಿ ವಾಪಸ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವು ಗೆದ್ದು ಬಂದ ಸಾತ್ವಿಕ್‌.. ಕೊಳವೆ ಬಾವಿಗೆ ಬಾಲಕ ಬಿದ್ದಿದ್ದು ಹೇಗೆ? ತಂದೆ, ತಾಯಿಗೆ ಗೊತ್ತಾಗಿದ್ದೇ ಪವಾಡ!

https://newsfirstlive.com/wp-content/uploads/2024/04/Satvik-Vijayapura.jpg

Load More