newsfirstkannada.com

×

KL ರಾಹುಲ್, ಜೈಸ್ವಾಲ್, ಕೊಹ್ಲಿ ಅಲ್ಲ.. ಬಾಂಗ್ಲಾ ವಿರುದ್ಧದ ಗೆಲುವಿಗೆ ಈ ತ್ರಿಮೂರ್ತಿಗಳೇ ಕಾರಣ!

Share :

Published October 2, 2024 at 3:04pm

    ಬಾಂಗ್ಲಾದ ಟಾಪ್ ಪ್ಲೇಯರ್ಸ್​ ಅನ್ನ ಕಾಡಿದ ಆರ್ ಅಶ್ವಿನ್

    ಬ್ಯಾಟಿಂಗ್​ನಲ್ಲಿ ಆರ್ಭಟಿಸಿರುವ ವಿರಾಟ್ ಕೊಹ್ಲಿ, ರಾಹುಲ್

    ಯಂಗ್ ಬ್ಯಾಟ್ಸ್​ಮನ್ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ

ಸಾಧಿಸುವ ಛಲವೊಂದು ಇದ್ದರೆ. ಯಾವುದೂ ಅಸಾಧ್ಯವಲ್ಲ. ಟೀಮ್ ಇಂಡಿಯಾ ಕಾನ್ಪುರ ಟೆಸ್ಟ್​ನಲ್ಲಿ ನೀಡಿದ ಪ್ರದರ್ಶನ ಈ ಮಾತಿಗೆ ಸರಿ ಹೊಂದುತ್ತದೆ. ಅಸಾಧ್ಯ ಅನ್ನೋದನ್ನ ಈ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸಾಧಿಸಿ ತೋರಿಸಿದೆ. ಇದಕ್ಕೆ ಕಾರಣ ಭಾರತದ ಈ ತ್ರಿಮೂರ್ತಿಗಳೇ ಕಾರಣ.

ಕಾನ್ಪುರ ಟೆಸ್ಟ್​ನ ಮೊದಲ 3 ದಿನಗಳ ರಿಪೋರ್ಟ್ ಗಣನೆಗೆ ತೆಗೆದುಕೊಂಡರೇ ಬಹುತೇಕರಲ್ಲಿ ಈ ಟೆಸ್ಟ್​ ಪಂದ್ಯವನ್ನ ಟೀಮ್ ಇಂಡಿಯಾ ಗೆಲ್ಲೋಕೆ ಸಾಧ್ಯನಾ ಎಂಬ ಪ್ರಶ್ನೆ ಕಾಡಿತ್ತು. ಯಾಕಂದ್ರೆ, ಮೊದಲ 3 ದಿನದಾಟದಲ್ಲಿ ನಡುವೆ ನಡೆದಿದ್ದೆ ಒಂದೇ ಒಂದು ಸೆಷನ್. ಇನ್ನುಳಿದ 6 ಸೆಷನ್​ನಲ್ಲಿ 18 ವಿಕೆಟ್ ಉರುಳಿಸೋದು ಮಾತ್ರವೇ ಟೀಮ್ ಇಂಡಿಯಾ ಟಾರ್ಗೆಟ್ ಆಗಿರಲಿಲ್ಲ. ಬಾಂಗ್ಲಾ ನೀಡುವ ಟಾರ್ಗೆಟ್​ನ ಚೇಸ್ ಕೂಡ ಮಾಡಬೇಕಿತ್ತು. ಇದು ನಿಜಕ್ಕೂ ಅಸಾಧ್ಯದ ಕೆಲಸ. ಆದ್ರೆ, ಟೀಮ್ ಇಂಡಿಯಾ ಅದನ್ನ ಸಾಧಿಸಿ ತೋರಿಸಿದೆ.

ಇದನ್ನೂ ಓದಿ: RCBಗೆ ಕೊಹ್ಲಿ, ವಿಲ್ ಜಾಕ್ಸ್ ಸೇರಿ 5 ಪ್ಲೇಯರ್ಸ್​ ರಿಟೈನ್​.. ಫ್ರಾಂಚೈಸಿಯಿಂದ ಕ್ಯಾಪ್ಟನ್​ಗೆ ಬಿಗ್ ಶಾಕ್?

121 ಓವರ್​ಗಳಲ್ಲಿ 20 ವಿಕೆಟ್ ಉರುಳಿಸುವುದು ನಿಜಕ್ಕೂ ಕಷ್ಟಕರ ಕೆಲಸ. ಆದ್ರೆ, ಇದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ್ದ ಇಂಡಿಯನ್ ಬೌಲಿಂಗ್ ಅಟ್ಯಾಕ್​​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಬಾಂಗ್ಲಾ ಬೇಟೆಯಾಡಿದರು. ಕಾನ್ಪುರ ಟೆಸ್ಟ್​ನಲ್ಲಿ ಆ ತ್ರಿಮೂರ್ತಿಗಳು ಟೀಮ್ ಇಂಡಿಯಾದ ಗೆಲುವಿನ ರೂವಾರಿಗಳಾದರು.

ನಂ.1- ಆರ್​.ಅಶ್ವಿನ್.. 15 ಓವರ್​.. 3 ವಿಕೆಟ್..!

ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದ ಟಾಪ್ ಆರ್ಡರ್​ನ ಕಾಡಿದ್ದೆ ಆರ್​.ಅಶ್ವಿನ್​.. 8ನೇ ಓವರ್​ನಲ್ಲಿ ಝಾಕೀರ್ ಹಸನ್​​​ ವಿಕೆಟ್ ಬೇಟೆಯಾಡಿ ಮೊದಲ ಬ್ರೇಕ್​ ಥ್ರೂ ನೀಡಿದ ಅಶ್ವಿನ್, ನಂತರ ಹಸನ್ ಮೊಹ್ಮದ್, ಮೊಮಿನುಲ್​ರಂಥ ಟಾಪ್ ಕ್ಲಾಸ್ ಬ್ಯಾಟರ್​ಗಳನ್ನೇ ಪೆವಿಲಿಯನ್​​ ಹಾದಿ ತೋರಿದರು. ಆ ಮೂಲಕ ಬಾಂಗ್ಲಾ ಮೇಲೆ ಒತ್ತಡ ಹೇರಿದ ಆರ್​​.ಅಶ್ವಿನ್, ಟೀಮ್ ಇಂಡಿಯಾಗೆ ಉತ್ತಮ ಸ್ಟಾರ್ಟ್ ನೀಡಿದರು.

ನಂ.2- ಬಾಂಗ್ಲಾ ಮಿಡಲ್ ಆರ್ಡರ್​ಗೆ ಜಡೇಜಾ ವಿಲನ್..!

ಆರ್​​.ಅಶ್ವಿನ್ ಮ್ಯಾಜಿಕಲ್ ಸ್ಪೆಲ್​ಗೆ ಬಾಂಗ್ಲಾ ಟಾಪ್ ಆರ್ಡರ್​ ಚಿದ್ರವಾದ್ರೆ, ಜಡೇಜಾ ಜಾದೂಗೆ ಬಾಂಗ್ಲಾ ಮಿಡಲ್ ಆರ್ಡರ್ ಸೂತ್ರವಿಲ್ಲದ ಗಾಳಿಪಟದಂತಾಯ್ತು. ಕ್ರೀಸ್​ನಲ್ಲಿ ಸೆಟ್ಲ್​ ಆಗಿದ್ದ ಶಾಂಟೋಗೆ ಪೆವಿಲಿಯನ್​ ಹಾದಿ ತೋರಿಸಿದ ಜಡೇಜಾ, ನಂತರ ಅಪಾಯಕಾರಿ ಲಿಟನ್ ದಾಸ್​, ಶಕೀಬ್ ಅಲ್​​ ಹಸನ್​​ ವಿಕೆಟ್ ಬೇಟೆಯಾಡಿದರು. ಇದರೊಂದಿಗೆ ಮಿಡಲ್ ಆರ್ಡರ್​ನ ಧ್ವಂಸಗೊಳಿಸಿದ ಜಡೇಜಾ, ಟೀಮ್ ಇಂಡಿಯಾ ಗೆಲುವಿನ ಹಾದಿ ಸುಗಮವಾಗಿಸಿದ್ರು.

ಇದನ್ನೂ ಓದಿ: 6 ಆಟಗಾರರ​ ರಿಟೈನ್​ಗೆ ಅನುಮತಿ.. ಧೋನಿಗೂ ಗುಡ್​ನ್ಯೂಸ್ ಕೊಟ್ಟ ಬಿಸಿಸಿಐ..!​

ನಂ.3- ಬೂಮ್ರಾ ಬೊಂಬಾಟ್ ಸ್ಪೆಲ್.. ಬಾಂಗ್ಲಾ ಸ್ಟನ್!

ಬಾಂಗ್ಲಾಗೆ ಮೊದಲ ಇನ್ನಿಂಗ್ಸ್​ನಲ್ಲಿ ಕಾಡಿದ್ದ ಬೂಮ್ರಾ, 2ನೇ ಇನ್ನಿಂಗ್ಸ್​ನಲ್ಲೂ ಕ್ರೂಶಿಯಲ್ ರೋಲ್ ಪ್ಲೇ ಮಾಡಿದರು. ವೇಗಿಗಳಿಗೆ ನೆರವಾಗದ ಪಿಚ್​ನಲ್ಲೇ ಸಾಲಿಡ್ ಸ್ಪೆಲ್ ಹಾಕಿ ಗಮನ ಸೆಳೆದ್ರು. 10 ಓವರ್​​ಗಳ ಪೈಕಿ 5 ಓವರ್ ಮೇಡನ್ ಎಸೆದ ಬೂಮ್ರಾ, 3 ವಿಕೆಟ್ ಉರುಳಿಸಿದ್ರು. ಪ್ರಮುಖವಾಗಿ ಆಲ್​ರೌಂಡರ್​ ಮೆಹದಿ ಹಸನ್, ಅನುಭವಿ ಮುಷ್ಫಿಕರ್ ರಹೀಂ ವಿಕೆಟ್ ಬೇಟೆಯಾಡಿದ ಬೂಮ್ರಾ, ಟೀಮ್ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದ್ರು.

ಈ ತ್ರಿಮೂರ್ತಿಗಳ ಅದ್ಭುತ ಬೌಲಿಂಗ್ ಟೀಮ್​ ಇಂಡಿಯಾ ಸಿಕ್ಕ ಅಲ್ಪ ಅವಕಾಶದಲ್ಲಿ ಪಂದ್ಯವನ್ನ ಗೆಲ್ಲುವಂತೆ ಮಾಡಿದೆ. ಈ ಮೂಲಕ ಅಸಾಧ್ಯ ಅಂತ ಬಹುತೇಕರು ಅಂದಿದ್ದನ್ನ ಸಾಧಿಸಿ ತೋರಿಸುವಂತಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್, ಜೈಸ್ವಾಲ್, ಕೊಹ್ಲಿ ಅಲ್ಲ.. ಬಾಂಗ್ಲಾ ವಿರುದ್ಧದ ಗೆಲುವಿಗೆ ಈ ತ್ರಿಮೂರ್ತಿಗಳೇ ಕಾರಣ!

https://newsfirstlive.com/wp-content/uploads/2024/10/KL_RAHUL-8.jpg

Load More