newsfirstkannada.com

ಪಾಕ್​​ ಪ್ಲಾನ್​ ಪಂಚರ್​ ಮಾಡಲು ಮಾಸ್ಟರ್​ ಪ್ಲಾನ್​.. ರೋಹಿತ್- ರಾಹುಲ್​ ಬಳಿ ಇರೋ ಬ್ರಹ್ಮಾಸ್ತ್ರ​ಗಳೇನು?

Share :

Published June 9, 2024 at 10:59am

    ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್​ ಕದನಕ್ಕೆ ವೇದಿಕೆ ರೆಡಿ

    ಶಿವಂ ದುಬೆಗೆ ಕೊಕ್​​, ಸಂಜು ಸ್ಯಾಮ್ಸನ್​ಗೆ ಸಿಗುತ್ತಾ ಇಲ್ಲಿ ಚಾನ್ಸ್​​?

    ಶಾಕಿಂಗ್​ ರಿಸಲ್ಟ್​ ಕ್ರಿಕೆಟ್​ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ

ಟಿ20 ವಿಶ್ವಕಪ್​ನ ಹೈವೋಲ್ಟೆಜ್​ ಕದನಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಪಾಕ್​ ವಿರುದ್ಧದ ಯುದ್ಧ ಗೆಲ್ಲಲು ಟೀಮ್​ ಇಂಡಿಯಾ ಭರ್ಜರಿ ಸಮರಾಭ್ಯಾಸ ನಡೆಸಿದೆ. ಪ್ರತಿಷ್ಠೆಯ ಪಂದ್ಯದಲ್ಲಿ ಗೆಲುವೊಂದೇ ಗುರಿ ಅನ್ನೋದು ಕೋಚ್​-ಕ್ಯಾಪ್ಟನ್​ ಮಂತ್ರವಾಗಿದೆ. ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದ್ದು, ಪಾಕ್​​ ಪ್ಲಾನ್​ನ ಪಂಚರ್​ ಮಾಡಲು ಮಾಸ್ಟರ್​ ಪ್ಲಾನ್​ ರೆಡಿಯಾಗಿದೆ.

ಟಿ20 ವಿಶ್ವಕಪ್​ನ ಫೀವರ್​ ದಿನೇ ದಿನೇ ಜಾಸ್ತಿಯಾಗ್ತಿದೆ. ರೋಚಕ ಫೈಟ್​​ಗಳು, ಶಾಕಿಂಗ್​ ರಿಸಲ್ಟ್​ ಕ್ರಿಕೆಟ್​ ಪ್ರೇಮಿಗಳ ಕುತೂಹಲವನ್ನ ಹೆಚ್ಚಿಸ್ತಿವೆ. ಇದೀಗ ಇಡೀ ವಿಶ್ವವೇ ಕಾದು ಕುಳಿತಿರೋ ಹೈವೋಲ್ಟೆಜ್​ ಕದನಕ್ಕೆ ವೇದಿಕೆ ಸಜ್ಜಾಗಿದೆ. ಇಂದಿನ ಮೆಗಾ ಕದನದಲ್ಲಿ ಬದ್ಧವೈರಿಗಳಾದ ಇಂಡೋ -ಪಾಕ್​ ತಂಡಗಳು ಜಿದ್ದಾಜಿದ್ದಿನ ಹೋರಾಟ ನಡೆಸಲು ಸಜ್ಜಾಗಿವೆ.

ಇದನ್ನೂ ಓದಿ: T20 World Cup; ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಬರೆಯಲಿರೋ ಕಿಂಗ್ ಕೊಹ್ಲಿ.. ರೆಕಾರ್ಡ್ ಯಾವುದು?

ಪಾಕಿಸ್ತಾನದ​ ವಿರುದ್ಧ ಅಮೆರಿಕಗೆ ಗೆಲುವು.!

ಈ ಬಾರಿಯ ಟೂರ್ನಿಯಲ್ಲಿ ಕಪ್​ ಗೆಲ್ಲೋ ಫೇವರಿಟ್​​ ಆಗಿ ಕಣಕ್ಕಿಳಿದ ಪಾಕಿಸ್ತಾನ ತಂಡ ಸದ್ಯ ಹೀನಾಯ ಸ್ಥಿತಿ ತಲುಪಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಸೂಪರ್​ ಸ್ಟಾರ್​​ಗಳನ್ನೇ ಹೊಂದಿರುವ ಬಲಿಷ್ಠ ಪಾಕಿಸ್ತಾನ, ಅಮೆರಿಕದ ಆಟಕ್ಕೆ ಶರಣಾಗಿದೆ. ಯುಎಸ್​ಎ ಎದುರು ಬಾಬರ್​ ಬಳಗ ಹೀನಾಯವಾಗಿ ಸೋತಿರಬಹುದು. ಹಾಗಂತ ಟೀಮ್​ ಇಂಡಿಯಾ ರಿಲ್ಯಾಕ್ಸ್​​ ಆಗುವಂತಿಲ್ಲ. ಪಾಕ್ ಎಂದಿದ್ರೂ ಡೇಂಜರಸ್​ ತಂಡವೇ.​​ ಹೀಗಾಗಿ ಅಮೆರಿಕ ಎದುರು ಪಾಕ್​​ ಸೋತ ಬಳಿಕ ಭಾರತದ ಟೀಮ್​​ ಮ್ಯಾನೇಜ್​​​​​ಮೆಂಟ್​​ ಮತ್ತಷ್ಟು ಎಚ್ಚೆತ್ತುಕೊಂಡಿದೆ.

ಬದಲಾಗುತ್ತಾ ಟೀಮ್​ ಇಂಡಿಯಾ ಗೇಮ್​ಪ್ಲಾನ್​.?

ಪಾಕ್​ ವಿರುದ್ಧ ಕದನ ಟೀಮ್​ ಇಂಡಿಯಾ ಪಾಲಿಗೆ ಪ್ರತಿಷ್ಠೆಯ ಸಮರ. ಸೋಲು ಅನ್ನೋ ಪದವನ್ನ ಸಹಿಸಲು ಸಾಧ್ಯವಿಲ್ಲ. ಇಡೀ ದೇಶ ಭಾರತದ ಗೆಲುವಿಗೆ ಪ್ರಾರ್ಥನೆ ಮಾಡ್ತಿದ್ರೆ, ಇಡೀ ವಿಶ್ವ ಕುತೂಹಲದ ಕಣ್ಣಿನಿಂದ ಪಂದ್ಯವನ್ನ ನೋಡ್ತಿರುತ್ತೆ. ಯಾಮಾರೋವಂತೆ ಇಲ್ಲ. ಹೀಗಾಗಿಯೇ ನ್ಯೂಯಾರ್ಕ್​​ ಫ್ಲೈಟ್​ ಹತ್ತೋಕು ಮುನ್ನವೇ ಈ ಪಂದ್ಯಕ್ಕೆ ಸಿದ್ಧತೆ ಆರಂಭವಾಗಿತ್ತು. ಗೇಮ್​ಪ್ಲಾನ್​ ರೆಡಿಯಾಗಿತ್ತು. ಆದ್ರೆ, ಈಗ ಎಲ್ಲಾ ಲೆಕ್ಕಾಚಾರ ಬದಲಾಗಿದೆ. ಇಲ್ಲಿನ ಪ್ಲೇಯಿಂಗ್​ ಕಂಡೀಷನ್​, ಪಿಚ್​ ವರ್ತನೆ, ಪಂದ್ಯದ ರಿಸಲ್ಟ್​ಗಳನ್ನ ನೋಡಿ ಅದಕ್ಕಾಗಿ ಮಹತ್ವದ ನಿರ್ಧಾರ ಕೈಗೊಳ್ಳಲು ಟೀಮ್​ ಮ್ಯಾನೇಜ್​ಮೆಂಟ್​ ಮುಂದಾಗಿದೆ.

ಬ್ಯಾಟಿಂಗ್​ ಬಲ ಹೆಚ್ಚಿಸಲು ಮುಂದಾದ ಮ್ಯಾನೇಜ್​ಮೆಂಟ್​​.!

ನಸ್ಸೌ ಪಿಚ್​ ವರ್ತನೆ​ ಹಾಗೂ ಪಾಕ್​ನ ಫಲಿತಾಂಶ ನೋಡಿದ ಮೇಲೆ ತಂಡದ ಬ್ಯಾಟಿಂಗ್​ ಬಲ ಹೆಚ್ಚಿಸೋದು ಅನಿವಾರ್ಯ ಅನ್ನೋ ನಿರ್ಧಾರಕ್ಕೆ ಸದ್ಯ ಟೀಮ್​ ಇಂಡಿಯಾ ಬಂದಿದೆ. ಹೀಗಾಗಿ ಕಳಪೆ ಫಾರ್ಮ್​​​ ಸುಳಿಗೆ ಸಿಲುಕಿರುವ ಶಿವಂ ದುಬೆಗೆ ಕೊಕ್​ ಕೊಡೋ ಸಾಧ್ಯತೆ ದಟ್ಟವಾಗಿದೆ. ದುಬೆಗೆ ಗೇಟ್​ಪಾಸ್​​ ಕೊಟ್ಟು, ಸಂಜು ಸ್ಯಾಮ್ಸನ್​ಗೆ ಸ್ಥಾನ ಕಲ್ಪಿಸುವ ಚಿಂತನೆ ನಡೆಸಿದೆ. ಪಾಕ್​​ ತಂಡಕ್ಕೆ ಲೆಫ್ಟ್​ ಆರ್ಮ್​ ಪೇಸರ್​ಗಳಾದ ಮೊಹಮ್ಮದ್​ ಅಮೀರ್​, ಶಾಹೀನ್​ ಶಾ ಅಫ್ರಿದಿ ಬಲವಿದೆ. ಈ ಲೆಕ್ಕಾಚಾರದಲ್ಲೂ ಲೆಫ್ಟ್​ ಹ್ಯಾಂಡರ್​ ದುಬೆ ಬದಲು ರೈಟ್​​ ಹ್ಯಾಂಡರ್​ ಸಂಜುಗೆ ಚಾನ್ಸ್ ನಿಡೋದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಭಾರೀ ಮಳೆಯ ಮುನ್ಸೂಚನೆ.. ಜೂನ್ 11ರವರೆಗೆ ಅಲರ್ಟ್​ ಆಗಿರುವಂತೆ ಖಡಕ್ ವಾರ್ನಿಂಗ್

ಸ್ಪೆಷಲಿಸ್ಟ್​ ಸ್ಪಿನ್ನರ್​​ಗೆ ಮಣೆ ಹಾಕಲು ಪ್ಲಾನ್​ ಸಿದ್ಧ.!

ಐರ್ಲೆಂಡ್​ ಎದುರಿನ ಮೊದಲ ಪಂದ್ಯದಲ್ಲಿ ಇಬ್ಬರು ಸ್ಪಿನ್ ಆಲ್​ರೌಂಡರ್ಸ್​​, ಮೂವರು ವೇಗಿಗಳು ಬಲದೊಂದಿಗೆ ಟೀಮ್​ ಇಂಡಿಯಾ ಕಣಕ್ಕಿಳಿದಿತ್ತು. ಆದ್ರೆ, ಪಾಕ್​ ವಿರುದ್ಧ ಪ್ಲಾನ್​ ಬದಲಾಗೋ ಸಾಧ್ಯತೆಯಿದೆ. ಅಕ್ಷರ್​ ಪಟೇಲ್​ನ ಡ್ರಾಪ್​ ಮಾಡಿ ಕುಲ್​ದೀಪ್​ ಯಾದವ್​ಗೆ ಚಾನ್ಸ್​ ನೀಡೋ ಯೋಚನೆ ನಡೆದಿದೆ. ಹೀಗಾದ್ರೆ, ರವೀಂದ್ರ ಜಡೇಜಾ, ಕುಲ್​ದೀಪ್​ ಯಾದವ್​ ಸ್ಪಿನ್​ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಹಾರ್ದಿಕ್​ ಪಾಂಡ್ಯ ಸೇರಿದ್ರೆ, ನಾಲ್ವರ ವೇಗಿಗಳ ಬಲವೂ ತಂಡಕ್ಕೆ ಸಿಗಲಿದೆ.

ಇದನ್ನೂ ಓದಿ: TDP, JDUಗೆ ಸಿಂಹಪಾಲು ಸಿಗಲಿದೆಯಾ.. ಮೋದಿ ಜೊತೆ ಇಂದು ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸ್ತಾರೆ?

ಹೈವೋಲ್ಟೆಜ್​ ಕದನಕ್ಕೂ ಮುನ್ನ ಟೀಮ್​ ಇಂಡಿಯಾದಲ್ಲಿ ತಂತ್ರ-ರಣತಂತ್ರದ ಲೆಕ್ಕಾಚಾರ ಜೋರಾಗಿದೆ. ಬದಲಾವಣೆ ಮಾಡಲಿ, ಬಿಡಲಿ. ಪರ್ಫೆಕ್ಟ್​​ ಪ್ಲಾನ್​ನೊಂದಿಗೆ ರೋಹಿತ್​ ಪಡೆ ಕಣಕ್ಕಿಳಿದು ಪಂದ್ಯದಲ್ಲಿ ಗೆದ್ದು ಬರಲಿ ಅನ್ನೋದು ಇಡೀ ದೇಶದ ಪ್ರಾರ್ಥನೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪಾಕ್​​ ಪ್ಲಾನ್​ ಪಂಚರ್​ ಮಾಡಲು ಮಾಸ್ಟರ್​ ಪ್ಲಾನ್​.. ರೋಹಿತ್- ರಾಹುಲ್​ ಬಳಿ ಇರೋ ಬ್ರಹ್ಮಾಸ್ತ್ರ​ಗಳೇನು?

https://newsfirstlive.com/wp-content/uploads/2024/06/ROHIT_VIRAT.jpg

Load More