/newsfirstlive-kannada/media/post_attachments/wp-content/uploads/2024/06/VIRAT_KOHLI-11.jpg)
ಭಾರತ-ಪಾಕಿಸ್ತಾನ ಕ್ರಿಕೆಟ್ ಲೋಕದ ಬದ್ಧ ವೈರಿಗಳು. ಈಗಾಗಲೇ ಈ ಪರಮವೈರಿಗಳ ಕಾದಾಟಕ್ಕೆ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಪಾಕಿಸ್ತಾನದ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ​ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವಿಶ್ವ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಈ ದಾಖಲೆಯನ್ನು ಕೇವಲ ಪಾಕ್ ವಿರುದ್ಧ ಮಾತ್ರ ಕೊಹ್ಲಿ ನಿರ್ಮಿಸುತ್ತಿರುವ ಮಹತ್ತರ ರೆಕಾರ್ಡ್ ಆಗಿದೆ. ಸದ್ಯ ಈ ರೆಕಾರ್ಡ್ ಯಾವುದೆಂದು ಇಲ್ಲಿ ವಿವರ ಕೊಡಲಾಗಿದೆ.
ಇದನ್ನೂ ಓದಿ: ನಾಳೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ರೆ ಕ್ಯಾಪ್ಟನ್ ಯಾರು.. ಪಾಂಡ್ಯನಾ, ವಿರಾಟ್ ಕೊಹ್ಲಿನಾ?
ಪಾಕಿಸ್ತಾನದ ತಂಡದ ವಿರುದ್ಧ ಇಲ್ಲಿವರೆಗೆ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ಬ್ಯಾಟ್ಸ್​ಮನ್ ಮಹೇಲಾ ಜಯವರ್ಧನೆ ಮೊದಲನೇಯವರು ಆಗಿದ್ದಾರೆ. ಜಯವರ್ಧನೆ ಒಟ್ಟು 31 ಇನ್ನಿಂಗ್ಸ್​​ನಲ್ಲಿ 111 ಬೌಂಡರಿಗಳನ್ನು ಬಾರಿಸಿ ರೆಕಾರ್ಡ್ ಮಾಡಿದ್ದಾರೆ. ಸದ್ಯ ಈ ದಾಖಲೆಯನ್ನು ಹಿಂದಿಕ್ಕುವಲ್ಲಿ ಕಿಂಗ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ ನಾಳೆ ನಡೆಯುವ ಪಂದ್ಯದಲ್ಲಿ 9 ಫೋರ್​​ಗಳನ್ನು ವಿರಾಟ್ ಬಾರಿಸಿದರೆ ಪಾಕ್ ವಿರುದ್ಧ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿರುವ ಹೆಸರಲ್ಲಿ ಮೊದಲಿಗರು ಆಗಲಿದ್ದಾರೆ.
ಇದನ್ನೂ ಓದಿ:ಪಾಕ್ ವಿರುದ್ಧ ಟೀಮ್ ಇಂಡಿಯಾ ಎಷ್ಟು T20 ವಿಶ್ವಕಪ್ ಪಂದ್ಯಗಳನ್ನ ಗೆದ್ದಿದೆ.. ಡ್ರಾ ಆಗಿದ್ದು ಯಾವ ಪಂದ್ಯ?
/newsfirstlive-kannada/media/post_attachments/wp-content/uploads/2024/06/VIRAT_KOHLI_PAK.jpg)
ಅಂದರೆ ಇಲ್ಲಿವರೆಗೆ ವಿರಾಟ್ ಕೊಹ್ಲಿ ಪಾಕ್​ ವಿರುದ್ಧ 103 ಬೌಂಡರಿಗಳನ್ನು ಬಾರಿಸಿದ್ದಾರೆ. ಇನ್ನು 9 ಫೋರ್​ಗಳನ್ನು ಹೊಡೆದರಿ ಒಟ್ಟು 112 ಫೋರ್ ಬಾರಿಸಿದಂತೆ ಆಗುವುದರಿಂದ ಕೊಹ್ಲಿ, ಜಯವರ್ಧನೆ ದಾಖಲೆಯನ್ನು ಬ್ರೇಕ್​ ಆದಂತೆ ಆಗುತ್ತದೆ. ಹೀಗಾಗಿ ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 9 ಫೋರ್​ಗಳನ್ನು ಬಾರಿಸಿದರೆ ರೆಕಾರ್ಡ್ ಮಾಡಿದಂತೆ ಆಗುತ್ತದೆ. 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನ ಪಂದ್ಯದಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದ್ದಾಗ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ​ ಅಜೇಯ 82 ರನ್​ ಬಾರಿಸಿ ಪಾಕ್ ಅನ್ನು ಸೋಲಿಸಿದ್ದರು. ಹೀಗಾಗಿ ಅಂದಿನ ವಿರಾಟ್​ ಬ್ಯಾಟಿಂಗ್​ ಮತ್ತೆ ಮರುಕಳಿಸುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us