/newsfirstlive-kannada/media/post_attachments/wp-content/uploads/2024/06/GANGULY-1.jpg)
ಈ ಬಾರಿಯ ಟಿ20 ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ ಅವರ ಕಳಪೆ ಬ್ಯಾಟಿಂಗ್ ತಂಡಕ್ಕೆ ದೊಡ್ಡ ಚಿಂತೆಯನ್ನುಂಟು ಮಾಡಿದೆ. ಕೊಹ್ಲಿ ಟಿ20 ವಿಶ್ವಕಪ್​​ನ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದಾರೆ.
ಅಂದರೆ ಅವರ ಸರಾರಿ ರನ್​ 11ಕ್ಕಿಂತ ಕಡಿಮೆಯಾಗಿದೆ. 7 ಇನ್ನಿಂಗ್ಸ್‌ನಲ್ಲಿ 5 ಬಾರಿ ಎರಡಂಕಿ ದಾಟಲು ವಿಫಲರಾಗಿದ್ದಾರೆ. ಇದೆಲ್ಲದರ ನಡುವೆಯೂ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಕೊಹ್ಲಿಗೆ ಬೆಂಬಲ ನೀಡಿದ್ದಾರೆ. ಫಾರ್ಮ್ ಏನೇ ಇರಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯದಲ್ಲೂ ಕೊಹ್ಲಿ ರೋಹಿತ್ ಶರ್ಮಾ ಜೊತೆ ಬ್ಯಾಟಿಂಗ್ ಮಾಡಲು ಬರಬೇಕು ಎಂದು ಪ್ರತಿಪಾದಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/02/GANGULY-5.jpg)
ಕೊಹ್ಲಿ ಅವರನ್ನು ಬೆಂಬಲಿಸಿ ಮಾತನಾಡಿರುವ ಗಂಗೂಲಿ.. ವಿರಾಟ್ ಕೊಹ್ಲಿ ಓಪನಿಂಗ್ ಮುಂದುವರಿಸಬೇಕು. ಕೊಹ್ಲಿ ಕೂಡ ಮನುಷ್ಯ, ಕೆಲವೊಮ್ಮೆ ಅವನೂ ವಿಫಲನಾಗುತ್ತಾನೆ. ಈ ವೈಫಲ್ಯವನ್ನು ಹೇಗೆ ಒಪ್ಪಿಕೊಳ್ಳಬೇಕು ಎಂದು ನಿಮಗೆ ತಿಳಿದಿರಬೇಕು. ಕೊಹ್ಲಿ, ಸಚಿನ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ಆಟಗಾರರು ಭಾರತೀಯ ಕ್ರಿಕೆಟ್ ಅನ್ನು ದುರ್ಬಲ ಮಾಡಲು ಸಾಧ್ಯವಿಲ್ಲ. ಫೈನಲ್​ನಲ್ಲೂ ನಾವು ಅವರ ಮೇಲೆ ವಿಶ್ವಾಸ ಇಡಬೇಕು ಎಂದಿದ್ದಾರೆ ದಾದ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್​​ನಲ್ಲಿದ್ದರೂ ಗಂಗೂಲಿ ಕೊಹ್ಲಿ ಪರವೇ ಬ್ಯಾಟ್ ಬೀಸಿದ್ದಾರೆ. ಕೊಹ್ಲಿ ಬದಲಾಗಿ ಯಶಸ್ವಿ ಜೈಸ್ವಾಲ್​​ ಅವರನ್ನು ಕಣಕ್ಕೆ ಇಳಿಸಬೇಕು ಅನ್ನೋ ವಾದಗಳ ನಡುವೆ ಗಂಗೂಲಿ ಹೇಳಿಕೆ ಹಲವರಿಗೆ ಅಚ್ಚರಿ ತಂದಿದೆ.
ಇದನ್ನೂ ಓದಿ:ಫೈನಲ್ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ Congratulations ಹೇಳಿದ ಬಾಲಿವುಡ್ ಸ್ಟಾರ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us