ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಆರಂಭ
ಇಂಡೋ VS ಪಾಕ್..ಯಾರ ಬ್ಯಾಟಿಂಗ್ ಸ್ಟ್ರಾಂಗ್
ಈ ವರ್ಷ ರನ್ ಗಳಿಕೆಯಲ್ಲಿ ಯಾರು ಬೆಸ್ಟ್..?
ಇಂಡೋ-ಪಾಕ್ ಏಷ್ಯಾಕಪ್ ಪಂದ್ಯಕ್ಕೆ ಕೌಂಟ್ಡೌನ್ ಶುರುವಾಗಿದೆ. ಯಾರು ಗೆಲ್ತಾರೆ ? ಯಾರು ಸೋಲ್ತಾರೆ? ಅನ್ನೋ ಚರ್ಚೆ ಕೂಡ ಜೋರಾಗಿದೆ. ಈ ಬಾರಿ ಅಖಾಡದಲ್ಲಿ ಬ್ಯಾಟಿಂಗ್ ವಾರ್ ನಡೆಯೋದು ಪಕ್ಕಾ.! ಹಾಗಾದ್ರೆ ಯಾವ ಟೀಮ್ ಬ್ಯಾಟಿಂಗ್ ಸ್ಟ್ರಾಂಗ್ ಆಗಿದೆ. ಭಾರತದ್ದಾ ? ಇಲ್ಲ ಪಾಕ್ದಾ ? ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಆಗಸ್ಟ್ 30 ರಿಂದ ಕ್ರಿಕೆಟ್ ಪ್ರೇಮಿಗಳನ್ನ ಹಿಡಿಯೋರೆ ಇಲ್ಲ. ಯಾಕಂದ್ರೆ ಅವತ್ತಿನಿಂದ ಅಸಲಿ ಕ್ರಿಕೆಟ್ ಫೆಸ್ಟಿವಲ್ ಶುರುವಾಗಲಿದೆ. ಏಷ್ಯಾಕಪ್ನಿಂದ ಶುರುವಾಗಿ ಒನ್ಡೇ ವಿಶ್ವಕಪ್ ತನಕ ಅಭಿಮಾನಿ ದೇವರುಗಳು ಮನರಂಜನೆ ಅಲೆಯಲ್ಲಿ ತೇಲಾಡಲಿದ್ದಾರೆ. ಅದ್ರಲ್ಲೂ ಬದ್ಧವೈರಿ ಇಂಡೋ-ಪಾಕ್ ಪಂದ್ಯವೆಂದ್ರೆ ಮುಗಿದೇ ಹೋಯ್ತು. ಫುಲ್ ಮೀಲ್ಸ್ ಸವಿಯೋದು ಪಕ್ಕಾ.
ಟೀಮ್ ಇಂಡಿಯದ್ದಾ ? ಬದ್ಧವೈರಿ ಪಾಕಿಸ್ತಾನದ್ದಾ..?
ಆಗಸ್ಟ್ 30ಕ್ಕೆ ಏಷ್ಯಾಕಪ್ ಟೂರ್ನಿ ಶುರುವಾದ್ರು, ಅಸಲಿಗೆ ಪಂದ್ಯಾವಳಿ ರಂಗೇರೋದು ಸೆಪ್ಟಂಬರ್ 2 ರಿಂದ. ಯಾಕಂದ್ರೆ ಅಂದು ಬದ್ಧವೈರಿಗಳಾದ ಇಂಡೋ-ಪಾಕ್ ಕಾದಾಡಲಿವೆ. ಈ ಸೇಡಿನ ಸಮರ ಡೆಫಿನೆಟ್ಲಿ ಬ್ಯಾಟಿಂಗ್ ವಾರ್ ಆಗಿ ಬದಲಾಗಲಿದೆ. ಯಾಕಂದ್ರೆ, ಎರಡೂ ಟೀಮ್ಸ್ನಲ್ಲಿ ವರ್ಲ್ಡ್ ಕ್ಲಾಸ್ ಬ್ಯಾಟ್ಸ್ಮನ್ಗಳಿದ್ದಾರೆ.
ODI ಱಂಕಿಂಗ್ನಲ್ಲಿ ಭಾರತೀಯ ಬ್ಯಾಟರ್ಸ್
ಶುಭ್ಮನ್ ಗಿಲ್ – 5
ವಿರಾಟ್ ಕೊಹ್ಲಿ – 9
ಐಸಿಸಿ ಏಕದಿನ ಬ್ಯಾಟ್ಸ್ಮನ್ಗಳ ಟಾಪ್-10 ಱಂಕಿಂಗ್ನಲ್ಲಿ ಟೀಮ್ ಇಂಡಿಯಾದ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ. ಶುಭ್ಮನ್ ಗಿಲ್ 5ನೇ ಱಂಕಿಂಗ್ ಹೊಂದಿದ್ರೆ, ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ. ಭಾರತೀಯ ಬ್ಯಾಟ್ಸ್ಮನ್ಗಳಿಗೆ ಹೋಲಿಸಿದ್ರೆ ಪಾಕಿಸ್ತಾನ ಪ್ಲೇಯರ್ಸ್ ಐಸಿಸಿ ಱಂಕಿಂಗ್ನಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.
ODI ಱಂಕಿಂಗ್ನಲ್ಲಿ ಪಾಕಿಸ್ತಾನ ಬ್ಯಾಟರ್ಸ್
ಬಾಬರ್ ಅಝಂ – 1
ಫಖರ್ ಜಮಾನ್ – 3
ಇಮಾಮ್ ಉಲ್ ಹಕ್ – 4
ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಅಝಂ ಏಕದಿನ ಱಕಿಂಗ್ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದ್ದಾರೆ. ಇನ್ನು ಫಖರ್ ಝಮಾನ್ 3 ಹಾಗೂ ಇಮಾಮ್ ಉಲ್ ಹಕ್ 4ನೇ ಱಂಕಿಂಗ್ ಸಂಪಾದಿಸಿದ್ದಾರೆ.
ಱಂಕಿಂಗ್ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಹಿನ್ನಡೆ ಅನುಭವಿಸಿರಬಹುದು. ಆದ್ರೆ, ಪ್ರಸಕ್ತ ವರ್ಷ ಏಕದಿನ ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್ ರನ್ ಭರಾಟೆ ನಡೆಸಿದ್ದಾರೆ. ಆ ಪೈಕಿ ಯಂಗ್ಗನ್ ಶುಭ್ಮನ್ ಗಿಲ್ ಅಂತೂ ಧೂಳೆಬ್ಬಿಸಿದ್ದಾರೆ.
ಈ ವರ್ಷ ಏಕದಿನದಲ್ಲಿ ಭಾರತೀಯರ ಪ್ರದರ್ಶನ.. ಆಟಗಾರ ಪಂದ್ಯ ರನ್ ಸರಾಸರಿ
ಕೊಹ್ಲಿ 10 427 53.37
ರೋಹಿತ್ 09 383 47.87
ಗಿಲ್ 12 750 68.18
2023 ರಲ್ಲಿ ಆಡಿದ 10 ಪಂದ್ಯಗಳಿಂದ ವಿರಾಟ್ ಕೊಹ್ಲಿ 53.37ರ ಸರಾಸರಿಯಲ್ಲಿ 427 ರನ್ ಬಾರಿಸಿದ್ದಾರೆ. 1 ಶತಕ, 2 ಹಾಫ್ಸೆಂಚುರಿ ಮೂಡಿ ಬಂದಿವೆ. ಕ್ಯಾಪ್ಟನ್ ರೋಹಿತ್ 9 ಇನ್ನಿಂಗ್ಸ್ ಆಡಿದ್ದು 47.87ರ ಸರಾಸರಿಯಲ್ಲಿ 383 ರನ್ ಕೊಳ್ಳೆ ಹೊಡೆದಿದ್ದಾರೆ. ಶುಭ್ಮನ್ ಗಿಲ್ ಆಡಿದ 12 ಇನ್ನಿಂಗ್ಸ್ಗಳಿಂದ 68.18 ಎವರೇಜ್ನಲ್ಲಿ 750 ರನ್ಗಳಿಸಿದ್ದಾರೆ.
ಟೀಮ್ ಇಂಡಿಯಾ ಬ್ಯಾಟರ್ಸ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ ಎಂದ ಮಾತ್ರಕ್ಕೆ ಪಾಕ್ ಪ್ಲೇಯರ್ಸ್ನ ಸಾದಾರಣಕ್ಕೆ ಪರಿಗಣಿಸುವಂತೇ ಇಲ್ಲ.. ಪಾಕ್ ಪ್ಲೇಯರ್ಸ್ ಕೂಡ ನಾವೇನು ಕಮ್ಮಿ ಎನ್ನುವಂತೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿದ್ದಾರೆ.
ಈ ವರ್ಷ ಏಕದಿನದಲ್ಲಿ ಪಾಕ್ ಆಟಗಾರರ ಪ್ರದರ್ಶನ..ಆಟಗಾರ ಪಂದ್ಯ ರನ್ ಎವರೇಜ್
ಬಾಬರ್ 8 425 53.13
ಫಖಾರ್ 8 520 74.29
ರಿಜ್ವಾನ್ 8 343 68.60
ಇಫ್ತಿಖಾರ್ 2 122 122.00
ಬಾಬರ್ ಅಝಂ ಈ ವರ್ಷ 8 ಪಂದ್ಯ ಆಡಿದ್ದೂ, 53.13 ರ ಎವರೇಜ್ನಲ್ಲಿ 425 ರನ್ ಬಾರಿಸಿದ್ದಾರೆ. ಫಖಾರ್ ಝಮಾನ್ 8 ಮ್ಯಾಚ್ ಆಡಿ 74.29 ಸರಾಸರಿಯಲ್ಲಿ 520 ರನ್ ಗಳಿಸಿದ್ದಾರೆ. ಇನ್ನು, ಮೊಹಮ್ಮದ್ ರಿಜ್ವಾನ್ 8 ಪಂದ್ಯಗಳಿಂದ 68.60 ರ ಸರಾಸರಿಯಲ್ಲಿ 343 ರನ್ ಬಾರಿಸಿದ್ದಾರೆ. ಇಫ್ತಿಕಾರ್ ಅಹಮ್ಮದ್ 2 ಪಂದ್ಯ ಆಡಿ 122ರ ಎವರೇಜ್ನಲ್ಲಿ ಒಂದು ಹಾಫ್ಸೆಂಚುರಿ ಸಹಿತ 122 ರನ್ ಬಾರಿಸಿದ್ದಾರೆ.
ಒಟ್ಟಿನಲ್ಲಿ ಐಸಿಸಿ ಱಂಕಿಂಗ್ ಹಾಗೂ ಪ್ರಸಕ್ತ ವರ್ಷದ ರನ್ ಗಳಿಕೆ ನೋಡಿದ್ರೆ ಟೀಮ್ ಇಂಡಿಯಾಗಿಂತ ಪಾಕಿಸ್ತಾನ ಬ್ಯಾಟಿಂಗ್ಲೈನ್ ಅಪ್ ಉತ್ತಮವಾಗಿ ಕಾಣಿಸ್ತಿದೆ. ಇದು ಟೀಮ್ ಇಂಡಿಯಾಗೆ ಎಚ್ಚರಿಕೆಯ ಕರೆಗಂಟೆ ಅಂದ್ರೂ ತಪ್ಪಾಗಲ್ಲ.. ಯಾಕಂದ್ರೆ, ಪಾಕ್ ಬೌಲಿಂಗ್ ಸಿಕ್ಕಾಪಟ್ಟೆ ಬಲಿಷ್ಟವಾಗಿದೆ. ಹೀಗಾಗಿ ಭಾರತೀಯ ಬ್ಯಾಟರ್ಸ್ ಎಚ್ಚರಿಕೆಯ ಆಟವಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ