/newsfirstlive-kannada/media/post_attachments/wp-content/uploads/2024/06/IND-VS-SA-3.jpg)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಫೈನಲ್ ಪಂದ್ಯವು ಇಂದು ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಭಾರತದಲ್ಲಿ ವೀಕ್ಷಿಸುವ ಕ್ರಿಕೆಟ್ ಪ್ರೇಮಿಗಳು ಕೆಲವು ಥಿಯೇಟರ್​​ಗಳಲ್ಲೂ ರೋಚಕ ಪಂದ್ಯವನ್ನು ವೀಕ್ಷಿಸಬಹುದು.
PVR INOX ಕ್ರಿಕೆಟ್ ಅಭಿಮಾನಿಗಳಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ. PVR INOX ಲಿಮಿಟೆಡ್ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯಗಳನ್ನು ನೇರ ಪ್ರಸಾರ ಮಾಡಲು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಜೊತೆ ಪಾಲುದಾರಿಕೆ ಹೊಂದಿದೆ. ಅಂತೆಯೇ PVR INOX ದೇಶದಾದ್ಯಂತ 45 ಕ್ಕೂ ಹೆಚ್ಚು ನಗರಗಳಲ್ಲಿ 121 ಥಿಯೇಟರ್‌ಗಳಲ್ಲಿ ವಿಶ್ವಕಪ್ ಫೈನಲ್ ಪಂದ್ಯವನ್ನೂ ವೀಕ್ಷಣೆ ಮಾಡಬಹುದು.
ಇದನ್ನೂ ಓದಿ:ಫೈನಲ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ Congratulations ಹೇಳಿದ ಬಾಲಿವುಡ್ ಸ್ಟಾರ್​..!
/newsfirstlive-kannada/media/post_attachments/wp-content/uploads/2024/06/SA_IND_WPRLD_CUP.jpg)
ಎಲ್ಲೆಲ್ಲಿ ನೋಡಬಹುದು..?
ಕೋಲ್ಕತ್ತಾ, ಅಹಮದಾಬಾದ್, ಪುಣೆ, ಜೈಪುರ, ಇಂದೋರ್, ವಡೋದರಾ, ಸೂರತ್, ಗುವಾಹಟಿ, ಗೋವಾ, ನಾಗ್ಪುರ, ಲಕ್ನೋ, ಚಂಡೀಗಢ ಮತ್ತು ಮುಂಬೈ, ದೆಹಲಿ NCR, ತಿರುವನಂತಪುರಂನ PVR ಐನಾಕ್ಸ್ ಥಿಯೇಟರ್‌ಗಳಲ್ಲಿ ಫೈನಲ್ ಪಂದ್ಯದ ಪ್ರಸಾರ ಆಗಲಿದೆ. ಅದಕ್ಕಾಗಿ ನೀವು ಬುಕ್ ಮೈ ಶೋಗೆ ಹೋಗಿ ಟಿಕೆಟ್ ಬುಕ್ ಮಾಡಬಹುದು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us