Advertisment

ind vs zim; T20 ಮ್ಯಾಚ್ ರದ್ದಾಗುತ್ತಾ..? ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?

author-image
Bheemappa
Updated On
ind vs zim; T20 ಮ್ಯಾಚ್ ರದ್ದಾಗುತ್ತಾ..? ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?
Advertisment
  • ಇಂದು ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರನೇ ಪಂದ್ಯ
  • 2ನೇ ಪಂದ್ಯದಲ್ಲಿ ಸಿಡಿಲಬ್ಬರದ ಸೆಂಚುರಿ ಬಾರಿಸಿದ್ದ ಅಭಿಷೇಕ್
  • ಜಿಂಬಾಬ್ವೆ ವಿರುದ್ಧ ಇನ್ನು ಎಷ್ಟು ಪಂದ್ಯಗಳನ್ನ ಭಾರತ ಆಡಲಿದೆ?

ಭಾರತ ಹಾಗೂ ಜಿಂಬಾಬ್ವೆ ನಡುವಿನ 5 ಪಂದ್ಯಗಳ T20 ಸರಣಿ ಹರಾರೆಯ ಸ್ಪೋರ್ಟ್ಸ್​ ಕ್ಲಬ್​​ನಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಈ ಸರಣಿಯಲ್ಲಿ ಎರಡು ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಇನ್ನೇನು ಕೆಲವೇ ಕ್ಷಣದಲ್ಲಿ 3ನೇ T20 ಪಂದ್ಯ ನಡೆಯಲಿದೆ. ಈ ಮ್ಯಾಚ್​ಗೆ ಮಳೆ ಅಡ್ಡಿಯಾಗಬಹುದಾ ಅಥವಾ ಇಲ್ವಾ ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.

Advertisment

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

2ನೇ ಪಂದ್ಯದಲ್ಲಿ ಶುಭ್​​ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದಿದೆ. ರುತುರಾಜ್ ಗಾಯಕ್ವಾಡ್ ಹಾಗೂ ಅಭಿಷೇಕ್ ಶರ್ಮಾ ಅವರ ಅತ್ಯದ್ಭುತವಾದ ಬ್ಯಾಟಿಂಗ್ ಜೆಂಬಾಬ್ವೆ ಪಡೆಯಲ್ಲಿ ಭಯ ಹುಟ್ಟಿಸಿದೆ. ಹರಾರೆ ಪಿಚ್ ಬೌನ್ಸ್ ಹಾಗೂ ಡಬಲ್ ಪೇಸ್ಡ್ ಮೂವ್‌ಮೆಂಟ್‌ ಹೊಂದಿದೆ. ಹೀಗಾಗಿ ಆರಂಭದಲ್ಲಿ ರನ್​​ಗಳಿಸಲು ಕಠಿಣವಾಗಿರುತ್ತದೆ. ಬಾಲ್ ಹಳೆಯದಾಗಿದ್ದರೆ ರನ್​ಗಳಿಕೆ ಹಾಗೂ ಬೌಂಡರಿಗಳನ್ನು ಹೊಡೆಯಬಹುದಾಗಿದೆ.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

Advertisment

publive-image

ಜಿಂಬಾಬ್ವೆ ಹಾಗೂ ಭಾರತದ 3ನೇ ಪಂದ್ಯಕ್ಕೆ ಮಳೆ ಅಡ್ಡಿಯುವಂಟು ಮಾಡುತ್ತದೆ ಎಂದು ನೋಡುವುದಾದರೆ, ಹರಾರೆಯಲ್ಲಿ ಹವಾಮಾನ ಬಿಸಿಲಿನಿಂದ ಕೂಡಿರುತ್ತದೆ. ತಾಪಮಾನವು ಗರಿಷ್ಠ 26C ವರೆಗೆ ಇರುತ್ತದೆ. ಮಳೆಯ ಅಡ್ಡಿ, ಆತಂಕ ಏನು ಇರುವುದಿಲ್ಲ. ಸ್ಟೇಡಿಯಂ ಸುತ್ತ ಸ್ಪಷ್ಟ ಬಿಸಿಲಿದ್ದು ಮಳೆಯ ಮುನ್ಸೂಚನೆ ಇಲ್ಲವೇ ಇಲ್ಲ. ಪಂದ್ಯ ಪೂರ್ಣ ಪ್ರಮಾಣದಲ್ಲಿ ಎಂದಿನಂತೆ ನಡೆಯುತ್ತದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment