/newsfirstlive-kannada/media/post_attachments/wp-content/uploads/2024/10/Hardik-Pandya_Surya.jpg)
ಭಾರತ ಹಾಗೂ ಬಾಂಗ್ಲಾ ನಡುವೆ ಸರಣಿಯ ಕೊನೆ ಟಿ20 ಪಂದ್ಯ ನಡೆಯಲಿದ್ದು ಭಾರತ ತಂಡಗಳಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ಏಕೆಂದರೆ ಸರಣಿ ವಶಕ್ಕೆ ಪಡೆದುಕೊಂಡ ಸೂರ್ಯಕುಮಾರ್ ಸೇನೆ ಯುವ ಆಟಗಾರರಿಗೆ ಅವಕಾಶ ಕೊಡುವ ನಿರೀಕ್ಷೆ ಇದೆ. ಇದರ ಜೊತೆಗೆ ಇಂದಿನ ಪಂದ್ಯದಲ್ಲಿ ಭಾರೀ ರನ್ಗಳನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದು.
ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಫಸ್ಟ್ ಬ್ಯಾಟಿಂಗ್ ಮಾಡುವ ತಂಡ ಭಾರೀ ಮೊತ್ತದ ರನ್ ಗಳಿಸಬಹುದು. ಆದರೆ ಗೆಲುವು ಮಾತ್ರ ಸೆಕೆಂಡ್ ಬ್ಯಾಟಿಂಗ್ ಮಾಡುವ ತಂಡಕ್ಕೆ ಇದೆ. ಇದಕ್ಕೆ ಉದಾಹರಣೆ ಎಂದರೆ ಈ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯವನ್ನ 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ 209 ರನ್ ಗಳಿಸಿತ್ತು. ಇದೇ ರನ್ ಈವರೆಗೂ ಅತ್ಯಧಿಕ ರನ್ ಆಗಿದೆ. ಇದಾದ ಬಳಿಕ 2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಅಲ್ಲದೇ ಈ ಪಂದ್ಯದಲ್ಲಿ ಸೂರ್ಯ 5 ಸಿಕ್ಸರ್ ಸಮೇತ 69 ರನ್ ಸಿಡಿಸಿದ್ದರು. ಇನ್ನು ಈ ಮೈದಾನದಲ್ಲಿ ಒಟ್ಟು 2 ಪಂದ್ಯ ನಡೆದಿದ್ದು ಇದು 3ನೇ ಪಂದ್ಯವಾಗಿದೆ.
ಇದನ್ನೂ ಓದಿ: ಭಾರತ- ಬಾಂಗ್ಲಾ T20 ಪಂದ್ಯ ನಡೆಯೋದು ಡೌಟ್.. ಕೊನೆ ಮ್ಯಾಚ್ಗೆ ಎಂಟ್ರಿ ಆಗುತ್ತಾ ಮಳೆ?
ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೇಳಿ ಮಾಡಿಸಿದಂತೆ ಇದೆ. ಈ ಪಿಚ್ ಬ್ಯಾಟರ್ಗಳಿಗೆ ಸ್ವರ್ಗವಾಗಿದರೆ, ಬೌಲರ್‌ಗಳಿಗೆ ದುಸ್ವಪ್ನವಾಗಲಿದೆ. ಆದರೆ ಆಸಿಸ್ ವಿರುದ್ಧ ಅಕ್ಷರ್ ಪಟೇಲ್ 33 ರನ್ಗೆ 3 ವಿಕೆಟ್ ಕಬಳಿಸಿದ್ದು ಇಲ್ಲಿ ದಾಖಲೆ ಆಗಿದೆ. ಮೊದಲ ಬ್ಯಾಟಿಂಗ್ ಮಾಡುವ ತಂಡ ಸರಾಸರಿ 197 ರನ್ಗಳನ್ನ ಬಾರಿಸಬಹುದು. ಚೇಸಿಂಗ್ ತಂಡ ಇಲ್ಲಿ ಎರಡು ಬಾರಿ ಗೆದ್ದಿದೆ. ಸದ್ಯ ಟಿ20ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಈ ಪಿಚ್ನಲ್ಲಿ ಆಸಿಸ್ ವಿರುದ್ಧ 94 ರನ್ ಗಳಿಸಿರುವುದು ವೈಯಕ್ತಿಕ ಅಧಿಕ ರನ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ