newsfirstkannada.com

×

ಸಿಸಿಬಿ ಪೊಲೀಸರಿಂದ ಬ್ಯಾಂಕ್​ ನೌಕರರು ಸೇರಿ ಎಂಟು ಜನರ ಬಂಧನ; ₹97 ಕೋಟಿ ಪಂಗನಾಮ!

Share :

Published October 15, 2024 at 1:16pm

Update October 15, 2024 at 1:20pm

    ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ ವಂಚನೆ

    ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಬೃಹತ್ ಕಾರ್ಯಾಚರಣೆ

    ಆಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಸೇರಿ ಒಟ್ಟು 8 ಜನರ ಬಂಧನ

ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ ಆ್ಯಕ್ಸಿಸ್​ ಬ್ಯಾಂಕ್​ನ ನೌಕರರು ಸೇರಿ ಒಟ್ಟು 8 ಜನರು ಬಂಧನಕ್ಕೊಳಗಾಗಿದ್ದಾರೆ. ವಿಐಪಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಇದೇ ಮೊದಲ ಬಾರಿ ಇಂತಹ ಆರೋಪದಲ್ಲಿ ಬ್ಯಾಂಕ್​ ಮ್ಯಾನೆಜರೊಬ್ಬರು ಬಂಧನಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ನಾಗರಭಾವಿ ಆ್ಯಕ್ಸಿಸ್​ ಬ್ಯಾಂಕ್​ನಲ್ಲಿ ಇಂತಹದೊಂದು ಘಟನೆ ನಡೆದಿದೆ.

ಇದನ್ನೂ ಓದಿ: Bengaluru Rain: ರಸ್ತೆ ಜಲಾವೃತ, ವಾಹನ ಸವಾರರ ಪರದಾಟ.. ಎಲ್ಲೆಲ್ಲಿ ಏನೇನಾಗಿದೆ ಗೊತ್ತಾ?

ಷೇರ್​ ಟ್ರೇಡಿಂಗ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿ. ಅವರನ್ನು ನಂಬಿಸಿ ವಂಚಿಸಲಾಗಿದೆ ಎಂಬ ಆರೋಪ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಕೇಳಿ ಬಂದಿದೆ. ಅವರ ಮಾತನ್ನು ಕೇಳಿ 1.5 ಕೋಟಿ ರೂಪಾಯಿ ಹಣ ಹೂಡಿಕೆ ಮಾಡಿದ್ದರು ಜನರು ನಂತರ ಷೇರು ಮಾರುಕಟ್ಟೆಯಲ್ಲಿ 28 ಕೋಟಿ ರೂಪಾಯಿ ಲಾಭ ಬಂದಿರುವುದು ಗೊತ್ತಾಗಿ, ಹಣವನ್ನು ವಾಪಸ್ ಪಡೆಯಲು ಹೋಗಿದ್ದಾರೆ. ಈ ವೇಳೆ 75 ಲಕ್ಷ ರೂಪಾಯಿ ಕೊಡುವಂತೆ ಆರೋಪಿಗಳು ಡಿಮ್ಯಾಂಡ್ ಇಟ್ಟಾಗ, ತಾವು ವಂಚನೆಗೆ ಒಳಗಾಗಿದ್ದೇವೆ ಎಂಬುದು ಜನರಿಗೆ ಗೊತ್ತಾಗಿದೆ. ಇದೇ ವಿಚಾರವಾಗಿ ಸೈಬರ್ ಠಾಣೆಯಲ್ಲಿ ಸುಮಾರು 245 ದೂರುಗಳು ದಾಖಲಾಗಿವೆ.

ಇದನ್ನೂ ಓದಿ: Bengaluru: ಬೆಳಗ್ಗೆಯಿಂದ ಸುರಿಯುತ್ತಿರೋ ಮಳೆ.. ನೆಲಕ್ಕುರುಳಿದ ಮರ, ಹೊಳೆಯಂತಾದ ರಸ್ತೆ​​

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಕಿಶೋರ್, ಸೇಲ್ಸ್​ಮೆನ್ ಮನೋಹರ್, ರಾಕೇಶ್ ಕಾರ್ತಿಕ್ ಸೇರಿದಂತೆ ಅಕೌಂಟ್ ಹೋಲ್ಡರ್ ಕೆಂಚೇಗೌಡ, ರಘು, ಲಕ್ಷ್ಮೀಕಾಂತ್, ಮಾಲ ಎಂಬುವವರನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಸಿಬಿ ಪೊಲೀಸರಿಂದ ಬ್ಯಾಂಕ್​ ನೌಕರರು ಸೇರಿ ಎಂಟು ಜನರ ಬಂಧನ; ₹97 ಕೋಟಿ ಪಂಗನಾಮ!

https://newsfirstlive.com/wp-content/uploads/2024/10/BNG-CCB-ATTACK.jpg

Load More