newsfirstkannada.com

ನಾಳೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ರೆ ಕ್ಯಾಪ್ಟನ್ ಯಾರು.. ಪಾಂಡ್ಯನಾ, ವಿರಾಟ್ ಕೊಹ್ಲಿನಾ?

Share :

Published June 8, 2024 at 6:42pm

    USನ ನಸ್ಸೌ ಕೌಂಟಿಯಲ್ಲಿ ಪ್ರಾಕ್ಟೀಸ್ ವೇಳೆ ರೋಹಿತ್​ಗೆ ಏನಾಯಿತು?

    ಈಗಾಗಲೇ ಐರ್ಲೆಂಡ್ ವಿರುದ್ಧ ಮ್ಯಾಚ್ ಗೆದ್ದುಕೊಂಡಿರುವ ಭಾರತ

    ಹೈವೋಲ್ಟೇಜ್ ಪಂದ್ಯದಲ್ಲಿ ಭಾರತದ ನಾಯಕ ಆಗುವವರು ಯಾರು?

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಭ್ಯಾಸ ಮಾಡುವ ವೇಳೆ ಎಡಗೈನ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್​​ಗೆ ಪಂದ್ಯದಲ್ಲಿ ಆಡುತ್ತಾರಾ, ಇಲ್ವಾ ಎನ್ನುವ ಅನುಮಾನ ಕಾಡುತ್ತಿದೆ. ಏಕೆಂದರೆ ಐರ್ಲೆಂಡ್ ವಿರುದ್ಧ ಮೊದಲ ಮ್ಯಾಚ್ ಆಡುವಾಗ ಕ್ರೀಸ್​ನಲ್ಲಿ ಬ್ಯಾಟಿಂಗ್ ಮಾಡುವಾಗ ಭುಜದ ನೋವಿನಿಂದ ಹಿಟ್​ಮ್ಯಾನ್ ಹೊರ ನಡೆದಿದ್ದರು. ಆದರೆ ಇಂದು ನೆಟ್ಸ್​​ನಲ್ಲಿ ಪ್ರಾಕ್ಟೀಸ್ ಮಾಡುವಾಗ ಮತ್ತೆ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿರುವುದು ಮತ್ತೆ ತಂಡಕ್ಕೆ ದೊಡ್ಡ ಆತಂಕ ಮೂಡಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಬ್ಯೂಟಿ ಕೃತಿ ಶೆಟ್ಟಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ ಅಂದಿದ್ದೇಕೆ ವಿಜಯ್ ಸೇತುಪತಿ; ಸೀಕ್ರೆಟ್ ರಿವೀಲ್‌!

ಇಂಡಿಯಾ-ಪಾಕ್​ ನಡುವಿನ ಪಂದ್ಯಕ್ಕೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ದರೇ ಉಪನಾಯಕ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿ ಮುಂದುವರೆಯೋ ಸಾಧ್ಯತೆ ಇದೆ. ನೆಟ್ಸ್​​ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದ ರೋಹಿತ್ ಹೆಬ್ಬೆರಳಿಗೆ ಗಾಯವಾಗಿದ್ದು, ತಕ್ಷಣ ಸ್ಥಳಕ್ಕೆ ಬಂದ ವೈದ್ಯಕೀಯ ತಂಡ ರೋಹಿತ್ ಶರ್ಮಾ ಹೆಬ್ಬೆರಳಿಗೆ ಚಿಕಿತ್ಸೆ ನೀಡಿದ್ದಾರೆ. ಇದರಿಂದ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಬೆರಳು ಸ್ವಲ್ಪ ಊದಿಕೊಂಡಿದೆ. ಆದರೆ ಪಾಕ್ ವಿರುದ್ಧದ ಪಂದ್ಯದ ವೇಳೆಗೆ ಈ ಗಾಯದ ನೋವು ಸಂಪೂರ್ಣವಾಗಿ ಕ್ಷೀಣಿಸಿದರೆ ಮಾತ್ರ ಅವರು ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಪಂದ್ಯಕ್ಕೆ ಅಲಭ್ಯರಾದರೆ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ? ನಾಳೆ ಮ್ಯಾಚ್ ನಡೆಯದಿದ್ರೆ ಏನ್ ಆಗುತ್ತೆ?

ಅಮೆರಿಕದ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಭಾರತ- ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಾಳೆ ನಡೆಯಲಿದೆ. ಇದಕ್ಕಾಗಿ 2 ಕಡೆಯ ಪ್ಲೇಯರ್ಸ್​ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಪಡೆ ಒಂದು ಪಂದ್ಯ ಐರ್ಲೆಂಡ್ ವಿರುದ್ಧ ಗೆದ್ದುಕೊಂಡಿದೆ. ಅತ್ತ ಬಾಬರ್ ಸೇನೆ ಅಮೆರಿಕ ವಿರುದ್ಧ ನೆಲಕಚ್ಚಿ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಹೀಗಿರುವಾಗ ನಾಳೆ ರಾತ್ರಿ 8 ಗಂಟೆಗೆ ನಡೆಯುವ ಭಾರತ ಜೊತೆಗಿನ ಪಂದ್ಯ ಪಾಕಿಸ್ತಾನಕ್ಕೆ ಪ್ರಮುಖವಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾಳೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ರೆ ಕ್ಯಾಪ್ಟನ್ ಯಾರು.. ಪಾಂಡ್ಯನಾ, ವಿರಾಟ್ ಕೊಹ್ಲಿನಾ?

https://newsfirstlive.com/wp-content/uploads/2024/06/ROHIT_VIRAT_PANDYA.jpg

Load More