/newsfirstlive-kannada/media/post_attachments/wp-content/uploads/2024/10/KOHLI_KL_RAHUL.jpg)
85 ಓವರ್​​, 18 ವಿಕೆಟ್​, 437 ರನ್​.. ಇಂಡೋ-ಬಾಂಗ್ಲಾ ನಡುವಿನ 2ನೇ ಟೆಸ್ಟ್​ ಪಂದ್ಯದ 4ನೇ ದಿನದಾಟದ ಒನ್​ ಲೈನ್​ ಸಮ್ಮರಿಯಿದು. 2 ದಿನಗಳ ಪಂದ್ಯ ಮಳೆಯಿಂದ ರದ್ದಾಗಿದ್ದಕ್ಕೆ ಬೇಸರಗೊಂಡಿದ್ದ ಫ್ಯಾನ್ಸ್​ಗೆ 4ನೇ ದಿನದಾಟದಲ್ಲಿ ಪೈಸಾ ವಸೂಲ್​ ಎಂಟರ್​ಟೈನ್​​ಮೆಂಟ್​ ಸಿಕ್ಕಿದೆ. ಟೆಸ್ಟ್​ ಕ್ರಿಕೆಟ್​ ಅಕ್ಷರಶಃ ಟಿ20 ಫಾರ್ಮೆಟ್​ನ ಸ್ವರೂಪ ಪಡೆದುಕೊಂಡಿತ್ತು. ಹೇಗಿತ್ತು ಇಂಡೋ -ಬಾಂಗ್ಲಾ 4ನೇ ದಿನದ ಕಾದಾಟ?.
ಭಾರತ -ಬಾಂಗ್ಲಾ ನಡುವಿನ ಕಾನ್ಪುರ ಟೆಸ್ಟ್​​ ಫೈಟ್​ ರೋಚಕ ಘಟ್ಟದತ್ತ ಸಾಗಿದೆ. ಮೊದಲ ದಿನದಾಟದಲ್ಲಿ ಕೇವಲ 35 ಓವರ್​ಗಳ ಆಟ ನಡೆದ್ರೆ, 2 ಮತ್ತು 3ನೇ ದಿನ ಮಳೆ ಹಾಗೂ ವೆಟ್​ ಔಟ್​ಫೀಲ್ಡ್​ ಕಾರಣಕ್ಕೆ ರದ್ದಾಗಿತ್ತು. ಇದ್ರಿಂದ ಬೇಸರಗೊಂಡಿದ್ದ ಫ್ಯಾನ್ಸ್​ಗೆ 4ನೇ ದಿನ ಭರ್ಜರಿ ಎಂಟರ್​​ಟೈನ್​ಮೆಂಟ್​ ಸಿಗ್ತು.
31 ಓವರ್​​ಗೆ ಬಾಂಗ್ಲಾದೇಶ ಖೇಲ್​ ಖತಂ.!
3 ವಿಕೆಟ್​ ನಷ್ಟಕ್ಕೆ 103 ರನ್​ಗಳೊಂದಿಗೆ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡ ಭಾರತೀಯ ಬೌಲರ್​ಗಳ ಬಿಗಿ ಬೌಲಿಂಗ್​ಗೆ ತತ್ತರಿಸಿತು. ಜಸ್ಟ್​​ 31 ಓವರ್​​ಗಳಲ್ಲಿ ಬಾಂಗ್ಲಾ ಟೈಗರ್ಸ್​ನ ಇಂಡಿಯನ್​ ಬೌಲರ್ಸ್​ ಬೇಟೆಯಾಡಿದ್ರು. ಮೊಮಿನುಲ್​ ಹಕ್​​ ಶತಕ ಸಿಡಿಸಿದ್ದು ಬಿಟ್ರೆ, ಉಳಿದೆಲ್ಲಾ ಬ್ಯಾಟರ್ಸ್​ ಸುಲಭದ ಬಲಿಯಾದ್ರು. 233 ರನ್​ಗಳಿಗೆ ಬಾಂಗ್ಲಾ ಆಲೌಟ್​ ಆಯ್ತು.
ಟೀಮ್​ ಇಂಡಿಯಾ ಅಬ್ಬರ.. ಬೆಚ್ಚಿ ಬಿದ್ದ ಬಾಂಗ್ಲಾ.!
ಮೊದಲ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾ ಅಬ್ಬರದ ಆರಂಭ ಪಡೆಯಿತು. ರೋಹಿತ್​ ಶರ್ಮಾ - ಯಶಸ್ವಿ ಜೈಸ್ವಾಲ್​ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 3 ಓವರ್​​ಗಳಲ್ಲೇ ತಂಡದ ಸ್ಕೋರ್​​ 50ರ ಗಡಿ ದಾಟಿತು. 3 ಸಿಕ್ಸರ್​​, 1 ಬೌಂಡರಿ ಸಿಡಿಸಿ ಆರ್ಭಟಿಸಿದ ರೋಹಿತ್​ 23 ರನ್​ಗಳಿಸಿ ಔಟಾದ್ರು.
ಜೈಸ್ವಾಲ್​ ಆರ್ಭಟಕ್ಕೆ ಬಾಂಗ್ಲಾ ತಬ್ಬಿಬ್ಬು.!
ರೋಹಿತ್​ ನಿರ್ಗಮನದ ಬಳಿಕವೂ ಯಶಸ್ವಿ ಜೈಸ್ವಾಲ್​ ಆರ್ಭಟ ನಿಲ್ಲಲಿಲ್ಲ. 31 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿ ಮಿಂಚಿದ್ರು. ಕೇವಲ 10.1 ಓವರ್​ಗಳಲ್ಲಿ ಇಂಡಿಯಾ ಶತಕದ ಗಡಿ ದಾಟಿತು. 12 ಬೌಂಡರಿ, 2 ಸಿಕ್ಸರ್​​ ಚಚ್ಚಿದ ಜೈಸ್ವಾಲ್​ 72 ರನ್​ಗಳಿಸಿ ಔಟಾದ್ರು.
ಡಿಸೆಂಟ್​ ಆಟವಾಡಿದ ಶುಭ್​​ಮನ್​ ಗಿಲ್​ 39 ರನ್​ಗಳಿಸಿ ಔಟಾದ್ರೆ, ಬ್ಯಾಟಿಂಗ್​ ಆರ್ಡರ್​​ನಲ್ಲಿ ಬಡ್ತಿ ಪಡೆದುಕೊಂಡು ಕಣಕ್ಕಿಳಿದ ರಿಷಬ್​ ಪಂತ್​, ನಿರೀಕ್ಷೆ ಹುಸಿಗೊಳಿಸಿದ್ರು. ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಕೊಹ್ಲಿ, ಕೆ.ಎಲ್​ ರಾಹುಲ್​ 87 ರನ್​ಗಳ ಜೊತೆಯಾಟವಾಡಿದ್ರು.
ಅರ್ಧಶತಕ ಸಿಡಿಸಿ ಮಿಂಚಿದ ಕನ್ನಡಿಗ ರಾಹುಲ್​.!
ಉತ್ತಮ ಆಟವಾಡಿದ ವಿರಾಟ್​ ಕೊಹ್ಲಿ 47 ರನ್​ಗಳಿಸಿ ಔಟಾದ್ರು. ಟಿ20 ಶೈಲಿಯಲ್ಲಿ ಬ್ಯಾಟ್​ ಬೀಸಿದ ಕನ್ನಡಿಗ ರಾಹುಲ್​, 158.14ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ರು. 2 ಸಿಕ್ಸರ್​​, 7 ಬೌಂಡರಿ ಬಾರಿಸಿದ ರಾಹುಲ್​, 33 ಎಸೆತಗಳಲ್ಲಿ ಹಾಫ್​ ಸೆಂಚುರಿ ಗಡಿ ದಾಟಿದ್ರು.
ಜಡೇಜಾ, ಅಶ್ವಿನ್​ ಅಲ್ಪ ಮೊತ್ತಕ್ಕೆ ಔಟಾದ್ರು. ಅಂತಿಮವಾಗಿ 2 ಸಿಕ್ಸರ್​ ಸಿಡಿಸಿದ ಆಕಾಶ್​ ದೀಪ್​ ಪತನದೊಂದಿಗೆ ಟೀಮ್​ ಇಂಡಿಯಾ ಇನ್ನಿಂಗ್ಸ್​ ಡಿಕ್ಲೆರ್​ ಮಾಡಿಕೊಳ್ತು. ಮೊದಲ ಇನ್ನಿಂಗ್ಸ್​ನಲ್ಲಿ 9 ವಿಕೆಟ್​ ನಷ್ಟಕ್ಕೆ 285 ರನ್​ಗಳಿಸಿದ ಭಾರತ ತಂಡ 52 ರನ್​ಗಳ ಮುನ್ನಡೆ ಸಾಧಿಸಿತು.
ಇನ್ನಿಂಗ್ಸ್​​ ಆರಂಭಿಸಿದ ಬಾಂಗ್ಲಾಗೆ ಅಶ್ವಿನ್​ ಶಾಕ್​.!
52 ರನ್​ಗಳ ಹಿನ್ನಡೆಯೊಂದಿಗೆ ಇನ್ನಿಂಗ್ಸ್​ ಆರಂಭಿಸಿದ ಬಾಂಗ್ಲಾಗೆ ಅಶ್ವಿನ್​ ಶಾಕ್​ ಕೊಟ್ಟಿದ್ದಾರೆ. ಓಪನರ್​​ ಝಾಕೀರ್ ಹುಸೇನ್​ನ ಎಲ್​ಬಿ ಬಲೆಗೆ ಕೆಡವಿದ ಅಶ್ವಿನ್​, ಬಳಿಕ ನೈಟ್​ ವಾಚ್​ಮನ್​ ಆಗಿ ಕಣಕ್ಕಿಳಿದ ಹಸನ್​ ಮಹ್ಮದ್​ನ ಕ್ಲೀನ್​​ಬೋಲ್ಡ್​ ಮಾಡಿದ್ರು. ಅಂತಿಮವಾಗಿ ದಿನದ ಅಂತ್ಯಕ್ಕೆ 2ನೇ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 26 ರನ್​ಗಳಿಸಿದ್ದು, 26 ರನ್​ಗಳ ಹಿನ್ನಡೆಯಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ